ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ (Village Administrative Officer – VAO) ಸೇವೆ ಸಲ್ಲಿಸಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭರ್ಜರಿ ಸಿಹಿಸುದ್ದಿ ನೀಡಿದೆ.
ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿ ಖಾಲಿಯಿರುವ ಗ್ರೂಪ್-ಸಿ ವೃಂದದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ (KEA VAO Recruitment 2026) ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಈ ನೇಮಕಾತಿಯ ಮೂಲಕ ಉಳಿಕೆ ಮೂಲ ವೃಂದದ (RPC) 505 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದದ (KKR) 67 ಹುದ್ದೆಗಳು ಸೇರಿದಂತೆ ಒಟ್ಟು 572 ಖಾಲಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುತ್ತಿದೆ.
ದ್ವಿತೀಯ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 11, 2026 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 30, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
KEA VAO Recruitment 2026 ಸಂಕ್ಷಿಪ್ತ ವಿವರ
- ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತು ಕಂದಾಯ ಇಲಾಖೆ
- ನೇಮಕಾತಿ ಇಲಾಖೆ: ಕಂದಾಯ ಇಲಾಖೆ
- ಹುದ್ದೆಯ ಹೆಸರು: ಗ್ರಾಮ ಆಡಳಿತ ಅಧಿಕಾರಿ (VAO)
- ಒಟ್ಟು ಹುದ್ದೆಗಳ ಸಂಖ್ಯೆ: 572 ಹುದ್ದೆಗಳು (RPC: 505 + KK: 67)
- ಉದ್ಯೋಗ ಸ್ಥಳ: ಕರ್ನಾಟಕ
- ಮಾಸಿಕ ವೇತನ: ರೂ. 34,100 ದಿಂದ ರೂ. 67,600/- ರವರೆಗೆ
ಜಿಲ್ಲಾವಾರು ಹುದ್ದೆಗಳ ವಿವರ:
ಒಟ್ಟು 572 ಹುದ್ದೆಗಳನ್ನು ಎರಡು ವೃಂದಗಳ ಅಡಿಯಲ್ಲಿ ಜಿಲ್ಲಾವಾರು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:
ಉಳಿಕೆ ಮೂಲ ವೃಂದ (RPC) – 505 ಹುದ್ದೆಗಳು:
- ತುಮಕೂರು: 50 ಹುದ್ದೆಗಳು
- ಮಂಡ್ಯ: 50 ಹುದ್ದೆಗಳು
- ಬೆಳಗಾವಿ: 48 ಹುದ್ದೆಗಳು
- ಮೈಸೂರು: 45 ಹುದ್ದೆಗಳು
- ಹಾಸನ: 35 ಹುದ್ದೆಗಳು
- ಚಾಮರಾಜನಗರ: 31 ಹುದ್ದೆಗಳು
- ಬೆಂಗಳೂರು ದಕ್ಷಿಣ: 30 ಹುದ್ದೆಗಳು
- ಬೆಂಗಳೂರು ಗ್ರಾಮಾಂತರ: 29 ಹುದ್ದೆಗಳು
- ಕೋಲಾರ: 22 ಹುದ್ದೆಗಳು
- ಚಿಕ್ಕಬಳ್ಳಾಪುರ: 21 ಹುದ್ದೆಗಳು
- ಬೆಂಗಳೂರು ನಗರ: 20 ಹುದ್ದೆಗಳು
- ದಕ್ಷಿಣ ಕನ್ನಡ: 20 ಹುದ್ದೆಗಳು
- ಶಿವಮೊಗ್ಗ: 18 ಹುದ್ದೆಗಳು
- ಬಾಗಲಕೋಟೆ: 16 ಹುದ್ದೆಗಳು
- ಹಾವೇರಿ: 15 ಹುದ್ದೆಗಳು
- ಚಿತ್ರದುರ್ಗ: 15 ಹುದ್ದೆಗಳು
- ಗದಗ: 14 ಹುದ್ದೆಗಳು
- ಉಡುಪಿ: 10 ಹುದ್ದೆಗಳು
- ಚಿಕ್ಕಮಗಳೂರು: 10 ಹುದ್ದೆಗಳು
- ಬೀದರ್: 04 ಹುದ್ದೆಗಳು
- ರಾಯಚೂರು: 02 ಹುದ್ದೆಗಳು
ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ (KK) – 67 ಹುದ್ದೆಗಳು:
- ಕಲಬುರಗಿ: 40 ಹುದ್ದೆಗಳು
- ಬೀದರ್: 17 ಹುದ್ದೆಗಳು
- ರಾಯಚೂರು: 10 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕಡ್ಡಾಯವಾಗಿ ಈ ಕೆಳಗಿನ ವಿದ್ಯಾರ್ಹತೆಯ ಅಂಕಪಟ್ಟಿ/ಪ್ರಮಾಣಪತ್ರವನ್ನು ಹೊಂದಿರಬೇಕು:
- ಪಿ.ಯು.ಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ತತ್ಸಮಾನ ವಿದ್ಯಾರ್ಹತೆಗಳು: ಸಿಬಿಎಸ್ಇ ಮತ್ತು ಐಸಿಎಸ್ಇ ಮಂಡಳಿಯ 12ನೇ ತರಗತಿ ಪರೀಕ್ಷೆ, ಎನ್ಐಓಎಸ್ (NIOS) ಉನ್ನತ ಪ್ರೌಢ ಶಿಕ್ಷಣ ಕೋರ್ಸ್, 2 ವರ್ಷಗಳ ಐಟಿಐ ಕೋರ್ಸ್ ಜೊತೆಗೆ ಪಿಯು ಮಂಡಳಿಯ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣತೆ, ಜೆಓಸಿ (JOC) ಕೋರ್ಸ್ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ.
