ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಪ್ರೋತ್ಸಾಹ ನೀಡುವ ಮಹತ್ವಾಕಾಂಕ್ಷಿ ಉದ್ದೇಶದಿಂದ ಕರ್ನಾಟಕ ಸರ್ಕಾರವು “ಮೆಟ್ರಿಕ್ ನಂತರದ ಪ್ರೋತ್ಸಾಹಧನ 2026” (Post Matric Prize Money Scholarship 2026) ಯೋಜನೆಗೆ ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ.
ಪಿಯುಸಿ, ಪದವಿ ಸೇರಿದಂತೆ ವಿವಿಧ ಉನ್ನತ ಕೋರ್ಸ್ಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 20 ಸಾವಿರದಿಂದ 35 ಸಾವಿರ ರೂಪಾಯಿಗಳವರೆಗೆ ಭಾರಿ ನಗದು ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.
ಯಾವ ಕೋರ್ಸ್ಗೆ ಎಷ್ಟು ಪ್ರೋತ್ಸಾಹಧನ?
ಸಮಾಜ ಕಲ್ಯಾಣ ಇಲಾಖೆಯು ನಿಗದಿಪಡಿಸಿರುವಂತೆ ವಿದ್ಯಾರ್ಥಿಗಳು ತಾವು ಉತ್ತೀರ್ಣರಾದ ಕೋರ್ಸ್ನ ಆಧಾರದ ಮೇಲೆ ಈ ಕೆಳಗಿನಂತೆ ಪ್ರೋತ್ಸಾಹಧನ ಪಡೆಯಲಿದ್ದಾರೆ:
- ಪಿಯುಸಿ (PUC): ₹ 20,000
- ಪದವಿ (UG): ₹ 25,000
- ಸ್ನಾತಕೋತ್ತರ ಪದವಿ (PG): ₹ 30,000
- ಇಂಜಿನಿಯರಿಂಗ್, ಕೃಷಿ ಹಾಗೂ ಮೆಡಿಕಲ್ ಕೋರ್ಸ್ (ENG/AGRI/MEDICAL): ₹ 35,000
ಯಾರಿಗೆ ಸಿಗಲಿದೆ ಈ ಪ್ರೈಸ್ ಮನಿ?
- ಈ ಪ್ರೋತ್ಸಾಹಧನ ಯೋಜನೆಯು ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪಿಯುಸಿ (PUC), ಪದವಿ (UG), ಸ್ನಾತಕೋತ್ತರ ಪದವಿ (PG) ಅಥವಾ ವೃತ್ತಿಪರ ಕೋರ್ಸ್ಗಳನ್ನು ಕಡ್ಡಾಯವಾಗಿ ಪ್ರಥಮ ಪ್ರಯತ್ನದಲ್ಲಿ ಹಾಗೂ ಪ್ರಥಮ ದರ್ಜೆಯಲ್ಲಿ (First attempt and First class) ಪೂರ್ಣಗೊಳಿಸಿರಬೇಕು.
ವಿದ್ಯಾರ್ಥಿಗಳು ಗಮನಿಸಲೇಬೇಕಾದ ಪ್ರಮುಖ ನಿಯಮಗಳು:
- ಭೌತಿಕ ದಾಖಲೆಗಳ ಸಲ್ಲಿಕೆ ಕಡ್ಡಾಯ: ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಕೇವಲ 15 ದಿನಗಳ ಒಳಗಾಗಿ, ಅರ್ಜಿಯ ಪ್ರತಿ ಹಾಗೂ ಎಲ್ಲಾ ಅಗತ್ಯ ದಾಖಲೆಗಳನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಛೇರಿಗೆ ಭೌತಿಕವಾಗಿ (Hard copy) ಕಡ್ಡಾಯವಾಗಿ ಸಲ್ಲಿಸಬೇಕು.
- ದೃಢೀಕರಣ ಪತ್ರ: ಪಿಯುಸಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕೋರ್ಸ್ನ ವಿದ್ಯಾರ್ಥಿಗಳು ಇಲಾಖೆ ನೀಡುವ ‘ದೃಢೀಕರಣ ಪತ್ರ’ವನ್ನು ಭರ್ತಿ ಮಾಡಿ, ತಾವು ವ್ಯಾಸಂಗ ಮಾಡಿದ ಕಾಲೇಜಿನ ಪ್ರಾಂಶುಪಾಲರ (ಮುಖ್ಯಸ್ಥರ) ಸಹಿ ಪಡೆದು ಸಲ್ಲಿಸುವುದು ಕಡ್ಡಾಯವಾಗಿದೆ.
- ಬ್ಯಾಂಕ್ ಖಾತೆ ನಿಯಮ: ಪ್ರೈಸ್ ಮನಿಯ ಮೊತ್ತವು ನೇರವಾಗಿ ವಿದ್ಯಾರ್ಥಿಗಳ ಆಧಾರ್ಗೆ ಲಿಂಕ್ ಆಗಿರುವ ಹಾಗೂ NPCI ಮ್ಯಾಪ್ ಮಾಡಲಾದ ಸಕ್ರಿಯ (Active) ಬ್ಯಾಂಕ್ ಖಾತೆಗೆ ಮಾತ್ರ ಜಮಾ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ಆಧಾರ್ ವಿವರಗಳನ್ನು ಬದಲಾಯಿಸುವಂತಿಲ್ಲ.
How To Apply Post Matric Prize Money Scholarship 2026:
ಅರ್ಹ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ‘Register’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಯೋಜನೆಯಲ್ಲಿ ‘POST MATRIC PRIZE MONEY’ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
- ವಿದ್ಯಾರ್ಥಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ ಪರಿಶೀಲನೆ (Verify) ಮಾಡಿ.
- ನಂತರ ಜಾತಿ, ಆದಾಯ ಹಾಗೂ ಕೋರ್ಸ್ (Course) ವಿವರಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಬೇಕು.
ಪ್ರಮುಖ ದಿನಾಂಕಗಳು:
Prize Money Scholarship 2026 Application Link: Apply Online
ಅಧಿಕೃತ ವೆಬ್ಸೈಟ್: swdservices.karnataka.gov.in
ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ 9482300400 ಗೆ ಕರೆ ಮಾಡಬಹುದು ಅಥವಾ ತಮ್ಮ ಜಿಲ್ಲಾ ಸಮಾಜ ಕಲ್ಯಾಣ ಕಚೇರಿಗೆ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕೇಳಗಿನ ಸುದ್ದಿಗಳನ್ನು ಓದಿ: