ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ (GUMUL) ಖಾಲಿ ಇರುವ ಒಟ್ಟು 50 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಒಕ್ಕೂಟದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ (ಜೂನ್ 27, 2026) ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು.
ಹುದ್ದೆಗಳಿಗೆ ಅನುಸಾರವಾಗಿ ಅಗತ್ಯವಿರುವ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ಮತ್ತು ಆಯ್ಕೆ ಪ್ರಕ್ರಿಯೆ ಸೇರಿದಂತೆ ಮುಂತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಹಾಗೂ ಸರಿಯಾಗಿ ಓದಿ, ತದನಂತರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (GUMUL)
- ವೇತನ ಶ್ರೇಣಿ: 34,100 ರೂ. ನಿಂದ 1,55,200 ರೂ. ವರೆಗೆ
- ಹುದ್ದೆಗಳ ಸಂಖ್ಯೆ: ಒಟ್ಟು 50 ಹುದ್ದೆಗಳು
- ಉದ್ಯೋಗ ಸ್ಥಳ: ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳು (ಕರ್ನಾಟಕ)
KMF GUMUL Recruitment 2026 ಹುದ್ದೆಗಳ ವಿವರ:
ಒಟ್ಟು 55 ಹುದ್ದೆಗಳು:
- ಸಾಮಾನ್ಯ ನೇಮಕಾತಿಯ ಒಟ್ಟು ಹುದ್ದೆಗಳು: 50
- ಬ್ಯಾಕಲಾಗ್ ನೇಮಕಾತಿಯ ಒಟ್ಟು ಹುದ್ದೆಗಳು: 05
05 ಬ್ಯಾಕಲಾಗ್ ಹುದ್ದೆಗಳ ವಿವರ:
- ಸಹಾಯಕ ವ್ಯವಸ್ಥಾಪಕರು (ಪ.ವೈ) – 02 ಹುದ್ದೆಗಳು
- ಖರೀದೀ/ಉಗ್ರಾಣ ಅಧಿಕಾರಿ – 01 ಹುದ್ದೆ
- ಹಿರಿಯ ಕೆಮಿಸ್ಟ್ – 01 ಹುದ್ದೆ
- ಕಿರಿಯ ತಾಂತ್ರಿಕರು (ಎಂಆರ್ಎಸಿ) – 01 ಹುದ್ದೆ
ಸಾಮಾನ್ಯ ನೇಮಕಾತಿ ವಿವರ:
- ಸಹಾಯಕ ವ್ಯವಸ್ಥಾಪಕರು (ಪ.ವೈ) – 04 ಹುದ್ದೆಗಳು
- ಲೆಕ್ಕಾಧಿಕಾರಿ – 01 ಹುದ್ದೆ
- ತಾಂತ್ರಿಕ ಅಧಿಕಾರಿ (ಡಿ.ಟಿ) – 01 ಹುದ್ದೆ
- ಖರೀದೀ/ಉಗ್ರಾಣ ಅಧಿಕಾರಿ – 01 ಹುದ್ದೆ
- ಹಿರಿಯ ಕೆಮಿಸ್ಟ್ – 02 ಹುದ್ದೆಗಳು
- ಡೈರಿ ಸೂಪರ್ವೈಸರ್ ದರ್ಜೆ-2 (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಆರ್ಎಸಿ, ಸಿವಿಲ್) – 05 ಹುದ್ದೆಗಳು
- ವಿಸ್ತರಣಾಧಿಕಾರಿ ದರ್ಜೆ-3 – 13 ಹುದ್ದೆಗಳು
- ಆಡಳಿತ ಸಹಾಯಕ ದರ್ಜೆ-3 – 06 ಹುದ್ದೆಗಳು
- ಲೆಕ್ಕ ಸಹಾಯಕ ದರ್ಜೆ-3 – 10 ಹುದ್ದೆಗಳು
- ಮಾರುಕಟ್ಟೆ ಸಹಾಯಕ ದರ್ಜೆ-3 – 12 ಹುದ್ದೆಗಳು
- ಕಿರಿಯ ತಾಂತ್ರಿಕರು (ಫಿಟ್ಟರ್, ಎಲೆಕ್ಟ್ರಿಕಲ್, ಬಾಯ್ಲರ್, ಎಂಆರ್ಎಸಿ) – 04 ಹುದ್ದೆಗಳು
ವೇತನ ಶ್ರೇಣಿ:
- ಸಹಾಯಕ ವ್ಯವಸ್ಥಾಪಕರು: 83,700 – 1,55,200 ರೂ.
- ಲೆಕ್ಕಾಧಿಕಾರಿ, ತಾಂತ್ರಿಕ ಅಧಿಕಾರಿ, ಖರೀದೀ ಅಧಿಕಾರಿ: 69,250 – 1,34,200 ರೂ.
- ಹಿರಿಯ ಕೆಮಿಸ್ಟ್: 65,950 – 1,24,900 ರೂ.
- ಡೈರಿ ಸೂಪರ್ವೈಸರ್ ಹಾಗೂ ವಿಸ್ತರಣಾಧಿಕಾರಿ: 54,175 – 99,400 ರೂ.
- ಆಡಳಿತ, ಲೆಕ್ಕ, ಮಾರುಕಟ್ಟೆ ಸಹಾಯಕರು ಹಾಗೂ ಕಿರಿಯ ತಾಂತ್ರಿಕರು: 34,100 – 67,600 ರೂ.
GUMUL Recruitment 2026 ಶೈಕ್ಷಣಿಕ ಅರ್ಹತೆ:
- ಸಹಾಯಕ ವ್ಯವಸ್ಥಾಪಕರು: ಬಿ.ವಿ.ಎಸ್.ಸಿ. (B.V.Sc) ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ.
- ಲೆಕ್ಕಾಧಿಕಾರಿ: ಪ್ರಥಮ ದರ್ಜೆಯಲ್ಲಿ ಎಂ.ಕಾಂ ಜೊತೆಗೆ ಸಿ.ಎ/ಐ.ಸಿ.ಡಬ್ಲ್ಯೂ.ಎ.ಐ, ಟ್ಯಾಲಿ ಜ್ಞಾನ ಹಾಗೂ 3 ವರ್ಷಗಳ ಅನುಭವ.
- ತಾಂತ್ರಿಕ ಅಧಿಕಾರಿ: ಬಿ.ಟೆಕ್ (ಡಿಟಿ) / ಬಿ.ಎಸ್.ಸಿ (ಡಿಟಿ) ಪದವಿ ಹಾಗೂ 2 ವರ್ಷದ ಅನುಭವ.
- ಖರೀದೀ ಅಧಿಕಾರಿ: ಪ್ರಥಮ ದರ್ಜೆಯಲ್ಲಿ ಬಿ.ಕಾಂ/ಬಿ.ಬಿ.ಎಂ ಜೊತೆಗೆ ಪಿ.ಜಿ.ಡಿ.ಎಂ.ಎಂ ಅಥವಾ ಎಂ.ಬಿ.ಎ (ಮೆಟೀರಿಯಲ್ಸ್) ಹಾಗೂ 2 ವರ್ಷದ ಅನುಭವ.
- ಹಿರಿಯ ಕೆಮಿಸ್ಟ್: ಪ್ರಥಮ ದರ್ಜೆಯಲ್ಲಿ ಬಿ.ಎಸ್.ಸಿ (ಕೆಮಿಸ್ಟ್ರಿ/ಮೈಕ್ರೋಬಯಾಲಜಿ) ಹಾಗೂ 2 ವರ್ಷದ ಅನುಭವ.
- ಡೈರಿ ಸೂಪರ್ವೈಸರ್: ಸಂಬಂಧಪಟ್ಟ ವಿಭಾಗದಲ್ಲಿ ಡಿಪ್ಲೋಮಾ ಹಾಗೂ 2 ವರ್ಷಗಳ ಅನುಭವ.
- ವಿಸ್ತರಣಾಧಿಕಾರಿ: ಯಾವುದೇ ಪದವಿಯಲ್ಲಿ ಪ್ರಥಮ ದರ್ಜೆ ಉತ್ತೀರ್ಣ ಹಾಗೂ ಕಂಪ್ಯೂಟರ್ ಜ್ಞಾನ.
- ಆಡಳಿತ ಸಹಾಯಕ: ಯಾವುದೇ ಪದವಿಯಲ್ಲಿ ದ್ವಿತೀಯ ದರ್ಜೆ ಉತ್ತೀರ್ಣ ಹಾಗೂ ಕಂಪ್ಯೂಟರ್ ಜ್ಞಾನ.
- ಲೆಕ್ಕ ಸಹಾಯಕ: ದ್ವಿತೀಯ ದರ್ಜೆಯಲ್ಲಿ ಬಿ.ಕಾಂ ಪದವಿ ಹಾಗೂ ಟ್ಯಾಲಿ ಜ್ಞಾನ.
- ಮಾರುಕಟ್ಟೆ ಸಹಾಯಕ: ದ್ವಿತೀಯ ದರ್ಜೆಯಲ್ಲಿ ಬಿ.ಬಿ.ಎಂ/ಬಿ.ಬಿ.ಎ ಹಾಗೂ ಕಂಪ್ಯೂಟರ್ ಜ್ಞಾನ.
- ಕಿರಿಯ ತಾಂತ್ರಿಕರು: ಎಸ್ಎಸ್ಎಲ್ಸಿ, ಐಟಿಐ ಜೊತೆಗೆ ಅಪ್ರೆಂಟಿಸ್ ಸರ್ಟಿಫಿಕೇಟ್ ಹಾಗೂ 2 ವರ್ಷದ ಅನುಭವ (ಬಾಯ್ಲರ್ ಹುದ್ದೆಗೆ ಬಾಯ್ಲರ್ ಅಟೆಂಡೆಂಟ್ ಪ್ರಮಾಣಪತ್ರ ಕಡ್ಡಾಯ).
ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಈ ಕೇಳಗಿನಂತೆ ಗರಿಷ್ಠ ವಯೋಮಿತಿ ನಿಗದಿ.
ವಯೋಮಿತಿ ಸಡಿಲಿಕೆ: (ಸರ್ಕಾರದ ವಿಶೇಷ ಆದೇಶದನ್ವಯ ಎಲ್ಲಾ ವರ್ಗದವರಿಗೂ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಿ ಕೆಳಗಿನ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ):
- ಸಾಮಾನ್ಯ ಅಭ್ಯರ್ಥಿಗಳು (GM): 40 ವರ್ಷಗಳು
- OBC ಅಭ್ಯರ್ಥಿಗಳು (2A, 2B, 3A, 3B): 43 ವರ್ಷಗಳು
- SC/ST ಹಾಗೂ ಪ್ರವರ್ಗ-1 ಅಭ್ಯರ್ಥಿಗಳು: 45 ವರ್ಷಗಳು
- PwBD ಅಭ್ಯರ್ಥಿಗಳು: 10 ವರ್ಷಗಳ ಹೆಚ್ಚುವರಿ ಸಡಿಲಿಕೆ (ಮಾಜಿ ಸೈನಿಕರು ಹಾಗೂ ವಿಧವೆಯರಿಗೂ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ).
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳಿಗೆ 200 ಅಂಕಗಳ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯ ಅಂಕಗಳನ್ನು ಶೇ. 85ಕ್ಕೆ ಇಳಿಸಿ, ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ 15 ಅಂಕಗಳ ಮೌಖಿಕ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು.
ಅರ್ಜಿ ಶುಲ್ಕ:
- ಸಾಮಾನ್ಯ ಅರ್ಹತೆ ಹಾಗೂ OBC ವರ್ಗದ ಅಭ್ಯರ್ಥಿಗಳಿಗೆ: 1000 ರೂ. (+ ಗೇಟ್ವೇ ಶುಲ್ಕ)
- SC/ST, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ: 500 ರೂ. (+ ಗೇಟ್ವೇ ಶುಲ್ಕ)
ಪಾವತಿಸುವ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಆನ್ಲೈನ್ (Internet Banking) ಮೂಲಕ ಮಾತ್ರ ಪಾವತಿಸಬೇಕು (ಡಿಡಿ, ಪೋಸ್ಟಲ್ ಆರ್ಡರ್ ಅಥವಾ ಮನಿ ಆರ್ಡರ್ ಸ್ವೀಕರಿಸಲಾಗುವುದಿಲ್ಲ).
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29-05-2026
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 27-06-2026 (ರಾತ್ರಿ 23.59 ಗಂಟೆಯವರೆಗೆ)
KMF GUMUL Recruitment 2026 Link ಮತ್ತು ಪ್ರಮುಖ ಲಿಂಕ್’ಗಳು:
- ಅಧಿಸೂಚನೆ: ಡೌನ್’ಲೋಡ್
- ಆನ್ಲೈನ್ ಅರ್ಜಿ (ಸಾಮಾನ್ಯ ಹುದ್ದೆಗಳಿಗೆ): Apply ಮಾಡಿ
- ಆನ್ಲೈನ್ ಅರ್ಜಿ (ಬ್ಯಾಕಲಾಗ್ ಹುದ್ದೆಗಳಿಗೆ): Apply ಮಾಡಿ
- ಅಧಿಕೃತ ವೆಬ್ ಸೈಟ್: virtualofficeerp.com/gumul2026
ಈ ಕೇಳಗಿನ ಸುದ್ದಿಗಳನ್ನು ಓದಿ:
ವಿದ್ಯಾರ್ಥಿಗಳಿಗೆ ₹35 ಸಾವಿರ ಪ್ರೋತ್ಸಾಹಧನ; ಆನ್ಲೈನ್ ಅರ್ಜಿ ಆಹ್ವಾನ