ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ‘ನರ್ಸಿಂಗ್ ಆಫೀಸರ್’ (ಶುಶೂಷಾಧಿಕಾರಿ) ಹಾಗೂ ‘ಫಾರ್ಮಸಿ ಆಫೀಸರ್’ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಸೂಚನೆ ಹೊರಡಿಸಿದೆ.
ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ (KK) ವೃಂದಗಳೆರಡರ ಹುದ್ದೆಗಳಿಗೂ ಪ್ರತ್ಯೇಕ ಅಧಿಸೂಚನೆ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ
- ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
- ಇಲಾಖೆಗಳು: KREIS ಮತ್ತು ಕಾರ್ಮಿಕ ರಾಜ್ಯ ವಿಮಾ ಯೋಜನೆ (ESI) ವೈದ್ಯಕೀಯ ಸೇವೆಗಳ ಇಲಾಖೆ
- ಹುದ್ದೆಯ ಹೆಸರು: ನರ್ಸಿಂಗ್ ಆಫೀಸರ್ (ಶುಶೂಷಾಧಿಕಾರಿ) ಮತ್ತು ಫಾರ್ಮಸಿ ಆಫೀಸರ್
- ಒಟ್ಟು ಹುದ್ದೆಗಳ ಸಂಖ್ಯೆ: 233 ಹುದ್ದೆಗಳು (RPC: 188, KK: 45)
- ಉದ್ಯೋಗ ಸ್ಥಳ: ಕರ್ನಾಟಕ
- ವೇತನ ಶ್ರೇಣಿ: ರೂ. 44,425 ದಿಂದ ರೂ. 99,400/- ರವರೆಗೆ
KEA Recruitment 2026 ಹುದ್ದೆಗಳ ವಿವರ:
ಈ ನೇಮಕಾತಿಯು ಒಟ್ಟು 233 ಹುದ್ದೆಗಳಿಗೆ ನಡೆಯಲಿದ್ದು, ವೃಂದವಾರು ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಉಳಿಕೆ ಮೂಲ ವೃಂದ (RPC) – ಒಟ್ಟು 188 ಹುದ್ದೆಗಳು:
- ಫಾರ್ಮಸಿ ಆಫೀಸರ್: 98 ಹುದ್ದೆಗಳು.
- ನರ್ಸಿಂಗ್ ಆಫೀಸರ್ (ಶುಶೂಷಾಧಿಕಾರಿ): 90 ಹುದ್ದೆಗಳು.
ಕಲ್ಯಾಣ-ಕರ್ನಾಟಕ ವೃಂದ (KK) – ಒಟ್ಟು 45 ಹುದ್ದೆಗಳು:
- ನರ್ಸಿಂಗ್ ಆಫೀಸರ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ): 23 ಹುದ್ದೆಗಳು.
- ನರ್ಸಿಂಗ್ ಆಫೀಸರ್ (ಕಾರ್ಮಿಕ ರಾಜ್ಯ ವಿಮಾ ಯೋಜನೆ ಇಲಾಖೆ): 11 ಹುದ್ದೆಗಳು.
- ಫಾರ್ಮಸಿ ಆಫೀಸರ್ (ಕಾರ್ಮಿಕ ರಾಜ್ಯ ವಿಮಾ ಯೋಜನೆ ಇಲಾಖೆ): 11 ಹುದ್ದೆಗಳು.
ಶೈಕ್ಷಣಿಕ ವಿದ್ಯಾರ್ಹತೆ:
- ಫಾರ್ಮಸಿ ಆಫೀಸರ್: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಫಾರ್ಮಸಿಯಲ್ಲಿ ಡಿಪ್ಲೋಮಾ (Diploma in Pharmacy) ಹೊಂದಿರಬೇಕು ಹಾಗೂ ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ಕಡ್ಡಾಯವಾಗಿ ನೊಂದಾಯಿಸಿರಬೇಕು.
- ನರ್ಸಿಂಗ್ ಆಫೀಸರ್ (ಕಾರ್ಮಿಕ ರಾಜ್ಯ ವಿಮಾ ಯೋಜನೆ ಇಲಾಖೆ): ಜನರಲ್ ನರ್ಸಿಂಗ್‌ನಲ್ಲಿ ಡಿಪ್ಲೋಮಾ (GNM) ಹೊಂದಿರಬೇಕು ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೊಂದಾಯಿಸಿರಬೇಕು.
- ನರ್ಸಿಂಗ್ ಆಫೀಸರ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ – ಕ.ಕ ವೃಂದಕ್ಕೆ ಮಾತ್ರ): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ನರ್ಸಿಂಗ್ (B.Sc nursing) ಅಥವಾ ಪಿಯುಸಿ ಜೊತೆಗೆ ಜಿಎನ್ಎಂ (GNM) ಉತ್ತೀರ್ಣರಾಗಿರಬೇಕು ಮತ್ತು ಕೌನ್ಸಿಲ್‌ನಲ್ಲಿ ನೊಂದಾಯಿಸಿರಬೇಕು. ಇದರ ಜೊತೆಗೆ ಅಭ್ಯರ್ಥಿಗಳು ತಮ್ಮ ವ್ಯಾಸಂಗದಲ್ಲಿ (ಪದವಿ/ಪಿಯುಸಿ/ಎಸ್‌ಎಸ್‌ಎಲ್‌ಸಿ ಇತ್ಯಾದಿ) ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು ಅಥವಾ ನಿಗದಿತ ಕನ್ನಡ ಪರೀಕ್ಷೆ ಪಾಸಾಗಿರಬೇಕು.
ವೇತನ ವಿವರ:
- ನರ್ಸಿಂಗ್ ಆಫೀಸರ್ (ಶುಶೂಷಾಧಿಕಾರಿ): ರೂ. 54,175 ರಿಂದ ರೂ. 99,400 ವರೆಗೆ.
- ಫಾರ್ಮಸಿ ಆಫೀಸರ್: ರೂ. 44,425 ರಿಂದ ರೂ. 83,700 ವರೆಗೆ.
ವಯೋಮಿತಿ ಸಡಿಲಿಕೆ:
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಗಳು ತುಂಬಿರಬೇಕು. ಸರ್ಕಾರದ ಆದೇಶದಂತೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದ್ದು, ವಯೋಮಿತಿ ಈ ಕೆಳಗಿನಂತಿದೆ:
- ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷಗಳು.
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ಗರಿಷ್ಠ 43 ವರ್ಷಗಳು.
- ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST) / ಪ್ರವರ್ಗ-1 ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷಗಳು.
ಅರ್ಜಿ ಶುಲ್ಕ:
- ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (2A, 2B, 3A, 3B): ರೂ. 750/- (ರೂ.500 ಅರ್ಜಿ ಶುಲ್ಕ + 250 ಪ್ರಕ್ರಿಯೆ ಶುಲ್ಕ).
- ಪ.ಜಾ / ಪ.ಪಂ / ಪ್ರವರ್ಗ-1 / ಮಾಜಿ ಸೈನಿಕ / ತೃತೀಯ ಲಿಂಗದ ಅಭ್ಯರ್ಥಿಗಳು: ರೂ. 500/- (ರೂ.250 ಅರ್ಜಿ ಶುಲ್ಕ + 250 ಪ್ರಕ್ರಿಯೆ ಶುಲ್ಕ).
- ವಿಶೇಷ ಚೇತನ ಅಭ್ಯರ್ಥಿಗಳಿಗೆ: ರೂ. 250/- (ಪ್ರಕ್ರಿಯೆ ಶುಲ್ಕ ಮಾತ್ರ).
- ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 07-08-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-08-2026
- ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31-08-2026
KEA Recruitment 2026 ಪ್ರಮುಖ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ (RPC PDF): ಡೌನ್‌ಲೋಡ್
- ಅಧಿಕೃತ ಅಧಿಸೂಚನೆ (KKR PDF): ಡೌನ್‌ಲೋಡ್
- ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ (Non-HK): Apply Online
- ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ (HK): Apply Online
- ಅಧಿಕೃತ ವೆಬ್‌ಸೈಟ್: cetonline.karnataka.gov.in/kea
ಈ ಕೇಳಗಿನ ಸುದ್ದಿಗಳನ್ನು ಓದಿ: