ಡಿ. ದೇವರಾಜ ಅರಸು, ವಿಶ್ವಕರ್ಮ ಹಾಗೂ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಗಳಿಂದ ಹೊಲಿಗೆ ಯಂತ್ರ ವಿತರಣೆ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಮತ್ತು ಕೊನೆಯ ದಿನಾಂಕದ ವಿವರ ಇಲ್ಲಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಕುಟುಂಬದ ಮಹಿಳೆಯರು ಮತ್ತು ನಿರುದ್ಯೋಗಿಗಳು ಮನೆಯಲ್ಲಿಯೇ ಟೈಲರಿಂಗ್ ವೃತ್ತಿ ಆರಂಭಿಸಿ ಸ್ವಾವಲಂಬಿ ಜೀವನ ನಡೆಸಲು ಸರ್ಕಾರವು ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುತ್ತಿದೆ.
2026-27 ನೇ ಸಾಲಿನ ಈ ಯೋಜನೆಯಡಿ ಉಚಿತ ಹೊಲಿಗೆ ಯಂತ್ರ ಹಾಗೂ ಜಿಗ್-ಜಾಗ್ (Zig-Zag) ಮಷಿನ್ ಪಡೆಯಲು ಅರ್ಹ ಫಲಾಪೇಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಗಳ ಮೂಲಕ ಈ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಅಕ್ಟೋಬರ್ 15 ರಿಂದ ಅಕ್ಟೋಬರ್ 18, 2026 ರವರೆಗೆ ವಿಸ್ತರಿಸಲಾಗಿದೆ.
Free Sewing Machine Scheme 2026 ವಿವರ:
- ಯೋಜನೆಯ ಹೆಸರು: ಹೊಲಿಗೆ ಯಂತ್ರ ವಿತರಣೆ ಯೋಜನೆ / ಹೊಲಿಗೆ ಯಂತ್ರ ಮತ್ತು Zig-Zag ಯೋಜನೆ
- ಸಹಾಯಧನ ಮೊತ್ತ: ಉಚಿತ ಹೊಲಿಗೆ ಯಂತ್ರ / ಜಿಗ್-ಜಾಗ್ ಮಷಿನ್ ವಿತರಣೆ (100% ಸಹಾಯಧನ)
- ಅರ್ಜಿದಾರರ ವಯಸ್ಸು: 18 ರಿಂದ 55 ವರ್ಷಗಳು
- ನಿಗಮವಾರು ಹೊಲಿಗೆ ಯಂತ್ರ ವಿತರಣೆ ಮತ್ತು ವಿಶೇಷ ಸೌಲಭ್ಯಗಳು:
- ಡಿ. ದೇವರಾಜ ಅರಸು ನಿಗಮ: ಹಿಂದುಳಿದ ವರ್ಗಗಳ ಬಡ ಕುಟುಂಬದವರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲು ಪ್ರಸಕ್ತ ಸಾಲಿನಲ್ಲಿ ₹8 ಕೋಟಿ ಅನುದಾನ ಮೀಸಲಿಡಲಾಗಿದ್ದು, ರಾಜ್ಯಾದ್ಯಂತ ಒಟ್ಟು 4,000 ಫಲಾನುಭವಿಗಳಿಗೆ (ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 16 ರಂತೆ) ಯಂತ್ರಗಳನ್ನು ನೀಡಲಾಗುತ್ತದೆ.
- ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ: ಈ ನಿಗಮದಡಿ ಅರ್ಹ ಫಲಾನುಭವಿಗಳಿಗೆ ಸಾಮಾನ್ಯ ಹೊಲಿಗೆ ಯಂತ್ರದ ಜೊತೆಗೆ ‘ಜಿಗ್-ಜಾಗ್ (Zig-Zag) ಯಂತ್ರ’ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ.
- ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ (ವಿಶೇಷ ವಿನಾಯಿತಿ): ಈ ಹಿಂದೆ ನಿಗಮದ ಯಾವುದೇ ಯೋಜನೆಯಲ್ಲಿ ಸೌಲಭ್ಯ ಪಡೆದಿರುವ ಫಲಾನುಭವಿಗಳೂ ಸಹ ‘ಹೊಲಿಗೆ ಯಂತ್ರ ವಿತರಣಾ ಯೋಜನೆ’ಯಲ್ಲಿ ಒಂದು ಕುಟುಂಬಕ್ಕೆ ಒಂದು ಬಾರಿ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಸಾಮಾನ್ಯ ಅರ್ಹತೆಗಳು:
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಡಿ. ದೇವರಾಜ ಅರಸು ನಿಗಮದಡಿ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿರಬೇಕು (ಪ್ರತ್ಯೇಕ ನಿಗಮಗಳಿರುವ ಸಮುದಾಯಗಳನ್ನು ಹೊರತುಪಡಿಸಿ). ವಿಶ್ವಕರ್ಮ ಮತ್ತು ಮರಾಠ ಸಮುದಾಯದವರು ತಮ್ಮದೇ ನಿಗಮಗಳಲ್ಲಿ ಅರ್ಜಿ ಸಲ್ಲಿಸಬೇಕು.
- ಆದಾಯ ಮಿತಿ: ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ₹98,000 ಹಾಗೂ ನಗರ/ಪಟ್ಟಣ ಪ್ರದೇಶದವರಿಗೆ ₹1,20,000 ಒಳಗಿರಬೇಕು.
- ವಯೋಮಿತಿ: ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.
- ವಿಶೇಷ ಮೀಸಲಾತಿ: ಆಯ್ಕೆಯಲ್ಲಿ ಮಹಿಳೆಯರಿಗೆ ಶೇ. 33, ವಿಕಲಚೇತನರಿಗೆ ಶೇ. 5 ಹಾಗೂ ತೃತೀಯ ಲಿಂಗಿಗಳಿಗೆ ಶೇ. 1 ರಷ್ಟು ಮೀಸಲಾತಿ ಇರಿಸಲಾಗಿದೆ.
Free Sewing Machine Scheme 2026 ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್ (ಮೊಬೈಲ್ ಸಂಖ್ಯೆ ಜೋಡಣೆಯಾಗಿರಬೇಕು).
- ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಮರಾಠ ನಿಗಮಕ್ಕೆ ನಮೂನೆ-3ಬಿ ಯಲ್ಲಿ ಪಡೆದಿರಬೇಕು).
- ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ (ಆಧಾರ್ ಕಾರ್ಡ್ನಲ್ಲಿರುವಂತೆ ಅರ್ಜಿದಾರರ ಹೆಸರು, ಶ್ರೀ/ಶ್ರೀಮತಿ/ಕುಮಾರಿ ಎಂಬ ಅಕ್ಷರಗಳ ಸಹಿತ ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್ಬುಕ್ನಲ್ಲಿ ಕಡ್ಡಾಯವಾಗಿ ತಾಳೆಯಾಗಬೇಕು).
- ಹೊಲಿಗೆ ತರಬೇತಿ ಪಡೆದಿರುವ ಪ್ರಮಾಣ ಪತ್ರ (ಅನ್ವಯಿಸಿದಲ್ಲಿ) ಮತ್ತು ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
- ಡಿ. ದೇವರಾಜ ಅರಸು ನಿಗಮ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 15-10-2026
- ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 18-10-2026
Free Sewing Machine Scheme 2026 Application Link:
- ಆನ್ಲೈನ್ ಅರ್ಜಿ ಲಿಂಕ್ (ಸೇವಾ ಸಿಂಧು): ಸೇವಾ ಸಿಂಧು Link
- ಅಧಿಕೃತ ವೆಬ್ಸೈಟ್ಗಳು: sevasindhu.karnataka.gov.in / sevaone.karnataka.gov.in
- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: dbcdc.karnataka.gov.in
- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ: kvcdcl.karnataka.gov.in
- ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ: kmcdc.karnataka.gov.in
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in / sevaone.karnataka.gov.in) ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕಳೆದ 2024-25 ಮತ್ತು 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಸಿಗದವರು ಅದೇ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ, ಆದರೆ ಹಿಂದೆ ಅರ್ಜಿ ಸಲ್ಲಿಸಿದ್ದ ಯೋಜನೆ ಹೊರತುಪಡಿಸಿ ಬೇರೆ ಹೊಸ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ (ವಿಶ್ವಕರ್ಮ ಮತ್ತು ಮರಾಠ ನಿಗಮಗಳಲ್ಲಿ).
ಈ ಕೇಳಗಿನ ಸುದ್ದಿಗಳನ್ನು ಓದಿ:
HDFC ಬ್ಯಾಂಕ್ ವಿದ್ಯಾರ್ಥಿವೇತನ 2026-27: ₹75,000 ವರೆಗೆ ಸ್ಕಾಲರ್ಶೀಪ್