ಆಭರಣ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಹಾಗೂ ಗ್ರಾಹಕರ ಗಮನ ಸೆಳೆಯುವಂತಹ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಬುಧವಾರ (ಜೂನ್ 10) ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ದಾಖಲಾಗಿದೆ.
ಕಳೆದ ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಬಂಗಾರದ ದರ, ಇಂದಿನ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿದೆ. ಇದು ಆಭರಣ ಖರೀದಿಸಲು ಮುಂದಾಗಿರುವ ಗ್ರಾಹಕರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ನಿರಾಳತೆ ತಂದಿದೆ.
ಮಾರುಕಟ್ಟೆಯ ಇಂದಿನ ಅಧಿಕೃತ ದತ್ತಾಂಶವನ್ನು ಗಮನಿಸಿದರೆ, ಆಭರಣ ತಯಾರಿಕೆಗೆ ಅತಿ ಹೆಚ್ಚು ಬಳಕೆಯಾಗುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 395 ರೂಪಾಯಿಗಳಷ್ಟು ಕಡಿಮೆಯಾಗಿದೆ. ಇದರೊಂದಿಗೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರವು ಬರೋಬ್ಬರಿ 3,950 ರೂಪಾಯಿ ಇಳಿಕೆ ಕಂಡು, 1,36,450 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.
ಈ ಸುದ್ದಿ ಓದಿ: ಏರ್ಟೆಲ್ ವಿದ್ಯಾರ್ಥಿವೇತನ 2026: ಉಚಿತ ಲ್ಯಾಪ್ಟಾಪ್, 100% ಶುಲ್ಕ ವಿನಾಯಿತಿ
ಇದೇ ರೀತಿ, ಹೂಡಿಕೆದಾರರ ಮೊದಲ ಆದ್ಯತೆಯಾಗಿರುವ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂ ಮೇಲೆ 430 ರೂಪಾಯಿ ಇಳಿಕೆಯಾಗಿದೆ. ಪರಿಣಾಮವಾಗಿ, 10 ಗ್ರಾಂ ಶುದ್ಧ ಚಿನ್ನದ ಬೆಲೆಯು ಒಂದೇ ದಿನದಲ್ಲಿ 4,300 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಪ್ರಸ್ತುತ 1,48,860 ರೂಪಾಯಿಗೆ ವಹಿವಾಟುಗುತ್ತಿದೆ.
ಇನ್ನು, ಹಗುರವಾದ ಒಡವೆಗಳಿಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಪ್ರತಿ 10 ಗ್ರಾಂಗೆ 3,230 ರೂಪಾಯಿ ಇಳಿಕೆಯಾಗಿದ್ದು, 1,11,640 ರೂಪಾಯಿಗೆ ಲಭ್ಯವಿದೆ.
Today Gold Rate 10-06-2026:
22 ಕ್ಯಾರೆಟ್ ಆಭರಣ ಚಿನ್ನ: 10 ಗ್ರಾಂ ಬೆಲೆಯಲ್ಲಿ ಇಂದು ₹3,950 ಕಡಿಮೆಯಾಗಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹13,645 | ▼ ₹395 ಇಳಿಕೆ |
| 8 ಗ್ರಾಂ | ₹1,09,160 | ▼ ₹3,160 ಇಳಿಕೆ |
| 10 ಗ್ರಾಂ | ₹1,36,450 | ▼ ₹3,950 ಇಳಿಕೆ |
24 ಕ್ಯಾರೆಟ್ ಶುದ್ಧ ಚಿನ್ನ: 10 ಗ್ರಾಂ ಬೆಲೆಯಲ್ಲಿ ಇಂದು ₹4,300 ಕಡಿಮೆಯಾಗಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹14,886 | ▼ ₹430 ಇಳಿಕೆ |
| 8 ಗ್ರಾಂ | ₹1,19,088 | ▼ ₹3,440 ಇಳಿಕೆ |
| 10 ಗ್ರಾಂ | ₹1,48,860 | ▼ ₹4,300 ಇಳಿಕೆ |
18 ಕ್ಯಾರೆಟ್ ಚಿನ್ನ: 10 ಗ್ರಾಂ ಬೆಲೆಯಲ್ಲಿ ಇಂದು ₹3,230 ಕಡಿಮೆಯಾಗಿದೆ.
| ತೂಕ | ಇಂದಿನ ಬೆಲೆ | ಬೆಲೆ ವ್ಯತ್ಯಾಸ |
|---|---|---|
| 1 ಗ್ರಾಂ | ₹11,164 | ▼ ₹323 ಇಳಿಕೆ |
| 8 ಗ್ರಾಂ | ₹89,312 | ▼ ₹2,584 ಇಳಿಕೆ |
| 10 ಗ್ರಾಂ | ₹1,11,640 | ▼ ₹3,230 ಇಳಿಕೆ |
ಈ ಸುದ್ದಿ ಓದಿ: ವಿದ್ಯಾರ್ಥಿಗಳಿಗೆ ₹35 ಸಾವಿರ ಪ್ರೋತ್ಸಾಹಧನ; ಆನ್ಲೈನ್ ಅರ್ಜಿ ಆಹ್ವಾನ
ಜೂನ್ ತಿಂಗಳ ದರ ಇಳಿಕೆಯ ಲೆಕ್ಕಾಚಾರ:
ಜೂನ್ ತಿಂಗಳ ಆರಂಭದಿಂದಲೂ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ನಿರಂತರವಾಗಿ ಕುಸಿತದ ಟ್ರೆಂಡ್ ಕಾಯ್ದುಕೊಂಡಿರುವುದು ಗ್ರಾಹಕರಿಗೆ ವರದಾನವಾಗಿದೆ. ತಿಂಗಳ ಮೊದಲ ದಿನವಾದ ಜೂನ್ 1 ರಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,43,200 ರೂಪಾಯಿ ಇತ್ತು. ಆದರೆ, ಜೂನ್ 10ರ ವೇಳೆಗೆ ಈ ದರ 1,36,450 ರೂಪಾಯಿಗೆ ಇಳಿದಿದೆ. ಅಂದರೆ, ಕೇವಲ ಹತ್ತು ದಿನಗಳ ಅಂತರದಲ್ಲಿ 10 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ಒಟ್ಟಾರೆ 6,750 ರೂಪಾಯಿಗಳಷ್ಟು ಗಣನೀಯ ಇಳಿಕೆಯಾಗಿದೆ.
ಮತ್ತೊಂದೆಡೆ, ಶುದ್ಧ ಚಿನ್ನದ (24 ಕ್ಯಾರೆಟ್) ದರವನ್ನು ಅವಲೋಕಿಸಿದರೆ, ಜೂನ್ 1 ರಂದು 1,56,220 ರೂಪಾಯಿ ಇದ್ದ 10 ಗ್ರಾಂ ಬೆಲೆ, ಇದೀಗ 1,48,860 ರೂಪಾಯಿಗೆ ತಲುಪಿದೆ. ಈ ಮೂಲಕ ಕೇವಲ ಹತ್ತು ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಟ್ಟು 7,360 ರೂಪಾಯಿಗಳಷ್ಟು ಭಾರಿ ಇಳಿಕೆಯಾಗಿದೆ.
ಈ ಸುದ್ದಿ ಓದಿ: KSP ಸಿವಿಲ್ ಕಾನ್ಸ್ಟೇಬಲ್ ನೇಮಕಾತಿ 2026
ಚಿನ್ನದ ಬೆಲೆ ಭಾರಿ ಇಳಿಕೆಗೆ ಪ್ರಮುಖ ಕಾರಣಗಳು:
ಅಮೆರಿಕದ ಬಲವಾದ ಆರ್ಥಿಕ ದತ್ತಾಂಶ (US Jobs Data): ಅಮೆರಿಕದಲ್ಲಿ ಹೊಸ ಉದ್ಯೋಗ ಸೃಷ್ಟಿಯ ಪ್ರಮಾಣ ನಿರೀಕ್ಷೆಗಿಂತ ಭಾರಿ ಏರಿಕೆಯಾಗಿದೆ. ಅಲ್ಲಿನ ಆರ್ಥಿಕತೆ ಬಲವಾಗಿದೆ ಎಂಬ ವರದಿಗಳು ಹೊರಬಿದ್ದ ತಕ್ಷಣ, ಜಾಗತಿಕ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಹಿಂದಕ್ಕೆ ಪಡೆದು ಷೇರುಪೇಟೆಯತ್ತ ಮುಖ ಮಾಡಿದ್ದಾರೆ. ಇದರಿಂದ ಚಿನ್ನದ ಬೇಡಿಕೆ ಕಡಿಮೆಯಾಗಿ ಬೆಲೆ ಇಳಿದಿದೆ.
