ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ದೈಹಿಕ ಪರೀಕ್ಷೆಯ ತಾತ್ಕಾಲಿಕ ದಿನಾಂಕ | Civil PC Physical Date 2026; Check Civil Police Constable ET/PST Dates

Telegram Group Join Now
WhatsApp Group Join Now

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳ ನೇಮಕಾತಿಯ ಮುಂದಿನ ಹಂತವಾದ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಯ (ET/PST) ದಿನಾಂಕಗಳ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

ಪೊಲೀಸ್ ಇಲಾಖೆಯ ಆಂತರಿಕ ಇ-ಮೇಲ್ ಹಾಗೂ ಫ್ಯಾಕ್ಸ್ ಸಂದೇಶಗಳ ಪ್ರಕಾರ, ಅರ್ಹ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆಗಳನ್ನು ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಲಿಖಿತ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಮೆರಿಟ್ ಆಧಾರಿತ ತಾತ್ಕಾಲಿಕ ಅಂಕ ಪಟ್ಟಿಯನ್ನು (Rank-wise Provisional Marks List) ಆಯಾ ಘಟಕವಾರು ಇಂದು (19-08-2026) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಲಿಖಿತ ಪರೀಕ್ಷೆಯ ಅಂಕಪಟ್ಟಿ ಪ್ರಕಟವಾದ ಬೆನ್ನಲ್ಲೇ ಇದೀಗ ಇಲಾಖೆಯು ದೈಹಿಕ ಪರೀಕ್ಷೆ ನಡೆಸಲು ಸಿದ್ಧತೆಗಳನ್ನು ಚುರುಕುಗೊಳಿಸಿದೆ.

ಇದೆ ರೀತಿ ಪೊಲೀಸ್ ಇಲಾಖೆಯ ಮಾಹಿತಿಗಳನ್ನು ಪಡೆಯಲು ನಮ್ಮ WhatsApp ಚಾನಲ್ ಗೆ Join ಆಗಿರಿ.

Civil PC Physical Date 2026:

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ದೈಹಿಕ ಪರೀಕ್ಷೆಯ ಸಂಭಾವ್ಯ ದಿನಾಂಕಗಳು:

ದಿನಾಂಕ 17-08-2026ರ ಇಲಾಖೆಯ ಆಂತರಿಕ ಸಂವಹನದಂತೆ, 1:5 ಅನುಪಾತದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೆಳಗಿನ ದಿನಾಂಕಗಳಲ್ಲಿ ದೈಹಿಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ:

  • ಉಳಿಕೆ ಮೂಲ ವೃಂದ (Non-HK / RPC) 3,395 ಹುದ್ದೆಗಳಿಗೆ: 31-08-2026 ರಿಂದ 07-09-2026 ರವರೆಗೆ.
  • ಕಲ್ಯಾಣ ಕರ್ನಾಟಕ (HK) 596 ಹುದ್ದೆಗಳಿಗೆ: 08-09-2026 ರಿಂದ 10-09-2026 ರವರೆಗೆ.

ದಕ್ಷಿಣ ವಲಯ (ಮೈಸೂರು) ವ್ಯಾಪ್ತಿಯ ಜಿಲ್ಲೆಗಳ ದೈಹಿಕ ಪರೀಕ್ಷಾ ವೇಳಾಪಟ್ಟಿ:

ದಿನಾಂಕ 19-08-2026ರ ಇಲಾಖೆಯ ಆಂತರಿಕ ಸಂವಹನದಂತೆ, ದಕ್ಷಿಣ ವಲಯ ಮೈಸೂರು ವ್ಯಾಪ್ತಿಗೆ ಒಳಪಡುವ ವಿವಿಧ ಘಟಕಗಳಲ್ಲಿ ನಿಗದಿಯಾಗಿರುವ ತಾತ್ಕಾಲಿಕ ದಿನಾಂಕಗಳು ಹಾಗೂ ಹಂಚಿಕೆ ಮಾಡಿರುವ ಅಭ್ಯರ್ಥಿಗಳ ಸಂಖ್ಯೆ ಕೆಳಗಿನಂತಿದೆ:

  • ಮೈಸೂರು ನಗರ: 31-08-2026 (350 ಅಭ್ಯರ್ಥಿಗಳು)
  • ಮೈಸೂರು ಜಿಲ್ಲೆ: 01-09-2026 (300 ಅಭ್ಯರ್ಥಿಗಳು)
  • ಹಾಸನ ಜಿಲ್ಲೆ: 02-09-2026 (200 ಅಭ್ಯರ್ಥಿಗಳು)
  • ಕೊಡಗು ಜಿಲ್ಲೆ: 03-09-2026 (375 ಅಭ್ಯರ್ಥಿಗಳು)
  • ಮಂಡ್ಯ ಜಿಲ್ಲೆ: 04-09-2026 (500 ಅಭ್ಯರ್ಥಿಗಳು)
  • ಚಾಮರಾಜನಗರ ಜಿಲ್ಲೆ: 05-09-2026 (250 ಅಭ್ಯರ್ಥಿಗಳು)

Civil PC Provisional Marks List 2026

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ: ಈ ಎಲ್ಲಾ ವಿವರಗಳು ಕೇವಲ ಪೊಲೀಸ್ ಇಲಾಖೆಯ ಆಂತರಿಕ ಪತ್ರ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯಾಗಿದ್ದು, ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಅಧಿಸೂಚನೆ ಪ್ರಕಟಗೊಂಡ ಬಳಿಕವಷ್ಟೇ ದಿನಾಂಕಗಳು ಅಂತಿಮಗೊಳ್ಳಲಿವೆ. ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಇಲಾಖೆಯ ವತಿಯಿಂದ ಅಧಿಕೃತವಾಗಿ ಮೊಬೈಲ್ ಸಂದೇಶ (SMS) ಮತ್ತು ಪ್ರವೇಶ ಪತ್ರವನ್ನು ಬಿಡುಗಡೆ ಮಾಡುತ್ತಾರೆ.

KEA ಹೊಸ ನೇಮಕಾತಿ ಅಧಿಸೂಚನೆ ಪ್ರಕಟ; ಆನ್‌ಲೈನ್‌ ಅರ್ಜಿ ಆಹ್ವಾನ 

ತೋಟಗಾರಿಕೆ ಇಲಾಖೆ ನೇಮಕಾತಿ 2026; ಅರ್ಜಿ ಆಹ್ವಾನ

ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2026

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment