ಮಹಿಳೆಯರಿಗೆ ₹2 ಲಕ್ಷ ಸಬ್ಸಿಡಿ; ಉದ್ಯೋಗಿನಿ ಯೋಜನೆ ಅರ್ಜಿ ಆಹ್ವಾನ | Karnataka Udyogini Scheme 2026 Apply Online @ sevaone.karnataka.gov.in

Telegram Group Join Now
WhatsApp Group Join Now

ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಮತ್ತು ಅವರು ಸ್ವಂತ ಉದ್ಯಮ ಅಥವಾ ವ್ಯಾಪಾರ ಶುರು ಮಾಡಲು ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಉದ್ಯೋಗಿನಿ ಯೋಜನೆ’ಯನ್ನು ಜಾರಿಗೊಳಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2026-27 ನೇ ಸಾಲಿಗೆ ಉದ್ಯೋಗಿನಿ ಯೋಜನೆಯಡಿ ಬ್ಯಾಂಕ್ ಸಾಲ ಹಾಗೂ ಭರ್ಜರಿ ಸಹಾಯಧನ (ಸಬ್ಸಿಡಿ) ಸೌಲಭ್ಯ ಪಡೆಯಲು ಅರ್ಹ ಮಹಿಳೆಯರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Karnataka Udyogini Scheme 2026 ವಿವರ:

  • ಯೋಜನೆಯ ಹೆಸರು: ಉದ್ಯೋಗಿನಿ ಯೋಜನೆ
  • ಸಾಲದ ಮೊತ್ತ: ಕನಿಷ್ಠ ₹50,000 ದಿಂದ ಗರಿಷ್ಠ ₹3 ಲಕ್ಷಗಳವರೆಗೆ ಬ್ಯಾಂಕ್ ಸಾಲ
  • ಅರ್ಜಿದಾರರ ವಯಸ್ಸು: 21 ರಿಂದ 55 ವರ್ಷಗಳು
  1. ಉದ್ಯೋಗಿನಿ ಸಾಲ ಮತ್ತು ಸಹಾಯಧನದ (Subsidy) ಸ್ವರೂಪ:
    • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಮಹಿಳೆಯರಿಗೆ: ಈ ವರ್ಗದ ಫಲಾನುಭವಿಗಳಿಗೆ ಬ್ಯಾಂಕ್ ಸಾಲದ ಶೇ. 75 ರಷ್ಟು ಅಥವಾ ಗರಿಷ್ಠ ₹2 ಲಕ್ಷಗಳವರೆಗೆ ಸಹಾಯಧನವನ್ನು ನಿಗಮದಿಂದ ನೀಡಲಾಗುವುದು.
    • ಇತರೆ ವರ್ಗದ ಮಹಿಳೆಯರಿಗೆ (ಸಾಮಾನ್ಯ/ಹಿಂದುಳಿದ ವರ್ಗ): ಈ ವರ್ಗದ ಫಲಾನುಭವಿಗಳಿಗೆ ಬ್ಯಾಂಕ್ ಸಾಲದ ಶೇ. 30 ರಷ್ಟು ಅಥವಾ ಗರಿಷ್ಠ ₹90,000 ಗಳವರೆಗೆ ಸಹಾಯಧನ ಸೌಲಭ್ಯ ಸಿಗಲಿದೆ.

ಸಾಮಾನ್ಯ ಅರ್ಹತೆಗಳು:

  • ಅರ್ಜಿದಾರ ಮಹಿಳೆಯರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಹಾಗೂ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಹೊಂದಿರಬೇಕು.
  • ಆದಾಯ ಮಿತಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯವು ₹2.00 ಲಕ್ಷಗಳ ಮಿತಿಯಲ್ಲಿರಬೇಕು. ಇತರೆ ವರ್ಗದ ಮಹಿಳೆಯರ ವಾರ್ಷಿಕ ಆದಾಯವು ₹1.50 ಲಕ್ಷಗಳ ಒಳಗಿರಬೇಕು.
  • ವಯೋಮಿತಿ: ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 55 ವರ್ಷಗಳ ಒಳಗಿರಬೇಕು.
  • ಗಮನಿಸಿ: ನಿಗಮದ ಯಾವುದೇ ಯೋಜನೆಯಲ್ಲಿ ಈ ಹಿಂದೆ ಪ್ರಯೋಜನ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

Udyogini Scheme 2026 ಅಗತ್ಯ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ್ (ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗಿರಬೇಕು).
  • ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhaar Seeding) ಕಡ್ಡಾಯವಾಗಿ ಮಾಡಿಸಿರುವ ಬ್ಯಾಂಕ್ ಪಾಸ್‌ಬುಕ್ ಪ್ರತಿ.
  • ಉದ್ದೇಶಿತ ವ್ಯಾಪಾರ ಅಥವಾ ಉದ್ಯಮದ ಯೋಜನಾ ವರದಿ (Project Report).
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:

  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-10-2026, ಸಂಜೆ 5.30 ರವರೆಗೆ.
  • (ಸೂಚನೆ: ಹಿಂದಿನ ಸಾಲುಗಳಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಈ ವರ್ಷ ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ).

Karnataka Govt Udyogini Scheme 2026 Application Link:

  • ಆನ್‌ಲೈನ್‌ ಅರ್ಜಿ ಲಿಂಕ್‌ (ಸೇವಾ ಸಿಂಧು): ಸೇವಾ ಸಿಂಧು Link
  • ಅಧಿಕೃತ ವೆಬ್‌ಸೈಟ್‌: kswdc.karnataka.gov.in / sevasindhu.karnataka.gov.in / sevaone.karnataka.gov.in
  • ಸಹಾಯವಾಣಿ ಸಂಖ್ಯೆ: 080-26632792 / 080-26632973

ಅರ್ಜಿ ಸಲ್ಲಿಸುವ ವಿಧಾನ:
ಸ್ವಯಂ ಉದ್ಯೋಗ ಸಾಲ ಪಡೆಯಲು ಇಚ್ಛಿಸುವ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಸಮೀಪದ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಸರ್ಕಾರದ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವವರೂ ಸಹ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವುದು ಕಡ್ಡಾಯ.

ವಾಹನ ಖರೀದಿಸಲು ₹3 ಲಕ್ಷ ಸಬ್ಸಿಡಿ; ಅರ್ಜಿ ಆಹ್ವಾನ

ಸ್ವಂತ ಉದ್ಯೋಗಕ್ಕೆ ಸರ್ಕಾರದಿಂದ ₹2 ಲಕ್ಷ ಸಾಲ ಮತ್ತು ಸಹಾಯಧನ 

HDFC ಬ್ಯಾಂಕ್ ವಿದ್ಯಾರ್ಥಿವೇತನ 2026-27: ₹75,000 ವರೆಗೆ ಸ್ಕಾಲರ್‌ಶೀಪ್

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment