ಆರ್ಥಿಕ ಸಮಸ್ಯೆಯಿಂದ ಯಾವೊಬ್ಬ ಪ್ರತಿಭಾವಂತ ವಿದ್ಯಾರ್ಥಿಯೂ ಉನ್ನತ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ಸದುದ್ದೇಶದಿಂದ ಪ್ರಸಿದ್ಧ ‘ಬಡ್ಡಿ4ಸ್ಟಡಿ’ ಸಂಸ್ಥೆಯು ಮಹತ್ವದ ಹೆಜ್ಜೆಯಿಟ್ಟಿದೆ.
ಭಾರತದ ಮೊದಲ ರಾಷ್ಟ್ರಪತಿಗಳ ನೆನಪಿನ ಗೌರವಾರ್ಥವಾಗಿ ‘ಡಾ. ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ ಕಾರ್ಯಕ್ರಮ 2026-27’ ನ್ನು ಘೋಷಿಸಿದ್ದು, ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಹಣಕಾಸಿನ ತೊಂದರೆ ಎದುರಿಸುತ್ತಿರುವ ಬಡ ಹಿನ್ನೆಲೆಯ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸವನ್ನು (ಯಾವುದೇ ಸ್ಟ್ರೀಮ್ ಅಥವಾ ಕೋರ್ಸ್) ಅಡೆತಡೆಯಿಲ್ಲದೆ ಮುಂದುವರಿಸಲು ಇದು ಅತ್ಯುತ್ತಮ ಅವಕಾಶವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ₹30,000 ದವರೆಗೆ ಆರ್ಥಿಕ ನೆರವು ಸಿಗಲಿದೆ.
Dr Rajendra Prasad Scholarship 2026 ಅರ್ಹತೆಗಳು:
ಈ ವಿದ್ಯಾರ್ಥಿವೇತನವನ್ನು ಎರಡು ಪ್ರತ್ಯೇಕ ವಿಭಾಗಗಳಲ್ಲಿ ನೀಡಲಾಗುತ್ತಿದ್ದು, ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- 10 ನೇ ತರಗತಿ ವಿದ್ಯಾರ್ಥಿಗಳಿಗೆ: 2026 ರಲ್ಲಿ 10ನೇ ತರಗತಿ (SSLC/CBSE ಇತ್ಯಾದಿ) ಬೋರ್ಡ್ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
- 12 ನೇ ತರಗತಿ ವಿದ್ಯಾರ್ಥಿಗಳಿಗೆ: 2025 ಅಥವಾ 2026 ರಲ್ಲಿ 12ನೇ ತರಗತಿ (PUC/12th) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಅಂಕಗಳು: ಅರ್ಜಿದಾರರು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ. 65% ಅಂಕಗಳನ್ನು ಪಡೆದಿರುವುದು ಕಡ್ಡಾಯ.
- ಆದಾಯ ಮಿತಿ: ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹8 ಲಕ್ಷ ಮೀರಿರಬಾರದು.
(ಗಮನಿಸಿ: ಸರ್ಕಾರಿ ಶಾಲೆಯಿಂದ ಪಾಸ್ ಆದ ವಿದ್ಯಾರ್ಥಿಗಳು, ಅಂಗವಿಕಲರು (PwD) ಹಾಗೂ ಈಶಾನ್ಯ ರಾಜ್ಯಗಳ ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ).
ವಿದ್ಯಾರ್ಥಿವೇತನದ ಉಪಯೋಗಗಳು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಕೋರ್ಸ್‌ನ ಶುಲ್ಕದ ಆಧಾರದ ಮೇಲೆ ಗರಿಷ್ಠ ₹30,000 ದವರೆಗೆ ಒಂದು ಬಾರಿಯ (One-time) ಆರ್ಥಿಕ ನೆರವು ಸಿಗಲಿದೆ. ಈ ಹಣವನ್ನು ಬೋಧನಾ ಶುಲ್ಕ (College Fee), ಪುಸ್ತಕಗಳು, ಅಧ್ಯಯನ ಸಾಮಗ್ರಿಗಳು, ವಸತಿ (ಹಾಸ್ಟೆಲ್) ಮತ್ತು ಇತರ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಮಾತ್ರ ಬಳಸಿಕೊಳ್ಳಬೇಕು.
Dr Rajendra Prasad Scholarship 2026 ಬೇಕಾಗುವ ದಾಖಲೆಗಳು:
- ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ.
- ಗುರುತಿನ ಚೀಟಿ (ಆಧಾರ್ ಕಾರ್ಡ್ ಇತ್ಯಾದಿ).
- 10 ನೇ ತರಗತಿಯ ಅಂಕಪಟ್ಟಿ
- 12 ನೇ ತರಗತಿ ವಿದ್ಯಾರ್ಥಿಗಳು 12ನೇ ತರಗತಿ ಅಂಕಪಟ್ಟಿಯನ್ನೂ ನೀಡಬೇಕು.
- ಪ್ರಸ್ತುತ ವರ್ಷದ ಪ್ರವೇಶಾತಿ ಪುರಾವೆ (ಕಾಲೇಜು ಐಡಿ ಕಾರ್ಡ್ ಅಥವಾ ಅಡ್ಮಿಷನ್ ಲೆಟರ್).
- ಶಾಲಾ/ಕಾಲೇಜಿನ ಶುಲ್ಕದ ರಶೀದಿ (Fee receipt).
- ಅಧಿಕೃತ ಪ್ರಾಧಿಕಾರದಿಂದ (ತಹಶೀಲ್ದಾರ್) ಪಡೆದ ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ.
- ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರ (ಪಾಸ್‌ಬುಕ್ ಮುಖಪುಟ ಅಥವಾ ಕ್ಯಾನ್ಸಲ್ ಮಾಡಿದ ಚೆಕ್).
ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ವಿದ್ಯಾರ್ಥಿಗಳು Buddy4Study ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಕೇಳಗೆ ನೀಡಲಾಗಿರುವ ಲಿಂಕ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು:
- ವೆಬ್‌ಸೈಟ್‌ನಲ್ಲಿ “Dr Rajendra Prasad Scholarship Program 2026-27” ಪುಟಕ್ಕೆ ಭೇಟಿ ನೀಡಿ.
- ಅಲ್ಲಿ ನೀಡಲಾಗಿರುವ ಸೂಚನೆಗಳನ್ನು ಸರಿಯಾಗಿ ಓದಿ
- ನಿಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ ಬಳಸಿ Buddy4Study ನಲ್ಲಿ ಲಾಗಿನ್/ರಿಜಿಸ್ಟರ್ ಆಗಿ.
- ‘Apply Now’ ಬಟನ್ ಮೇಲೆ ಕ್ಲಿಕ್ ಮಾಡಿ.
- ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾದ ನಿಮ್ಮ ಎಲ್ಲಾ ನಿಖರ ಮಾಹಿತಿಗಳನ್ನು ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಎಲ್ಲವನ್ನೂ ಪರಿಶೀಲಿಸಿ (Preview) ಸರಿಯಾಗಿದ್ದರೆ ‘Submit’ ಬಟನ್ ಒತ್ತುವ ಮೂಲಕ ಅರ್ಜಿಯನ್ನು ಪೂರ್ಣಗೊಳಿಸಿ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 28-06-2026
ಪ್ರಮುಖ ಲಿಂಕ್‌ಗಳು:
Dr Rajendra Prasad Scholarship 2026 Application Link: Apply Online