ನಿರುದ್ಯೋಗಿ ಯುವಕ-ಯುವತಿಯರು ಸಾರಿಗೆ ಕ್ಷೇತ್ರದಲ್ಲಿ ಸ್ವಂತ ಉದ್ಯೋಗ ಕಂಡುಕೊಳ್ಳಲು ನೆರವಾಗುವಂತೆ ರಾಜ್ಯ ಸರ್ಕಾರವು ‘ಸ್ವಾವಲಂಬಿ ಸಾರಥಿ’ ಎಂಬ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ.
ಈ ಯೋಜನೆಯಡಿ ನಾಲ್ಕು ಚಕ್ರದ ಹಳದಿ ಬೋರ್ಡ್ ಟ್ಯಾಕ್ಸಿ ಅಥವಾ ಗೂಡ್ಸ್ ವಾಹನ ಖರೀದಿಸಲು ಬ್ಯಾಂಕ್ ಸಾಲ ಮತ್ತು ಗರಿಷ್ಠ ₹3 ಲಕ್ಷಗಳವರೆಗೆ ಭರ್ಜರಿ ಸಬ್ಸಿಡಿ ನೀಡಲಾಗುತ್ತಿದ್ದು, 2026-27ನೇ ಸಾಲಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ವೀರಶೈವ-ಲಿಂಗಾಯತ, ಒಕ್ಕಲಿಗ, ವಿಶ್ವಕರ್ಮ, ಉಪ್ಪಾರ, ಮರಾಠ ಹಾಗೂ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಗಳ ಮೂಲಕ ಈ ವಾಹನ ಸಹಾಯಧನವನ್ನು ವಿತರಿಸಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗಮವಾರು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ.
Swavalambi Sarathi Scheme 2026 ವಿವರ:
- ಯೋಜನೆಯ ಹೆಸರು: ಸ್ವಾವಲಂಬಿ ಸಾರಥಿ ಯೋಜನೆ
- ಸಹಾಯಧನ ಮೊತ್ತ: ವಾಹನ ಸಾಲದ ಶೇ. 50 ರಷ್ಟು ಅಂದರೆ ಗರಿಷ್ಠ ₹3.00 ಲಕ್ಷಗಳು
- ಅರ್ಜಿದಾರರ ವಯಸ್ಸು: 21 ರಿಂದ 45 ವರ್ಷಗಳು
- ವಾಹನ ಖರೀದಿ ಸಬ್ಸಿಡಿ ಮತ್ತು ಬ್ಯಾಂಕ್ ಸಾಲದ ಸ್ವರೂಪ:
- ಸ್ವಯಂ ಉದ್ಯೋಗಕ್ಕಾಗಿ ನಾಲ್ಕು ಚಕ್ರದ ವಾಹನ (Yellow Board) ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್ಗಳು ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ನಿಗಮದಿಂದ ಶೇ. 50 ರಷ್ಟು ಅಂದರೆ ಗರಿಷ್ಠ ₹3 ಲಕ್ಷಗಳ ನೇರ ಸಹಾಯಧನ (Subsidy) ಮಂಜೂರು ಮಾಡಲಾಗುತ್ತದೆ.
- ನಿಗಮ ನೀಡುವ ₹3 ಲಕ್ಷ ಸಬ್ಸಿಡಿ ಹೊರತುಪಡಿಸಿ, ವಾಹನದ ಉಳಿಕೆ ಮೊತ್ತವನ್ನು ಅಭ್ಯರ್ಥಿಗಳು ಸಂಬಂಧಪಟ್ಟ ಬ್ಯಾಂಕ್ ವಿಧಿಸುವ ಚಾಲ್ತಿ ಬಡ್ಡಿದರದಲ್ಲಿ ಸಾಲವಾಗಿ ಪಡೆದುಕೊಳ್ಳಬೇಕಾಗುತ್ತದೆ.
ವಾಹನ ಸಬ್ಸಿಡಿ ಪಡೆಯಲು ಇರಬೇಕಾದ ಅರ್ಹತೆಗಳು:
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಆಯಾ ನಿಗಮಗಳ ವ್ಯಾಪ್ತಿಗೆ ಬರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಅಥವಾ 3ಬಿ ಜಾತಿ/ಉಪಜಾತಿಗೆ ಸೇರಿರಬೇಕು.
- ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ: ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಚಾಲ್ತಿಯಲ್ಲಿರುವ ಲಘು ವಾಹನ ಚಾಲನಾ ಪರವಾನಗಿಯನ್ನು (LMV Driving License) ಹೊಂದಿರಬೇಕು.
- ವಯೋಮಿತಿ: ಈ ಯೋಜನೆಗೆ ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠ 21 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.
- ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಭಾಗದವರಿಗೆ ₹98,000 ಹಾಗೂ ನಗರ ಪ್ರದೇಶದವರಿಗೆ ₹1,20,000 ಒಳಗಿರಬೇಕು. ಈ ಹಿಂದೆ ನಿಗಮದ ಯಾವುದೇ ಯೋಜನೆಯಲ್ಲಿ ಸೌಲಭ್ಯ ಪಡೆದಿರಬಾರದು.
Karnataka Govt Swavalambi Sarathi Scheme 2026 ಅಗತ್ಯ ದಾಖಲೆಗಳು:
- ಪ್ರಾದೇಶಿಕ ಸಾರಿಗೆ ಕಚೇರಿಯಿಂದ (RTO) ಪಡೆದ ಚಾಲ್ತಿಯಲ್ಲಿರುವ ಲಘು ವಾಹನ ಚಾಲನಾ ಪರವಾನಗಿ (LMV Driving License) ಪ್ರತಿ.
- ಖರೀದಿಸಲು ಉದ್ದೇಶಿಸಿರುವ ನಾಲ್ಕು ಚಕ್ರದ ವಾಹನದ ಅಧಿಕೃತ ದರಪಟ್ಟಿ (Vehicle Quotation).
- ಮೊಬೈಲ್ ಸಂಖ್ಯೆ ಜೋಡಣೆಯಾಗಿರುವ ಆಧಾರ್ ಕಾರ್ಡ್.
- ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಮರಾಠ ನಿಗಮಕ್ಕೆ ನಮೂನೆ-3ಬಿ ಯಲ್ಲಿರಬೇಕು).
- ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಪಾಸ್ಬುಕ್ ಪ್ರತಿ ಹಾಗೂ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
- ಡಿ. ದೇವರಾಜ ಅರಸು ನಿಗಮ, ವೀರಶೈವ-ಲಿಂಗಾಯತ ನಿಗಮ, ಒಕ್ಕಲಿಗ ನಿಗಮ, ವಿಶ್ವಕರ್ಮ ನಿಗಮ ಹಾಗೂ ಉಪ್ಪಾರ ಅಭಿವೃದ್ಧಿ ನಿಗಮಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ: 15-10-2026
- ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಹಾಗೂ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಗಳಿಗೆ ಕೊನೆಯ ದಿನ: 18-10-2026
Swavalambi Sarathi Scheme 2026 Application Link:
- ಆನ್ಲೈನ್ ಅರ್ಜಿ ಲಿಂಕ್ (ಸೇವಾ ಸಿಂಧು): ಸೇವಾ ಸಿಂಧು Link
- ಅಧಿಕೃತ ವೆಬ್ಸೈಟ್ಗಳು: sevasindhu.karnataka.gov.in / sevaone.karnataka.gov.in
- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: dbcdc.karnataka.gov.in
- ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ: kvldcl.karnataka.gov.in
- ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ: kvcdc.karnataka.gov.in
- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ: kvcdcl.karnataka.gov.in
- ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ: uppardevelopment.karnataka.gov.in
- ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ: kmcdc.karnataka.gov.in
- ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ: kmmd.karnataka.gov.in
ಅರ್ಜಿ ಸಲ್ಲಿಸುವ ವಿಧಾನ:
ವಾಹನ ಖರೀದಿ ಸಹಾಯಧನ ಬಯಸುವ ಅರ್ಹ ಯುವಕರು ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಸೇವಾ ಸಿಂಧು ತಂತ್ರಾಂಶದಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬೇಕು.
2024-25 ಮತ್ತು 2025-26ನೇ ಸಾಲಿನಲ್ಲಿ ಇದೇ ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ (ಹಿಂದಿನ ಅರ್ಜಿಯನ್ನೇ ಪರಿಗಣಿಸಲಾಗುತ್ತದೆ). ಆದರೆ ಹಿಂದೆ ಬೇರೆ ಯೋಜನೆಗೆ ಅರ್ಜಿ ಹಾಕಿದ್ದವರು ಈ ಬಾರಿ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಕೇಳಗಿನ ಸುದ್ದಿಗಳನ್ನು ಓದಿ:
HDFC ಬ್ಯಾಂಕ್ ವಿದ್ಯಾರ್ಥಿವೇತನ 2026-27: ₹75,000 ವರೆಗೆ ಸ್ಕಾಲರ್ಶೀಪ್