- ವಿಶೇಷ ಸೂಚನೆ: ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ (Awaiting Results) ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ವಯೋಮಿತಿ:
ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು.
ಗರಿಷ್ಠ ವಯೋಮಿತಿ (ಒಂದು ಬಾರಿಗೆ ನೀಡಲಾದ 5 ವರ್ಷಗಳ ಸಡಿಲಿಕೆ ಸೇರಿ):
- ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ: 40 ವರ್ಷಗಳು
- ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: 43 ವರ್ಷಗಳು
- SC / ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ: 45 ವರ್ಷಗಳು
ವಯೋಮಿತಿ ಸಡಿಲಿಕೆ:
ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಈ ಕೆಳಗಿನ ಹೆಚ್ಚುವರಿ ಸಡಿಲಿಕೆ ಇರುತ್ತದೆ:
- ವಿಶೇಷ ಚೇತನ ಅಭ್ಯರ್ಥಿಗಳಿಗೆ: 10 ವರ್ಷಗಳು
- ವಿಧವೆಯರಿಗೆ: 10 ವರ್ಷಗಳು
- ಜೀತ ಕಾರ್ಮಿಕರಿಗೆ: 10 ವರ್ಷಗಳು
- ಮಾಜಿ ಸೈನಿಕರು, ಎನ್ಸಿಸಿ ಪರಿವೀಕ್ಷಕರು ಮತ್ತು ಸರ್ಕಾರಿ ನೌಕರರಿಗೆ: ಸೇವೆ ಸಲ್ಲಿಸಿದ ಅವಧಿಗೆ ಅನುಗುಣವಾಗಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವನ್ನು ಕೇವಲ ಆನ್ಲೈನ್ ಮೂಲಕ ಮಾತ್ರ ಪಾವತಿಸಬೇಕಾಗಿವಾಗಿರುತ್ತದೆ:
- ಸಾಮಾನ್ಯ ಅರ್ಹತೆ (GM) ಮತ್ತು 2A, 2B, 3A, 3B ಅಭ್ಯರ್ಥಿಗಳಿಗೆ: ರೂ. 750/- (ರೂ. 500 ಅರ್ಜಿ ಶುಲ್ಕ + ರೂ. 250 ಪ್ರಕ್ರಿಯೆ ಶುಲ್ಕ)
- SC / ST, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳಿಗೆ: ರೂ. 500/- (ರೂ. 250 ಅರ್ಜಿ ಶುಲ್ಕ + ರೂ. 250 ಪ್ರಕ್ರಿಯೆ ಶುಲ್ಕ)
- ವಿಶೇಷ ಚೇತನ (ಅಂಗವಿಕಲ) ಅಭ್ಯರ್ಥಿಗಳಿಗೆ: ರೂ. 250/- (ಪ್ರಕ್ರಿಯೆ ಶುಲ್ಕ ಮಾತ್ರ)
ವೇತನ ವಿವರ:
ನೇಮಕಾತಿಗೊಳ್ಳುವ ಗ್ರಾಮ ಆಡಳಿತ ಅಧಿಕಾರಿ ಅಭ್ಯರ್ಥಿಗಳಿಗೆ ಈ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ:
- ವೇತನ ಶ್ರೇಣಿ: ರೂ. 34,100 – 800 – 35,700 – 900 – 39,300 – 1000 – 43,300 – 1125 – 47,800 – 1250 – 52,800 – 1375 – 58,300 – 1500 – 64,300 – 1650 – 67,600/- (ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯ ಅನ್ವಯವಾಗುತ್ತದೆ)
ಆಯ್ಕೆ ವಿಧಾನ:
ಅಭ್ಯರ್ಥಿಗಳ ಆಯ್ಕೆಯನ್ನು ಆಫ್ಲೈನ್ ಒಎಂಆರ್ (Offline-OMR) ಮಾದರಿಯ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ಮೂಲಕ ಮಾಡಲಾಗುತ್ತದೆ.
