ಐಡಿಎಫ್‌ಸಿ ಬ್ಯಾಂಕ್ ಸ್ಕಾಲರ್‌ಶಿಪ್ 2026: ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ವಿದ್ಯಾರ್ಥಿವೇತನ | IDFC First Bank MBA Scholarship 2026 Online Application

Telegram Group Join Now
WhatsApp Group Join Now

ಉನ್ನತ ಶಿಕ್ಷಣ ಪಡೆಯುವ ದೊಡ್ಡ ಕನಸು ಹೊಂದಿದ್ದರೂ, ಆರ್ಥಿಕ ಅಡಚಣೆಯ ಕಾರಣದಿಂದಾಗಿ ತಮ್ಮ ಗುರಿ ತಲುಪಲು ಕಷ್ಟಪಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಐಡಿಎಫ್‌ಸಿ ಫಸ್ಟ್ ಬ್ಯಾಂಕ್’ (IDFC FIRST Bank) ಭರ್ಜರಿ ಸಿಹಿಸುದ್ದಿ ನೀಡಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಆಸರೆಯಾಗುವ ಸದುದ್ದೇಶದಿಂದ ಬ್ಯಾಂಕ್ ಹೊಸದೊಂದು ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಈ ಮಹತ್ವಾಕಾಂಕ್ಷಿ ಉಪಕ್ರಮವನ್ನು ‘IDFC First Bank MBA Scholarship 2026-28’ ಎಂದು ಕರೆಯಲಾಗುತ್ತದೆ. ಎರಡು ವರ್ಷಗಳ ಪೂರ್ಣಾವಧಿಯ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಕೋರ್ಸ್‌ನ (MBA) ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತಿದೆ.

ಈ ಆರ್ಥಿಕ ನೆರವಿನ ಮೂಲಕ ವಿದ್ಯಾರ್ಥಿಗಳು ಯಾವುದೇ ಹಣಕಾಸಿನ ತೊಂದರೆಗಳಿಲ್ಲದೆ ತಮ್ಮ ಸ್ನಾತಕೋತ್ತರ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮದಡಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಒಟ್ಟು 2 ಲಕ್ಷ ರೂಪಾಯಿಗಳ ಬೃಹತ್ ಆರ್ಥಿಕ ನೆರವು ಸಿಗಲಿದೆ.

ಅಂದರೆ, ಎರಡು ವರ್ಷಗಳ ಕೋರ್ಸ್ ಅವಧಿಯಲ್ಲಿ ಪ್ರತಿ ವರ್ಷಕ್ಕೆ ತಲಾ 1 ಲಕ್ಷ ರೂಪಾಯಿಗಳಂತೆ ಹಣವನ್ನು ಬ್ಯಾಂಕ್ ವಿತರಿಸಲಿದೆ. ಇದು ವಿದ್ಯಾರ್ಥಿಗಳ ವಾರ್ಷಿಕ ಕಾಲೇಜು ಶುಲ್ಕ ಹಾಗೂ ಇತರೆ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲಿದೆ.

ಈ ಸ್ಕಾಲರ್‌ಶಿಪ್ ಪಡೆಯಲು ಇರಬೇಕಾದ ಅರ್ಹತೆಗಳು, ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ವಿವರ ಕೆಳಗಿನಂತಿದೆ:

ಅರ್ಹತೆಗಳು

  • ಭಾರತದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  • ವಿದ್ಯಾರ್ಥಿಗಳು 2 ವರ್ಷಗಳ ಪೂರ್ಣಾವಧಿಯ ಎಂಬಿಎ (MBA) ಕಾರ್ಯಕ್ರಮದ ಮೊದಲ ವರ್ಷದಲ್ಲಿ (2026-28ರ ಬ್ಯಾಚ್) ವ್ಯಾಸಂಗ ಮಾಡುತ್ತಿರಬೇಕು.
  • ಈ ಯೋಜನೆಗೆ ಒಳಪಡುವ ನಿಗದಿತ ಹಾಗೂ ಮಾನ್ಯತೆ ಪಡೆದ ಎಂಬಿಎ ಕಾಲೇಜುಗಳಲ್ಲಿ ಪ್ರವೇಶ ಪಡೆದಿರಬೇಕು.
  • ಕುಟುಂಬದ ಒಟ್ಟು ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 6 ಲಕ್ಷ ರೂ.ಗಳಿಗಿಂತ ಕಡಿಮೆ ಅಥವಾ ಸಮನಾಗಿರಬೇಕು.
  • ಅರ್ಜಿದಾರರ ಆಧಾರ್ ಕಾರ್ಡ್‌ಗೆ ಕಡ್ಡಾಯವಾಗಿ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು.
  • ಕುಟುಂಬದಲ್ಲಿ ಆದಾಯ ಗಳಿಸುವ ಯಾವುದೇ ಸದಸ್ಯರು ಐಡಿಎಫ್‌ಸಿ ಫಸ್ಟ್ (IDFC FIRST) ಬ್ಯಾಂಕ್‌ನ ಉದ್ಯೋಗಿಯಾಗಿರಬಾರದು.

