ಸುಕನ್ಯಾ ಸಮೃದ್ಧಿ ಯೋಜನೆ: ದಿನಕ್ಕೆ ₹100 ಉಳಿಸಿ, ಲಕ್ಷ-ಲಕ್ಷ ಹಣ ಪಡೆಯಿರಿ

Telegram Group Join Now
WhatsApp Group Join Now

ಕೇಂದ್ರ ಸರ್ಕಾರದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಅಭಿಯಾನದ ಅಡಿ ಜಾರಿಗೆ ತಂದಿರುವ ‘ಸುಕನ್ಯಾ ಸಮೃದ್ಧಿ ಯೋಜನೆ’ಯು (SSY) ಹೆಣ್ಣುಮಕ್ಕಳ ಉನ್ನತ ಶಿಕ್ಷಣ ಹಾಗೂ ವಿವಾಹದ ಆರ್ಥಿಕ ಹೊರೆಯನ್ನು ತಗ್ಗಿಸುವ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ.

ಸಣ್ಣ ಉಳಿತಾಯ ಯೋಜನೆಗಳ ಪೈಕಿ ಅತಿ ಹೆಚ್ಚು ಬಡ್ಡಿ ಹಾಗೂ ತೆರಿಗೆ ವಿನಾಯಿತಿ ನೀಡುವ ಈ ಯೋಜನೆಯ ಸಂಪೂರ್ಣ ವಿವರ, ಅಗತ್ಯ ದಾಖಲೆಗಳು ಹಾಗೂ ಹೊಸ ನಿಯಮಗಳ ಮಾಹಿತಿ ಇಲ್ಲಿದೆ.

ಖಾತೆ ಎಲ್ಲಿ ತೆರೆಯಬಹುದು ಮತ್ತು ಬಡ್ಡಿದರ ಎಷ್ಟು?: ಸುಕನ್ಯಾ ಸಮೃದ್ಧಿ ಖಾತೆಯನ್ನು ಕೇವಲ ಅಂಚೆ ಕಚೇರಿಯಲ್ಲಿ ಮಾತ್ರವಲ್ಲ, ಆರ್‌ಬಿಐ ಮಾನ್ಯತೆ ಪಡೆದ ಎಸ್‌ಬಿಐ (SBI), ಕೆನರಾ ಬ್ಯಾಂಕ್, ಆಕ್ಸಿಸ್ (Axis), ಎಚ್‌ಡಿಎಫ್‌ಸಿ (HDFC) ಸೇರಿದಂತೆ ದೇಶದ ಯಾವುದೇ ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕ್‌ಗಳಲ್ಲೂ ತೆರೆಯಬಹುದು.

ಕೇಂದ್ರ ಸರ್ಕಾರವೇ ನೇರವಾಗಿ ಈ ಯೋಜನೆಯನ್ನು ನಿರ್ವಹಿಸುವುದರಿಂದ, ನೀವು ಅಂಚೆ ಕಚೇರಿ ಅಥವಾ ಯಾವುದೇ ಬ್ಯಾಂಕ್‌ನಲ್ಲಿ ಖಾತೆ ತೆರೆದರೂ ಬಡ್ಡಿದರ ಒಂದೇ ಆಗಿರುತ್ತದೆ. ಪ್ರಸ್ತುತ ಸರ್ಕಾರವು ಠೇವಣಿಯ ಮೇಲೆ ಶೇ. 8.20% ಬಡ್ಡಿದರವನ್ನು ನೀಡುತ್ತಿದೆ.

Sukanya Samriddhi Yojana ಅಗತ್ಯ ದಾಖಲೆಗಳು:

ನೀವು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗುವಾಗ ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು:

  1. SSY ಖಾತೆ ತೆರೆಯುವ ಫಾರ್ಮ್ (ಇದು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಚಿತವಾಗಿ ಸಿಗುತ್ತದೆ).
  2. ಹೆಣ್ಣು ಮಗುವಿನ ಜನನ ಪ್ರಮಾಣಪತ್ರ (Birth Certificate – ಕಡ್ಡಾಯ).
  3. ಪೋಷಕರ/ಪಾಲಕರ ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ವೋಟರ್ ಐಡಿ).
  4. ಪೋಷಕರ ವಿಳಾಸದ ಪುರಾವೆ (ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಅಥವಾ ರೇಷನ್ ಕಾರ್ಡ್).
  5. ಭಾವಚಿತ್ರಗಳು: ಹೆಣ್ಣು ಮಗುವಿನ ಮತ್ತು ಪೋಷಕರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು (2-3 ಕಾಪಿ).
  6. ಆರಂಭಿಕ ಠೇವಣಿ ಮೊತ್ತ (ಕನಿಷ್ಠ 250 ರೂ. ನಗದು ಅಥವಾ ಚೆಕ್). (ಒಂದು ವೇಳೆ ಒಂದೇ ಹೆರಿಗೆಯಲ್ಲಿ ಅವಳಿ ಅಥವಾ ತ್ರಿವಳಿ ಹೆಣ್ಣುಮಕ್ಕಳು ಜನಿಸಿದ್ದರೆ, ಸರ್ಕಾರಿ ವೈದ್ಯಾಧಿಕಾರಿಗಳಿಂದ ಪಡೆದ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ).

ಅರ್ಹತಾ ನಿಯಮಗಳು:

  • ಹೆಣ್ಣು ಮಗು ಹುಟ್ಟಿದಾಗಿನಿಂದ ಆಕೆಗೆ 10 ವರ್ಷ ತುಂಬುವ ಒಳಗಾಗಿ ಪೋಷಕರು ಈ ಖಾತೆಯನ್ನು ತೆರೆಯಬಹುದು.
  • ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ.

ಹೂಡಿಕೆಯ ಮಿತಿ ಹಾಗೂ ಅವಧಿ:

  • ಕನಿಷ್ಠ ಮತ್ತು ಗರಿಷ್ಠ ಮೊತ್ತ: ಒಂದು ಆರ್ಥಿಕ ವರ್ಷದಲ್ಲಿ (ಏಪ್ರಿಲ್ ನಿಂದ ಮಾರ್ಚ್‌ವರೆಗೆ) ಕನಿಷ್ಠ 250 ರೂಪಾಯಿಯಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು.
  • ಹಣ ಕಟ್ಟುವ ಅವಧಿ: ಖಾತೆ ತೆರೆದ ದಿನಾಂಕದಿಂದ ಸತತ 15 ವರ್ಷಗಳ ಕಾಲ ಖಾತೆಗೆ ಹಣ ಜಮಾ ಮಾಡುವುದು ಕಡ್ಡಾಯ.

ಮೆಚ್ಯೂರಿಟಿ ಮತ್ತು ಹಣ ಹಿಂಪಡೆಯುವಿಕೆ:

  • ಶಿಕ್ಷಣಕ್ಕಾಗಿ (Partial Withdrawal): ಮಗಳಿಗೆ 18 ವರ್ಷ ತುಂಬಿದಾಗ ಅಥವಾ ಆಕೆ 10ನೇ ತರಗತಿ ಪಾಸಾದ ನಂತರ, ಆಕೆಯ ಉನ್ನತ ಶಿಕ್ಷಣದ ಉದ್ದೇಶಕ್ಕಾಗಿ ಖಾತೆಯಲ್ಲಿರುವ ಒಟ್ಟು ಬ್ಯಾಲೆನ್ಸ್‌ನ ಶೇ. 50 ರಷ್ಟು ಹಣವನ್ನು ಹಿಂಪಡೆಯಬಹುದು.
  • ಸಂಪೂರ್ಣ ಮುಕ್ತಾಯ (Maturity): ಖಾತೆ ತೆರೆದ 21 ವರ್ಷಗಳ ನಂತರ ಖಾತೆಯು ಸಂಪೂರ್ಣ ಮೆಚ್ಯೂರ್ ಆಗುತ್ತದೆ. ಅಥವಾ ಮಗಳಿಗೆ 18 ವರ್ಷ ತುಂಬಿ ಆಕೆಯ ವಿವಾಹ ನಿಶ್ಚಯವಾದರೆ, ಮದುವೆಯ ಕಾರಣ ನೀಡಿ ಖಾತೆಯನ್ನು ಸಂಪೂರ್ಣವಾಗಿ ಮುಚ್ಚಿ ಪೂರ್ತಿ ಹಣವನ್ನು ಪಡೆಯಬಹುದು.

ಗಮನಿಸಬೇಕಾದ ಹೊಸ ನಿಯಮಗಳು (ಅಕ್ಟೋಬರ್ 1 ರಿಂದ ಜಾರಿ):

  • “ಈ ಮೊದಲು ಅಜ್ಜ-ಅಜ್ಜಿಯರು ತಮ್ಮ ಮೊಮ್ಮಕ್ಕಳ ಹೆಸರಿನಲ್ಲಿ ಸುಕನ್ಯಾ ಖಾತೆ ತೆರೆಯಲು ಅವಕಾಶವಿತ್ತು. ಆದರೆ ಅಕ್ಟೋಬರ್ 1, 2024 ರಿಂದಲೇ ಜಾರಿಗೆ ಬಂದಿರುವ ಹೊಸ ನಿಯಮದ ಪ್ರಕಾರ, ಕಾನೂನುಬದ್ಧ ಪೋಷಕರು ಅಥವಾ ತಂದೆ-ತಾಯಿ ಮಾತ್ರ ಖಾತೆಯನ್ನು ನಿರ್ವಹಿಸಬೇಕು. ಅಜ್ಜ-ಅಜ್ಜಿಯರು ಖಾತೆ ತೆರೆದಿದ್ದರೆ ಅದನ್ನು ಕಡ್ಡಾಯವಾಗಿ ಮಗುವಿನ ಪೋಷಕರ ಹೆಸರಿಗೆ ವರ್ಗಾಯಿಸಬೇಕು, ಇಲ್ಲದಿದ್ದರೆ ಖಾತೆ ಸ್ಥಗಿತಗೊಳ್ಳುತ್ತದೆ.”
  • ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ವಾರ್ಷಿಕ 1.5 ಲಕ್ಷ ರೂ. ವರೆಗಿನ ಹೂಡಿಕೆಗೆ ಸಂಪೂರ್ಣ ತೆರಿಗೆ ವಿನಾಯಿತಿ (Tax Benefit) ಸಿಗಲಿದೆ. ಬಡ್ಡಿ ಹಾಗೂ ಮೆಚ್ಯೂರಿಟಿ ಹಣಕ್ಕೂ ಯಾವುದೇ ತೆರಿಗೆ ಇರುವುದಿಲ್ಲ.

SSLC Prize Money 2026: SSLC ಪಾಸಾದ ವಿದ್ಯಾರ್ಥಿಗಳಿಗೆ 15,000 ರೂ. ಪ್ರೋತ್ಸಾಹಧನ

ಲೇಬರ್ ಕಾರ್ಡ್ ಇದ್ದವರಿಗೆ ₹60,000 ಉಚಿತ ