ಅಗ್ನಿಶಾಮಕ ಇಲಾಖೆ ನೇಮಕಾತಿ 2026 | Karnataka Fire Department Recruitment 2026 Apply Online

Telegram Group Join Now
WhatsApp Group Join Now

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು (KSFES) ಉಳಿಕೆ ಮೂಲ ವೃಂದ (RPC – 476) ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ (KK – 14) ಖಾಲಿ ಇರುವ ಒಟ್ಟು 490 ಗ್ರೂಪ್-ಸಿ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಇದರಲ್ಲಿ 470 ಅಗ್ನಿಶಾಮಕ ಸಿಬ್ಬಂದಿ (Fire Fighter) ಹಾಗೂ 20 ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗಳು ಸೇರಿವೆ.

ಈ ಎರಡೂ ನೇಮಕಾತಿಗಳಿಗೆ ಅರ್ಹ ಪುರುಷ ಅಭ್ಯರ್ಥಿಗಳಿಂದ ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 23, 2026 ರಿಂದ ಡಿಸೆಂಬರ್ 22, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Fire Department Recruitment 2026 ನೇಮಕಾತಿಯ ಸಂಕ್ಷಿಪ್ತ ವಿವರ:

ವಿವರ ಮಾಹಿತಿ
ಇಲಾಖೆಯ ಹೆಸರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ (KSFES)
ಅರ್ಜಿ / ಪರೀಕ್ಷಾ ಪ್ರಾಧಿಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಹುದ್ದೆಗಳ ಹೆಸರು ಅಗ್ನಿಶಾಮಕ ಸಿಬ್ಬಂದಿ (470) & ಅಗ್ನಿಶಾಮಕ ಠಾಣಾಧಿಕಾರಿ (20)
ವೃಂದ ಮತ್ತು ವರ್ಗ RPC (476) & KK (14) – ಗ್ರೂಪ್ ‘ಸಿ’ (ಪುರುಷರಿಗೆ ಮಾತ್ರ)
ಒಟ್ಟು ಹುದ್ದೆಗಳು 490 ಹುದ್ದೆಗಳು

ಹುದ್ದೆವಾರು ವಿವರ, ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ:

ಹುದ್ದೆಯ ಹೆಸರು ಹುದ್ದೆ ವೇತನ ಶ್ರೇಣಿ & ವಿದ್ಯಾರ್ಹತೆ
ಅಗ್ನಿಶಾಮಕ ಸಿಬ್ಬಂದಿ (Fire Fighter)
(RPC: 460 | KK: 10)
470 ವೇತನ: ₹37,500 – ₹76,100
ವಿದ್ಯಾರ್ಹತೆ: ಕನ್ನಡ ಭಾಷಾ ವಿಷಯದೊಂದಿಗೆ SSLC ಅಥವಾ ತತ್ಸಮಾನ ಉತ್ತೀರ್ಣ.
ಅಗ್ನಿಶಾಮಕ ಠಾಣಾಧಿಕಾರಿ (FSO)
(RPC: 16 | KK: 04)
[ನೇರ: 17 | ಸೇವಾ ನಿರತ: 03]
20 ವೇತನ: ₹54,175 – ₹99,400
ನೇರ ಅಭ್ಯರ್ಥಿ: ರಸಾಯನಶಾಸ್ತ್ರ (Chemistry) ವಿಷಯದೊಂದಿಗೆ ವಿಜ್ಞಾನ ಪದವಿ.
ಸೇವಾ ನಿರತ: ಯಾವುದೇ ಪದವಿ + ಇಲಾಖೆಯಲ್ಲಿ ಕನಿಷ್ಠ 8 ವರ್ಷ ಸೇವೆ.

SSLC ತತ್ಸಮಾನ ವಿದ್ಯಾರ್ಹತೆಗಳು (ಅಗ್ನಿಶಾಮಕ ಹುದ್ದೆಗೆ): ಸಿಬಿಎಸ್‌ಇ/ಐಸಿಎಸ್‌ಇ 10ನೇ ತರಗತಿ, ಇತರೆ ರಾಜ್ಯ ಮಂಡಳಿಗಳ 10ನೇ ತರಗತಿ, ಎನ್‌ಐಒಎಸ್ (NIOS) ಹೆಚ್‌ಎಸ್‌ಸಿ ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕೆ.ಓ.ಎಸ್ (KOS).

ಸೇವಾ ನಿರತ FSO ಅರ್ಹತೆ: ಇಲಾಖೆಯ ಪ್ರಮುಖ ಅಗ್ನಿಶಾಮಕ, ಚಾಲಕ ತಂತ್ರಜ್ಞ, ಅಗ್ನಿಶಾಮಕ ಚಾಲಕ, ಅಗ್ನಿಶಾಮಕ ಹಾಗೂ ಫಿಟ್ಟರ್ ಕ್ಲಾಸ್-1 ವೃಂದಗಳಲ್ಲಿ ಕನಿಷ್ಠ 8 ವರ್ಷ ಸೇವೆ ಸಲ್ಲಿಸಿ, ಖಾಯಂಪೂರ್ವ ಅವಧಿ ಪೂರೈಸಿರಬೇಕು ಹಾಗೂ ಯಾವುದೇ ಇಲಾಖಾ ವಿಚಾರಣೆ ಅಥವಾ ಕ್ರಿಮಿನಲ್ ಪ್ರಕರಣ ಹೊಂದಿರಬಾರದು.

ಕಲ್ಯಾಣ ಕರ್ನಾಟಕ (KK) ಮೀಸಲಾತಿ ಪ್ರಮಾಣಪತ್ರ: ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅನುಚ್ಛೇದ 371(ಜೆ) ರಂತೆ ಅನುಬಂಧ-ಎ ನಮೂನೆಯಲ್ಲಿ ಸಂಬಂಧಪಟ್ಟ ಉಪವಿಭಾಗದ ಸಹಾಯಕ ಆಯುಕ್ತರಿಂದ (Assistant Commissioner) ಪಡೆದ ಸ್ಥಳೀಯ ಅರ್ಹತಾ ಪ್ರಮಾಣಪತ್ರವನ್ನು ಹೊಂದಿರಬೇಕು ಹಾಗೂ ಮೂಲ ದಾಖಲಾತಿ ಪರಿಶೀಲನೆ ವೇಳೆ ಹಾಜರುಪಡಿಸಬೇಕು.

ಗಮನಿಸಿ: ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ. ಕೊನೆಯ ದಿನಾಂಕದೊಳಗೆ ಅಂಕಪಟ್ಟಿ ಹೊಂದಿರಬೇಕು

1. ಪ್ರವರ್ಗವಾರು ಹುದ್ದೆಗಳ ವರ್ಗೀಕರಣ (ಉಳಿಕೆ ಮೂಲ ವೃಂದ – RPC)

ಪ್ರವರ್ಗ ಅಗ್ನಿಶಾಮಕ ಸಿಬ್ಬಂದಿ (460) ಠಾಣಾಧಿಕಾರಿ – ನೇರ (14) ಠಾಣಾಧಿಕಾರಿ – ಸೇವಾ ನಿರತ (02)
ಸಾಮಾನ್ಯ ವರ್ಗ (GM) 230 07 01
ಪರಿಶಿಷ್ಟ ಜಾತಿ (ಪ್ರ-ಎ) 24 01 01 (SC ಒಟ್ಟು)
ಪರಿಶಿಷ್ಟ ಜಾತಿ (ಪ್ರ-ಬಿ) 24 01
ಪರಿಶಿಷ್ಟ ಜಾತಿ (ಪ್ರ-ಸಿ) 16 + 5* 01*
ಪರಿಶಿಷ್ಟ ಪಂಗಡ (ST) 14 00 00
ಪ್ರವರ್ಗ-1 18 01 00
ಪ್ರವರ್ಗ-2A 68 02 00
ಪ್ರವರ್ಗ-2B 18 01 00
ಪ್ರವರ್ಗ-3A 19 00 00
ಪ್ರವರ್ಗ-3B 24 00 00
ಒಟ್ಟು ಹುದ್ದೆಗಳು 460 14 02

2. ಕಲ್ಯಾಣ ಕರ್ನಾಟಕ ವೃಂದ (KK) – 14 ಹುದ್ದೆಗಳ ಪ್ರವರ್ಗವಾರು ವರ್ಗೀಕರಣ

ಪ್ರವರ್ಗ ಅಗ್ನಿಶಾಮಕ ಸಿಬ್ಬಂದಿ(10) ಠಾಣಾಧಿಕಾರಿ – ನೇರ (03) ಠಾಣಾಧಿಕಾರಿ – ಸೇವಾ ನಿರತ (01)
ಸಾಮಾನ್ಯ ವರ್ಗ (GM) 05 (ಇತರರು: 4, ಗ್ರಾಮೀಣ: 1) 02 00
ಪರಿಶಿಷ್ಟ ಜಾತಿ (SC) 02 01 00
ಪರಿಶಿಷ್ಟ ಪಂಗಡ (ST) 00 00 01
ಪ್ರವರ್ಗ-1 00 00 00
ಪ್ರವರ್ಗ-2A 01 00 00
ಪ್ರವರ್ಗ-2B 01 00 00
ಪ್ರವರ್ಗ-3A 01 00 00
ಪ್ರವರ್ಗ-3B 00 00 00
ಒಟ್ಟು ಹುದ್ದೆಗಳು (KK) 10 03 01

ವಯೋಮಿತಿ ಮತ್ತು ಅರ್ಜಿ ಶುಲ್ಕದ ವಿವರ

ಸರ್ಕಾರದ ಆದೇಶದನ್ವಯ ಒಂದು ಬಾರಿಗೆ ಅನ್ವಯವಾಗುವಂತೆ 5 ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆ ಸೇರಿಸಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ವಯೋಮಿತಿ ಹಾಗೂ ಆನ್‌ಲೈನ್ ಪರೀಕ್ಷಾ ಶುಲ್ಕವನ್ನು ಕೆಳಕಂಡಂತೆ ನಿಗದಿಪಡಿಸಲಾಗಿದೆ:

ವಿವರ / ಪ್ರವರ್ಗ ಅಗ್ನಿಶಾಮಕ (Fire Fighter) ಠಾಣಾಧಿಕಾರಿ (FSO)
ಕನಿಷ್ಠ ವಯೋಮಿತಿ 18 ವರ್ಷ 21 ವರ್ಷ
ಗರಿಷ್ಠ ವಯೋಮಿತಿ (GM) 31 ವರ್ಷ ನೇರ: 31 ವರ್ಷ
ಸೇವಾ ನಿರತ: 43 ವರ್ಷ
ಗರಿಷ್ಠ ವಯೋಮಿತಿ (SC/ST/Cat-1/2A/2B/3A/3B) 33 ವರ್ಷ ನೇರ: 33 ವರ್ಷ
ಸೇವಾ ನಿರತ: 45 ವರ್ಷ
ಶುಲ್ಕ (GM & 2A/2B/3A/3B) ₹500/- ₹750/-
ಶುಲ್ಕ (SC/ST/Cat-1/ಮಾಜಿ ಸೈನಿಕ) ₹300/- ₹500/-

ಮಾಜಿ ಸೈನಿಕರಿಗೆ: ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಅವಧಿಯ ಜೊತೆಗೆ ಹೆಚ್ಚುವರಿ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು ಹಾಗೂ ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

ಆಯ್ಕೆ ವಿಧಾನ, ದೈಹಿಕ ಹಾಗೂ ಲಿಖಿತ ಪರೀಕ್ಷೆ:

1. ದೇಹದಾರ್ಡ್ಯತೆ ಪರೀಕ್ಷೆ (PST – ಎರಡೂ ಹುದ್ದೆಗಳಿಗೆ)

  • ಕನಿಷ್ಠ ಎತ್ತರ: 168 ಸೆಂ.ಮೀ.
  • ಎದೆ ಸುತ್ತಳತೆ: ಕನಿಷ್ಠ 81 ಸೆಂ.ಮೀ (ಪೂರ್ಣ ಉಸಿರು ಹೊರಹಾಕಿದಾಗ) ಹಾಗೂ ಕನಿಷ್ಠ 5 ಸೆಂ.ಮೀ ಎದೆ ಉಬ್ಬಿಸುವಿಕೆ.
  • ಕನಿಷ್ಠ ತೂಕ: 50 ಕೆ.ಜಿ.
  • ಬಾಗಿದ ಮಂಡಿ (Bow legs), ತಾಗು ಮಂಡಿ (Knock knees) ಹಾಗೂ ಚಪ್ಪಟೆ ಪಾದ (Flat foot) ಹೊಂದಿರುವವರು ಅನರ್ಹರಾಗುತ್ತಾರೆ.

2. ದೈಹಿಕ ಸಾಮರ್ಥ್ಯ ಪರೀಕ್ಷೆ (PFT – 5ರಲ್ಲಿ ಕನಿಷ್ಠ 3 ಕಡ್ಡಾಯ)

ಪರೀಕ್ಷೆಯ ಅಂಶ ನೇರ ಅಭ್ಯರ್ಥಿ ಮಾಜಿ ಸೈನಿಕ / ಸೇವಾ ನಿರತ (FSO)
100 ಮೀಟರ್ ಓಟ 15 ಸೆಕೆಂಡ್ ಒಳಗೆ 20 ಸೆಕೆಂಡ್ ಒಳಗೆ
22 ಕೆ.ಜಿ ಭಾರದೊಂದಿಗೆ 100 ಮೀ. ಓಟ 25 ಸೆಕೆಂಡ್ ಒಳಗೆ 32 ಸೆಕೆಂಡ್ ಒಳಗೆ
22 ಕೆ.ಜಿ ಭಾರದೊಂದಿಗೆ 20 ಅಡಿ ಏಣಿ ಏರುವುದು 20 ಸೆಕೆಂಡ್ ಒಳಗೆ 25 ಸೆಕೆಂಡ್ ಒಳಗೆ
ಗುಂಡು ಎಸೆತ (3 ಅವಕಾಶ) 5.60 ಮೀ. (7.26 ಕೆ.ಜಿ) 3.75 ಮೀ. (4.0 ಕೆ.ಜಿ)
800 ಮೀ. / 400 ಮೀ. ಓಟ 800 ಮೀ. (2 ನಿ. 50 ಸೆ.) 400 ಮೀ. (2 ನಿ. 50 ಸೆ.)

3. ಹುದ್ದೆವಾರು ಅಂತಿಮ ಆಯ್ಕೆ ಪ್ರಕ್ರಿಯೆ:

  • ಅಗ್ನಿಶಾಮಕ ಸಿಬ್ಬಂದಿ (Fire Fighter – ಲಿಖಿತ ಪರೀಕ್ಷೆ ಇಲ್ಲ): SSLC ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ. ದೈಹಿಕ ಸಾಮರ್ಥ್ಯ ಪರೀಕ್ಷೆಯ ಪ್ರತಿ ಅಂಶಕ್ಕೆ 20 ಅಂಕಗಳಂತೆ (3ರಲ್ಲಿ ಪಾಸ್ = 60, 4ರಲ್ಲಿ ಪಾಸ್ = 80, 5ರಲ್ಲಿ ಪಾಸ್ = 100 ಅಂಕ) ನೀಡಲಾಗುತ್ತದೆ. PFT ಅಂಕಗಳು ಹಾಗೂ SSLC ಶೇಕಡವಾರು ಅಂಕಗಳನ್ನು ಸೇರಿಸಿ 1:1 ತಾತ್ಕಾಲಿಕ ಪಟ್ಟಿ ಪ್ರಕಟಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
  • ಅಗ್ನಿಶಾಮಕ ಠಾಣಾಧಿಕಾರಿ (FSO – ಲಿಖಿತ ಪರೀಕ್ಷೆ ಇದೆ): PST ಮತ್ತು PFT ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಬೆಂಗಳೂರು ನಗರದ ಆಯ್ದ ಕೇಂದ್ರಗಳಲ್ಲಿ ಆಫ್‌ಲೈನ್ (OMR) ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪತ್ರಿಕೆ-1 ಹಾಗೂ ಪತ್ರಿಕೆ-2 ರ ಒಟ್ಟು ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

FSO ಲಿಖಿತ ಪರೀಕ್ಷೆಯ ಮಾದರಿ:

ಪತ್ರಿಕೆ ವಿಷಯ (ಕನ್ನಡ / ಇಂಗ್ಲಿಷ್) ಪ್ರಶ್ನೆ / ಅಂಕ ಅವಧಿ
ಪತ್ರಿಕೆ-1 ಸಾಮಾನ್ಯ ಜ್ಞಾನ (General Knowledge) 100 / 100 90 ನಿಮಿಷ
ಪತ್ರಿಕೆ-2 ವಿಜ್ಞಾನ ಮತ್ತು ಆಪ್ಟಿಟ್ಯೂಡ್ 100 / 100 90 ನಿಮಿಷ
  • ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಓದಿರದ ಅಭ್ಯರ್ಥಿಗಳಿಗೆ 08-01-2027 ರಂದು 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ (ಕನಿಷ್ಠ 50 ಅಂಕ ಕಡ್ಡಾಯ).
  • ತರಬೇತಿ ಮತ್ತು ಖಾಯಂಪೂರ್ವ ಅವಧಿ: ಅಗ್ನಿಶಾಮಕ ಹುದ್ದೆಗೆ 6 ತಿಂಗಳ ಬುನಾದಿ ತರಬೇತಿ ಹಾಗೂ ಠಾಣಾಧಿಕಾರಿ ಹುದ್ದೆಗೆ 6 ತಿಂಗಳ ಬುನಾದಿ ತರಬೇತಿ + 6 ತಿಂಗಳ ಪ್ರಾಯೋಗಿಕ ತರಬೇತಿ ಇರುತ್ತದೆ. ಎರಡೂ ಹುದ್ದೆಗಳಿಗೆ 2 ವರ್ಷ ಖಾಯಂಪೂರ್ವ ಅವಧಿ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅನ್ವಯಿಸುತ್ತದೆ.

Karnataka Fire Department Recruitment 2026 ಪ್ರಮುಖ ದಿನಾಂಕಗಳು:

ವಿವರ ದಿನಾಂಕ
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ 23-11-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-12-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 23-12-2026
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (ವಿನಾಯಿತಿ ಇಲ್ಲದವರಿಗೆ) 08-01-2027

KSFES Recruitment 2026 Apply Online Links:

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು: ಅಭ್ಯರ್ಥಿಗಳು KEA ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಬಿಳಿ ಹಿನ್ನೆಲೆಯ ಇತ್ತೀಚಿನ ಪಾಸ್‌ಪೋರ್ಟ್ ಫೋಟೋ (JPEG, 50KB–200KB) ಹಾಗೂ ಬಿಳಿ ಹಾಳೆಯ ಮೇಲೆ ಕಪ್ಪು ಸ್ಕೆಚ್/ಮಾರ್ಕರ್ ಪೆನ್ನಿನಲ್ಲಿ ಮಾಡಿದ ಸಹಿಯನ್ನು (JPEG, 50KB–70KB) ಅಪ್‌ಲೋಡ್ ಮಾಡಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿಗೆ ಅವಕಾಶವಿರುವುದಿಲ್ಲವಾದ್ದರಿಂದ ಎಲ್ಲಾ ವಿವರಗಳನ್ನು ಹಾಗೂ ಮೀಸಲಾತಿ RD ಸಂಖ್ಯೆಗಳನ್ನು ಸರಿಯಾಗಿ ಪರಿಶೀಲಿಸಿ ಸಲ್ಲಿಸಿ.

ಅರಣ್ಯ ಇಲಾಖೆ ನೇಮಕಾತಿ 2026: ಅರ್ಜಿ ಆಹ್ವಾನ 

Telegram Group Join Now
WhatsApp Group Join Now

Leave a Comment