ಅಗತ್ಯ ದಾಖಲೆಗಳು

  • ಪ್ರಸ್ತುತ ವರ್ಷದ ಕಾಲೇಜು ಪ್ರವೇಶ ಪುರಾವೆ (ಕಾಲೇಜಿನ ಹೆಸರು, ಪ್ರವೇಶ ವರ್ಷ ಮತ್ತು ಬ್ಯಾಚ್ ವಿವರಗಳೊಂದಿಗೆ).
  • ಕಾಲೇಜಿನ ಶುಲ್ಕ ಪಾವತಿಸಿದ ರಶೀದಿಯ ಪ್ರತಿ.
  • ವಯಸ್ಸು ಅಥವಾ ನಿವಾಸದ ಪುರಾವೆಗಾಗಿ: ಜನನ ಪ್ರಮಾಣಪತ್ರ, 10 ನೇ ತರಗತಿಯ ಅಂಕಪಟ್ಟಿ ಅಥವಾ ಪಾಸ್‌ಪೋರ್ಟ್.
  • ಆದಾಯದ ಪುರಾವೆ: ಕುಟುಂಬದ ದುಡಿಯುವ ಸದಸ್ಯರ ಆದಾಯ ಪ್ರಮಾಣಪತ್ರ ಅಥವಾ ಐಟಿಆರ್ 143(1) ದಾಖಲೆ.
  • ಕುಟುಂಬದಲ್ಲಿ ದುಡಿಯುವ ಸದಸ್ಯರು ಇಲ್ಲದಿದ್ದರೆ, ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದ ‘ಆದಾಯವಿಲ್ಲ’ ಎಂಬ ಪ್ರಮಾಣಪತ್ರ.
  • ವಿಕಲಚೇತನ ವಿದ್ಯಾರ್ಥಿಯಾಗಿದ್ದರೆ ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ).
  • ಶೈಕ್ಷಣಿಕ ಸಾಲ ಪಡೆದಿದ್ದರೆ ಬ್ಯಾಂಕ್‌ನಿಂದ ಮಂಜೂರಾದ ಸಾಲದ ಪತ್ರ.
  • ಕುಟುಂಬದ ಏಕೈಕ ಆದಾಯ ಗಳಿಸುವ ಸದಸ್ಯರು ಸಾವನ್ನಪ್ಪಿದ್ದರೆ ಅವರ ಮರಣ ಪ್ರಮಾಣಪತ್ರ.
  • ಎಂಬಿಎ ವ್ಯಾಸಂಗಕ್ಕಾಗಿ ಬೇರೆ ಯಾವುದಾದರೂ ಸ್ಕಾಲರ್‌ಶಿಪ್ ಪಡೆದಿದ್ದರೆ ಅದರ ದಾಖಲೆಗಳು.

ಪ್ರಮುಖ ದಿನಾಂಕಗಳು:
ಕೊನೆಯ ದಿನಾಂಕ: 08-07-2026

ಪ್ರಮುಖ ಲಿಂಕ್‌ಗಳು:
Application Link: Apply Online
ಅಧಿಕೃತ ವೆಬ್‌ಸೈಟ್: www.buddy4study.com

ಅರ್ಜಿ ಸಲ್ಲಿಸುವುದು ಹೇಗೆ?

  1. ಮೊದಲಿಗೆ ಆನ್‌ಲೈನ್ ವಿದ್ಯಾರ್ಥಿವೇತನ ಪೋರ್ಟಲ್ ಆದ Buddy4Study ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಅಲ್ಲಿ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆ, ಅಥವಾ ಜಿಮೇಲ್ (Gmail) ಖಾತೆಯ ಮೂಲಕ Buddy4Study ನಲ್ಲಿ ರಿಜಿಸ್ಟರ್ (ನೋಂದಣಿ) ಮಾಡಿಕೊಳ್ಳಿ.
  3. ನೋಂದಣಿಯಾದ ನಂತರ, ನಿಮ್ಮ ಲಾಗಿನ್ ಐಡಿ ಬಳಸಿ ‘ಆನ್‌ಲೈನ್ ಅರ್ಜಿ ನಮೂನೆ’ ಪುಟಕ್ಕೆ ಲಾಗಿನ್ ಆಗಿ.
  4. ನಿಮ್ಮನ್ನು ‘IDFC First Bank MBA Scholarship 2026-28’ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿ Apply Now ಬಟನ್ ಮೇಲೆ ಕ್ಲಿಕ್ ಮಾಡಿ.
  5. ನಿಮ್ಮ ಅರ್ಹತೆಯನ್ನು ಪರಿಶೀಲಿಸಿದ ನಂತರ, ನಿಮ್ಮ ಆಧಾರ್ ಕಾರ್ಡ್ ಮತ್ತು ಅದಕ್ಕೆ ಲಿಂಕ್ ಆದ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸಿ (Verify ಮಾಡಿ).
  6. ಆನ್‌ಲೈನ್ ಅರ್ಜಿ ನಮೂನೆ ಓಪನ್‌ ಆಗುತ್ತದೆ, ಅದರಲ್ಲಿ ಕೇಳಲಾದ ನಿಮ್ಮ ಎಲ್ಲಾ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ತಪ್ಪಿಲ್ಲದೆ ಭರ್ತಿ ಮಾಡಿ.
  7. ಮೇಲ್ಕಾಣಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸರಿಯಾದ ಅಳತೆಯಲ್ಲಿ ಅಪ್‌ಲೋಡ್ ಮಾಡಿ.
  8. ಅಂತಿಮವಾಗಿ, ಒದಗಿಸಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿ.

ಏರ್‌ಟೆಲ್ ವಿದ್ಯಾರ್ಥಿವೇತನ 2026: ಉಚಿತ ಲ್ಯಾಪ್‌ಟಾಪ್, 100% ಶುಲ್ಕ ವಿನಾಯಿತಿ

ವಿದ್ಯಾರ್ಥಿಗಳಿಗೆ ₹35 ಸಾವಿರ ಪ್ರೋತ್ಸಾಹಧನ; ಆನ್‌ಲೈನ್‌ ಅರ್ಜಿ ಆಹ್ವಾನ

SSLC ಪಾಸಾದ ವಿದ್ಯಾರ್ಥಿಗಳಿಗೆ 15,000 ರೂ. ಪ್ರೋತ್ಸಾಹಧನ

Telegram Group Join Now
WhatsApp Group Join Now

Leave a Comment