ದ್ವಿತೀಯ ಪಿಯುಸಿ ಮೊದಲ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಅಥವಾ ಕಡಿಮೆ ಅಂಕಗಳಿಸಿ, ಮರುಪರೀಕ್ಷೆ (ಪರೀಕ್ಷೆ-2) ಬರೆದಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಸಿಹಿಸುದ್ದಿ ನೀಡಿದೆ. 2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ‘ಪರೀಕ್ಷೆ-2’ರ ಫಲಿತಾಂಶ ಗುರುವಾರ (ಮೇ 21) ಅಧಿಕೃತವಾಗಿ ಬಿಡುಗಡೆಯಾಗಿದೆ.
ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್ಸೈಟ್ ಮೂಲಕ ತಮ್ಮ ಅಂಕಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಫಲಿತಾಂಶದ ಪ್ರಮುಖ ಅಂಕಿ-ಅಂಶಗಳು:
ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿಂದ ಒಟ್ಟಾರೆ 80,535 ವಿದ್ಯಾರ್ಥಿಗಳು ಈ ಎರಡನೇ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 36,764 ಮಂದಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ವ್ಯಾಸಂಗಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
- ಬಾಲಕರು: ಪರೀಕ್ಷೆ ಬರೆದಿದ್ದ ಒಟ್ಟು 43,311 ಬಾಲಕರ ಪೈಕಿ 19,367 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
- ಬಾಲಕಿಯರು: ಪರೀಕ್ಷೆಗೆ ಹಾಜರಾಗಿದ್ದ 37,224 ಬಾಲಕಿಯರ ಪೈಕಿ 17,397 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಗ್ರೇಡ್/ಶ್ರೇಣಿವಾರು ಪಾಸ್ ಆದವರ ವಿವರ:
- ಅತ್ಯುನ್ನತ ಶ್ರೇಣಿ (ಶೇ. 85ಕ್ಕಿಂತ ಹೆಚ್ಚು ಅಂಕ): 62 ವಿದ್ಯಾರ್ಥಿಗಳು
- ಪ್ರಥಮ ದರ್ಜೆ (ಶೇ. 60 ರಿಂದ 85ರ ವರೆಗೆ): 8,086 ವಿದ್ಯಾರ್ಥಿಗಳು
- ದ್ವಿತೀಯ ದರ್ಜೆ (ಶೇ. 50 ರಿಂದ 60ರ ವರೆಗೆ): 16,940 ವಿದ್ಯಾರ್ಥಿಗಳು
- ಸಾಮಾನ್ಯ ತೇರ್ಗಡೆ (ಶೇ. 50ಕ್ಕಿಂತ ಕಡಿಮೆ): 11,676 ವಿದ್ಯಾರ್ಥಿಗಳು.
ವರ್ಗಾವಾರು ವಿದ್ಯಾರ್ಥಿಗಳ ಸಾಧನೆ:
- ಹೊಸಬರು (Freshers): ಪರೀಕ್ಷೆ ಬರೆದ 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ ತೇರ್ಗಡೆ.
- ಪುನರಾವರ್ತಿತ (Repeaters): ಒಟ್ಟು 34,419 ಮಂದಿ ಪೈಕಿ 10,279 ವಿದ್ಯಾರ್ಥಿಗಳು ಪಾಸ್.
- ಖಾಸಗಿ (Private): ಪರೀಕ್ಷೆಗೆ ಹಾಜರಾಗಿದ್ದ 5,456 ಅಭ್ಯರ್ಥಿಗಳಲ್ಲಿ 1,562 ಮಂದಿ ಉತ್ತೀರ್ಣ.
(ಸೂಚನೆ: ಕಡಿಮೆ ಅಂಕ ಬಂದಿದೆ ಎಂದು ವಿದ್ಯಾರ್ಥಿಗಳು ನಿರಾಶೆಗೊಳ್ಳುವ ಅಗತ್ಯವಿಲ್ಲ, ಯಶಸ್ಸಿಗೆ ಇನ್ನು ಸಾವಿರಾರು ಅವಕಾಶಗಳಿವೆ ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ).
How To Check 2nd PUC Exam 2 Result 2026?
- ಮೊದಲಿಗೆ ಅಧಿಕೃತ ವೆಬ್ಸೈಟ್ಗಳಾದ karresults.nic.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ ‘Karnataka 2nd PUC Exam-2 Result 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ವಿಷಯದ ಕಾಂಬಿನೇಷನ್ ಅನ್ನು ಆಯ್ಕೆ ಮಾಡಿ ‘Submit’ ಬಟನ್ ಒತ್ತಿ.
- ಸ್ಕ್ರೀನ್ ಮೇಲೆ ನಿಮ್ಮ ಫಲಿತಾಂಶ ಹಾಗೂ ಅಂಕಪಟ್ಟಿ ಮೂಡುತ್ತದೆ. ಮುಂದಿನ ರೆಫರೆನ್ಸ್ಗಾಗಿ ಇದನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
2nd PUC Exam 2 Result 2026 Link: karresults.nic.in
ಈ ಕೇಳಗಿನ ಸುದ್ದಿಗಳನ್ನು ಓದಿ:
SSLC, 12ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ₹30,000 ವಿದ್ಯಾರ್ಥಿವೇತನ