ಬಡ್ಡಿ ದರ ಇಳಿಕೆ ವಿಳಂಬ: ಅಮೆರಿಕದ ಕೇಂದ್ರ ಬ್ಯಾಂಕ್ (ಫೆಡರಲ್ ರಿಸರ್ವ್) ತನ್ನ ಬಡ್ಡಿ ದರಗಳನ್ನು ಸದ್ಯಕ್ಕೆ ಕಡಿಮೆ ಮಾಡುವುದಿಲ್ಲ ಎಂಬ ಸ್ಪಷ್ಟನೆ ನೀಡಿದೆ. ಬ್ಯಾಂಕ್ ಬಡ್ಡಿ ದರಗಳು ಹೆಚ್ಚಿದ್ದಾಗ ಹೂಡಿಕೆದಾರರಿಗೆ ಚಿನ್ನಕ್ಕಿಂತ ಬಾಂಡ್‌ಗಳಲ್ಲಿ (Bonds) ಹೂಡಿಕೆ ಮಾಡುವುದು ಹೆಚ್ಚು ಲಾಭದಾಯಕವಾಗಿ ಕಾಣುತ್ತದೆ. ಹೀಗಾಗಿ ಚಿನ್ನದ ಮಾರಾಟ ಹೆಚ್ಚಾಗಿದೆ.
ಬಲಗೊಂಡ ಡಾಲರ್ ಮೌಲ್ಯ (Strong US Dollar): ಜಾಗತಿಕ ಮಾರುಕಟ್ಟೆಯಲ್ಲಿ ಬೇರೆ ಕರೆನ್ಸಿಗಳ ಎದುರು ಅಮೆರಿಕದ ಡಾಲರ್ ಮೌಲ್ಯ ದಿಢೀರ್ ಬಲಗೊಂಡಿದೆ. ಡಾಲರ್ ಮೌಲ್ಯ ಏರಿಕೆಯಾದಾಗಲೆಲ್ಲಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗುವುದು ಸಹಜ ಆರ್ಥಿಕ ಪ್ರಕ್ರಿಯೆ.
ಕೇಂದ್ರ ಬ್ಯಾಂಕ್‌ಗಳಿಂದ ಖರೀದಿ ಸ್ಥಗಿತ: ಕಳೆದ ಹಲವು ತಿಂಗಳುಗಳಿಂದ ಭಾರಿ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದ ಚೀನಾ ಸೇರಿದಂತೆ ಹಲವು ದೇಶಗಳ ಕೇಂದ್ರ ಬ್ಯಾಂಕ್‌ಗಳು, ಬೆಲೆ ವಿಪರೀತ ಏರಿಕೆಯಾದ ಕಾರಣ ತಮ್ಮ ಖರೀದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿವೆ. ಬೃಹತ್ ಪ್ರಮಾಣದ ಖರೀದಿ ನಿಂತಾಗ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದು ಬೆಲೆ ಇಳಿಯುತ್ತದೆ.
ಲಾಭದ ನಗದೀಕರಣ (Profit Booking): ಫೆಬ್ರವರಿ ಅಂತ್ಯ ಹಾಗೂ ಮಾರ್ಚ್ ತಿಂಗಳಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಹೀಗಾಗಿ, ಕಡಿಮೆ ಬೆಲೆಗೆ ಚಿನ್ನ ಖರೀದಿಸಿದ್ದ ದೊಡ್ಡ ದೊಡ್ಡ ಹೂಡಿಕೆದಾರರು, ಗರಿಷ್ಠ ಬೆಲೆ ಸಿಕ್ಕಾಗ ತಮ್ಮಲ್ಲಿದ್ದ ಚಿನ್ನವನ್ನು ಒಮ್ಮೆಲೆ ಮಾರಿ ಲಾಭ ಮಾಡಿಕೊಂಡಿದ್ದಾರೆ (Profit Booking). ಮಾರುಕಟ್ಟೆಯಲ್ಲಿ ಒಮ್ಮೆಲೆ ಹೆಚ್ಚು ಚಿನ್ನ ಮಾರಾಟವಾದಾಗ ಬೆಲೆ ಕುಸಿಯುತ್ತದೆ.
ಈ ಕೇಳಗಿನ ಸುದ್ದಿಗಳನ್ನು ಓದಿ: