ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಫಲಿತಾಂಶ ಪ್ರಕಟ | KEA VAO Result 2026 Out Check Online @cetonline.karnataka.gov.in/kea

Telegram Group Join Now
WhatsApp Group Join Now

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕಂದಾಯ ಇಲಾಖೆಯ ಉಳಿಕೆ ಮೂಲ ವೃಂದದ (RPC) ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು (KEA VAO Result 2026 ) ಪ್ರಕಟಿಸಿದೆ.

ದಿನಾಂಕ 04-10-2026 ರಂದು ಪತ್ರಿಕೆ-1 ಮತ್ತು ಪತ್ರಿಕೆ-2 ರ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದಿದ್ದವು. ದಿನಾಂಕ 16-10-2026 ರಂದು ಪ್ರಕಟಿಸಲಾದ ಪರಿಷ್ಕೃತ ಕೀ ಉತ್ತರಗಳ ಆಧಾರದ ಮೇಲೆ, ಇದೀಗ ಅಭ್ಯರ್ಥಿಗಳು ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶವನ್ನು 19-10-2026 ರಂದು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

KEA VAO Result 2026 ವಿವರ:

  • ಇಲಾಖೆಯ ಹೆಸರು: ಕಂದಾಯ ಇಲಾಖೆ
  • ಹುದ್ದೆಯ ಹೆಸರು: ಗ್ರಾಮ ಆಡಳಿತ ಅಧಿಕಾರಿ (VAO – ಉಳಿಕೆ ಮೂಲ ವೃಂದ)
  • ಪರೀಕ್ಷೆ ನಡೆದ ದಿನಾಂಕ: 04-10-2026
  • ಫಲಿತಾಂಶ ಪ್ರಕಟವಾದ ದಿನಾಂಕ: 19-10-2026
  • ಫಲಿತಾಂಶದ ಮೇಲಿನ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ:
    • ಪ್ರಕಟಿತ ತಾತ್ಕಾಲಿಕ ಫಲಿತಾಂಶಕ್ಕೆ (ಅಭ್ಯರ್ಥಿಗಳು ಗಳಿಸಿರುವ ಅಂಕಗಳಿಗೆ) ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಆನ್‌ಲೈನ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ಪ್ರಾಧಿಕಾರವು ಪ್ರತ್ಯೇಕ ಲಿಂಕ್ ಅನ್ನು ಬಿಡುಗಡೆ ಮಾಡಿದೆ.
    • ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 22-10-2026 ರ ಬೆಳಿಗ್ಗೆ 10:00 ಗಂಟೆಯವರೆಗೆ ಮಾತ್ರ ಕಾಲಾವಕಾಶ ನೀಡಲಾಗಿದೆ.
    • ಪೂರಕ ದಾಖಲೆಗಳಿಲ್ಲದ ಹಾಗೂ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಆಕ್ಷೇಪಣೆಗಳನ್ನು ಈ ಹಂತದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.

KEA VAO Result 2026 ಪ್ರಮುಖ ದಿನಾಂಕಗಳು:

  • ಸ್ಪರ್ಧಾತ್ಮಕ ಪರೀಕ್ಷೆ ನಡೆದ ದಿನಾಂಕ: 04-10-2026
  • ಪರಿಷ್ಕೃತ ಕೀ ಉತ್ತರಗಳ ಪ್ರಕಟಣೆ: 16-10-2026
  • ತಾತ್ಕಾಲಿಕ ಫಲಿತಾಂಶ (Provisional Score) ಪ್ರಕಟಣೆ: 19-10-2026
  • ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ: 22-10-2026 ಬೆಳಿಗ್ಗೆ 10:00 ಗಂಟೆಯೊಳಗೆ

VAO Provisional Result 2026 Links:

ಫಲಿತಾಂಶ ಚೆಕ್ ಮಾಡುವ ಹಾಗೂ ಆಕ್ಷೇಪಣೆ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಮುಖಪುಟದಲ್ಲಿರುವ ‘VAO-RPC – ತಾತ್ಕಾಲಿಕ ಫಲಿತಾಂಶದ ಲಿಂಕ್ – 19-10-2026’ ಮೇಲೆ ಕ್ಲಿಕ್ ಮಾಡಬೇಕು. ತದನಂತರ ತಮ್ಮ ವಿವರಗಳನ್ನು ನಮೂದಿಸುವ ಮೂಲಕ ಅಂಕಗಳನ್ನು ಪರಿಶೀಲಿಸಬಹುದು. ಅಂಕಗಳ ಕುರಿತು ಆಕ್ಷೇಪಣೆ ಇದ್ದಲ್ಲಿ, ಅದೇ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ‘ಆಕ್ಷೇಪಣೆಗಳನ್ನು ಸಲ್ಲಿಸುವ ಲಿಂಕ್’ ಮೂಲಕ ಸೂಕ್ತ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು.

KEA VAO Exam Key Answer 2026

HDFC ಬ್ಯಾಂಕ್ ವಿದ್ಯಾರ್ಥಿವೇತನ 2026-27: ₹75,000 ವರೆಗೆ ಸ್ಕಾಲರ್‌ಶೀಪ್

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment