ಗ್ರಾಮೀಣ ಭಾಗದ ಮತ್ತು ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಉಚಿತ ಹಾಸ್ಟೆಲ್ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ.
ದೂರದ ಊರುಗಳಿಗೆ ತೆರಳಿ ಓದುವ ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
2026-27 ನೇ ಶೈಕ್ಷಣಿಕ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ‘ಮೆಟ್ರಿಕ್-ಪೂರ್ವ’ (5 ರಿಂದ 10ನೇ ತರಗತಿ) ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮೆಟ್ರಿಕ್ ನಂತರದ ಉಚಿತ ಹಾಸ್ಟೆಲ್ ಅರ್ಜಿ ಸಲ್ಲಿಕೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಯಾರು ಅರ್ಜಿ ಸಲ್ಲಿಸಬಹುದು?
- 5ನೇ ತರಗತಿಯಿಂದ 10ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳು. (ಸರ್ಕಾರಿ, ಅನುದಾನಿತ ಅಥವಾ ಮಾನ್ಯತೆ ಪಡೆದ ಖಾಸಗಿ ಶಾಲೆಯಾಗಿರಬೇಕು).
- ಈ ವಸತಿ ನಿಲಯಗಳು ಪ್ರಮುಖವಾಗಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಕ್ಕೆ (ST) ಸೇರಿದ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದು, ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಬೇಕಾಗುವ ಪ್ರಮುಖ ದಾಖಲೆಗಳು:
- SATS ಐಡಿ: ವಿದ್ಯಾರ್ಥಿಯ ಶಾಲಾ ದಾಖಲಾತಿ ಸಂಖ್ಯೆ (ಶಾಲೆಯಲ್ಲಿ ಸಿಗುತ್ತದೆ).
- ಜಾತಿ ಮತ್ತು ಆದಾಯ ಪ್ರಮಾಣಪತ್ರ: ಇದು ವಿದ್ಯಾರ್ಥಿಯ ಹೆಸರಿನಲ್ಲೇ ಇರಬೇಕು. ಆನ್ಲೈನ್ನಲ್ಲಿ ಅರ್ಜಿ ಹಾಕುವಾಗ ಇದರ ‘RD ಸಂಖ್ಯೆ’ ನಮೂದಿಸಬೇಕು.
- ಆಧಾರ್ ಕಾರ್ಡ್: ವಿದ್ಯಾರ್ಥಿಯ ಆಧಾರ್ ಮಾಹಿತಿಗಳು.
- ಮೊಬೈಲ್ ಸಂಖ್ಯೆ: ಪ್ರಸ್ತುತ ಬಳಕೆಯಲ್ಲಿರುವ ಮೊಬೈಲ್ ನಂಬರ್.
- ಫೋಟೋ: ವಿದ್ಯಾರ್ಥಿಯ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ.
ಆಧಾರ್ ಇ-ಕೆವೈಸಿ ಕಡ್ಡಾಯ:
ಹಾಸ್ಟೆಲ್ ಪ್ರವೇಶಕ್ಕೆ ಸಮಾಜ ಕಲ್ಯಾಣ ಇಲಾಖೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಆಧಾರ್ ಕಾರ್ಡ್ಗೆ ‘ಇ-ಕೆವೈಸಿ’ (e-KYC) ಆಗಿರುವುದು ಕಡ್ಡಾಯ. ಅಂದರೆ, ಆಧಾರ್ ಕೇಂದ್ರಕ್ಕೆ ಹೋಗಿ ವಿದ್ಯಾರ್ಥಿಯ ಬೆರಳಚ್ಚು (ಬಯೋಮೆಟ್ರಿಕ್) ಮತ್ತು ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಸಬೇಕು. ಇದು ಆಗದಿದ್ದರೆ, ಆನ್ಲೈನ್ನಲ್ಲಿ ನಿಮ್ಮ ಅರ್ಜಿ ಸಬ್ಮಿಟ್ ಆಗುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ? ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ swdhmis.karnataka.gov.in ಗೆ ಭೇಟಿ ನೀಡಿ. ಅಲ್ಲಿ ‘Pre Metric’ ವಿಭಾಗವನ್ನು ಆಯ್ಕೆ ಮಾಡಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬಹುದು. ಕೊನೆಯ ದಿನಾಂಕ: ಜೂನ್ 30, 2026 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಸಹಾಯವಾಣಿ: ಅರ್ಜಿ ಸಲ್ಲಿಸುವಾಗ ಏನಾದರೂ ತೊಂದರೆಯಾದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆ 94823 00400 ಗೆ ಕರೆ ಮಾಡಬಹುದು.
SSLC Prize Money 2026: SSLC ಪಾಸಾದ ವಿದ್ಯಾರ್ಥಿಗಳಿಗೆ 15,000 ರೂ. ಪ್ರೋತ್ಸಾಹಧನ
ಸುಕನ್ಯಾ ಸಮೃದ್ಧಿ ಯೋಜನೆ: ದಿನಕ್ಕೆ ₹100 ಉಳಿಸಿ, ಲಕ್ಷ-ಲಕ್ಷ ಹಣ ಪಡೆಯಿರಿ