- ಪತ್ರಿಕೆ-1 (ಸಾಮಾನ್ಯ ಜ್ಞಾನ): 100 ಅಂಕಗಳು (2 ಗಂಟೆ ಅವಧಿ).
- ಪತ್ರಿಕೆ-2 (ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ): 100 ಅಂಕಗಳು (2 ಗಂಟೆ ಅವಧಿ).
- ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: ಎಸ್ಎಸ್ಎಲ್ಸಿಯಲ್ಲಿ ಕನ್ನಡವನ್ನು ಓದದ ಅಭ್ಯರ್ಥಿಗಳಿಗೆ 150 ಅಂಕಗಳ ಪರೀಕ್ಷೆ ಇರುತ್ತದೆ (ಕನಿಷ್ಠ 50 ಅಂಕ ಗಳಿಸಬೇಕು).
- ಅರ್ಹತಾ ಅಂಕಗಳು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆಗಾಗಿ ಕನಿಷ್ಠ ಶೇ. 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
- ನೆಗೆಟಿವ್ ಮಾರ್ಕಿಂಗ್: ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು (1/4th) ಕಳೆಯಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಅಭ್ಯರ್ಥಿಗಳನ್ನು ಕೆಇಎ ಅಧಿಕೃತ ಪೋರ್ಟಲ್ ಮೂಲಕ ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬೇಕು:
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್
https://cetonline.karnataka.gov.in/keaಗೆ ಭೇಟಿ ನೀಡಿ. - ಮುಖಪುಟದಲ್ಲಿ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಆನ್ಲೈನ್ ಲಿಂಕ್ ಅನ್ನು ಆಯ್ಕೆ ಮಾಡಿ.
- ಅಭ್ಯರ್ಥಿಗಳು ಕೇವಲ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
- ಇತ್ತೀಚಿನ ಬಣ್ಣದ ಪಾಸ್ಪೋರ್ಟ್ ಅಳತೆಯ ಭಾವಚಿತ್ರ (50KB-200KB) ಮತ್ತು ಸಹಿಯನ್ನು (50KB-70KB) JPEG ಮಾದರಿಯಲ್ಲಿ ಅಪ್ಲೋಡ್ ಮಾಡಿ.
- ನಿಮ್ಮ ಪ್ರವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಬ್ಯಾಂಕಿಂಗ್ ಮೂಲಕ ಪಾವತಿಸಿ.
- ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿಗೆ ಅವಕಾಶವಿರುವುದಿಲ್ಲ, ಆದ್ದರಿಂದ ಸಬ್ಮಿಟ್ ಮಾಡುವ ಮುನ್ನ ಪರಿಶೀಲಿಸಿ, ನಂತರ ಪ್ರಿಂಟ್ ಔಟ್ ಪಡೆದುಕೊಳ್ಳಿ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 11-07-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-07-2026
- ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 31-07-2026
ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕಗಳು:
- ಉಳಿಕೆ ಮೂಲ ವೃಂದ (RPC): 04-10-2026
- ಕಲ್ಯಾಣ ಕರ್ನಾಟಕ ವೃಂದ (KKR): 25-10-2026
ಪ್ರಮುಖ ಲಿಂಕ್ಗಳು
- ಅಧಿಕೃತ ಅಧಿಸೂಚನೆ (RPC PDF): ಡೌನ್ಲೋಡ್
- ಅಧಿಕೃತ ಅಧಿಸೂಚನೆ (KKR PDF): ಡೌನ್ಲೋಡ್
- ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ (Non-HK): Apply Online
- ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ (HK): Apply Online
- ಅಧಿಕೃತ ವೆಬ್ಸೈಟ್: cetonline.karnataka.gov.in/kea
ಈ ಕೇಳಗಿನ ಸುದ್ದಿಗಳನ್ನು ಓದಿ: