ವಿವೋ ವಿದ್ಯಾರ್ಥಿವೇತನ, 60,000 ರೂ. ಆರ್ಥಿಕ ಸಹಾಯ | vivo KanyaGyaan Scholarship 2026 Apply Online

Telegram Group Join Now
WhatsApp Group Join Now

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯುವುದನ್ನು ಪ್ರೋತ್ಸಾಹಿಸಲು ‘ವಿವೋ ಇಂಡಿಯಾ’ (vivo India) ಕಂಪನಿಯು ‘vivo KanyaGyaan Scholarship 2026’ ಕಾರ್ಯಕ್ರಮವನ್ನು ಘೋಷಿಸಿದೆ.

ಈ ವಿದ್ಯಾರ್ಥಿವೇತನವು ವಿವೋ ಇಂಡಿಯಾದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಯೋಜನೆಯ ಅಡಿಯ ಒಂದು ವಿಶೇಷ ಉಪಕ್ರಮವಾಗಿದೆ. ಹಣಕಾಸಿನ ತೊಂದರೆಯಿಂದಾಗಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಈ ಸೌಲಭ್ಯದ ಲಾಭ ಪಡೆಯಬಹುದು. ಕೇವಲ ಆರ್ಥಿಕ ನೆರವು ಮಾತ್ರವಲ್ಲದೆ, ಭವಿಷ್ಯದ ಕಾರ್ಪೊರೇಟ್ ವೃತ್ತಿಜೀವನಕ್ಕೆ ವಿದ್ಯಾರ್ಥಿನಿಯರನ್ನು ಸಜ್ಜುಗೊಳಿಸಲು ಉನ್ನತ ಮಟ್ಟದ ವೃತ್ತಿಪರ ಮಾರ್ಗದರ್ಶನವನ್ನೂ (Mentorship) ನೀಡಲಾಗುತ್ತದೆ.

vivo KanyaGyaan Scholarship 2026 ಸಂಕ್ಷಿಪ್ತ ವಿವರ:

  • ವಿದ್ಯಾರ್ಥಿವೇತನ ನೀಡುವ ಸಂಸ್ಥೆ: ವಿವೋ ಇಂಡಿಯಾ
  • ಸ್ಕಾಲರ್ಶಿಪ್ ಹೆಸರು: ವಿವೋ ಕನ್ಯಾಜ್ಞಾನ್ ವಿದ್ಯಾರ್ಥಿವೇತನ 2025-26
  • ಆರ್ಥಿಕ ಸಹಾಯ: ವಾರ್ಷಿಕ ₹60,000

ಶೈಕ್ಷಣಿಕ ಅರ್ಹತೆ:

  • ಕೇವಲ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  • ಭಾರತದಾದ್ಯಂತ NIRF-ಶ್ರೇಯಾಂಕಿತ ಕಾಲೇಜುಗಳಲ್ಲಿ ಪೂರ್ಣಾವಧಿಯ, ನಿಯಮಿತ STEM ಪದವಿಪೂರ್ವ ಕೋರ್ಸ್‌ಗಳಾದ B.Tech / BE, B.Sc, BCA, MBBS ಇತ್ಯಾದಿಗಳಲ್ಲಿ (ಪ್ರಥಮ ಅಥವಾ ದ್ವಿತೀಯ ವರ್ಷ) ವ್ಯಾಸಂಗ ಮಾಡುತ್ತಿರಬೇಕು. ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
  • ಅರ್ಜಿದಾರರು 10ನೇ ತರಗತಿ, 12ನೇ ತರಗತಿ ಹಾಗೂ ಹಿಂದಿನ ಶೈಕ್ಷಣಿಕ ವರ್ಷ ಅಥವಾ ಸೆಮಿಸ್ಟರ್‌ನಲ್ಲಿ ಕನಿಷ್ಠ ಶೇ. 70ರಷ್ಟು ಅಂಕಗಳನ್ನು ಪಡೆದಿರಬೇಕು.

ಆರ್ಥಿಕ ಷರತ್ತುಗಳು:

  • ವಿದ್ಯಾರ್ಥಿನಿಯ ಪೋಷಕರ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಈಗಾಗಲೇ ಇತರ ಸರ್ಕಾರಿ ಅಥವಾ ಖಾಸಗಿ ಸ್ಕಾಲರ್‌ಶಿಪ್ ಅಡಿಯಲ್ಲಿ ಸಂಪೂರ್ಣ ಆರ್ಥಿಕ ನೆರವು ಪಡೆಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
  • ಬಡ್ಡಿ4ಸ್ಟಡಿ ಅಥವಾ ವಿವೋ ಇಂಡಿಯಾ ಉದ್ಯೋಗಿಗಳ ಮಕ್ಕಳು ಅನರ್ಹರು.

ಸ್ಕಾಲರ್ಶಿಪ್ ಪ್ರಯೋಜನಗಳು: ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಸತತ ಮೂರು ವರ್ಷಗಳವರೆಗೆ ವರ್ಷಕ್ಕೆ ₹60,000 ಸ್ಥಿರ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಈ ಹಣವನ್ನು ಕಾಲೇಜು ಶುಲ್ಕ, ಹಾಸ್ಟೆಲ್, ಊಟ, ಸಾರಿಗೆ ಹಾಗೂ ಲ್ಯಾಪ್‌ಟಾಪ್ ಖರೀದಿಯಂತಹ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಬಳಸಬಹುದು (ಇದಕ್ಕಾಗಿ ರಸೀದಿಗಳನ್ನು ಒದಗಿಸುವುದು ಕಡ್ಡಾಯ).

ಅಗತ್ಯ ದಾಖಲೆಗಳು:

  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ
  • ಸರ್ಕಾರಿ ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇತ್ಯಾದಿ)
  • ಪ್ರಸ್ತುತ ವರ್ಷದ ಪ್ರವೇಶಾತಿ ಪುರಾವೆ (ಕಾಲೇಜು ಐಡಿ ಅಥವಾ ಅಡ್ಮಿಷನ್ ಲೆಟರ್)
  • ಹಿಂದಿನ ಸೆಮಿಸ್ಟರ್/ವರ್ಷದ ಅಂಕಪಟ್ಟಿ
  • ಪೋಷಕರ ಆದಾಯ ಪ್ರಮಾಣಪತ್ರ
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್ ಅಥವಾ ಕ್ಯಾನ್ಸಲ್ ಆದ ಚೆಕ್
  • ಕಾಲೇಜಿನ ಸಂಪೂರ್ಣ ಶುಲ್ಕದ ವಿವರ (Fee Structure)
  • ಜಾತಿ, ಅಂಗವೈಕಲ್ಯ ಅಥವಾ ಕ್ರೀಡಾ ಪ್ರಮಾಣಪತ್ರ (ಅನ್ವಯಿಸಿದರೆ)
  • 200 ಪದಗಳ ಸಣ್ಣ ಪ್ರಬಂಧ (“ನಾನು ಈ ಕ್ಷೇತ್ರವನ್ನು ಏಕೆ ಮುಂದುವರಿಸಲು ಬಯಸುತ್ತೇನೆ” ಮತ್ತು “ಈ ಬೆಂಬಲವು ನನಗೆ ಹೇಗೆ ಸಹಾಯ ಮಾಡುತ್ತದೆ” ಎಂಬುದರ ಕುರಿತು).

ಪ್ರಮುಖ ದಿನಾಂಕಗಳು:

  • ಕೊನೆಯ ದಿನಾಂಕ: 22-05-2026

ಪ್ರಮುಖ ಲಿಂಕ್‌ಗಳು:

  • ಅರ್ಜಿಸಲ್ಲಿಕೆ: Apply ಮಾಡಿ
  • ಅಧಿಕೃತ ವೆಬ್‌ಸೈಟ್: buddy4study.com

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2026

ಜಿಲ್ಲಾ ನ್ಯಾಯಾಲಯ ನೇಮಕಾತಿ 2026

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment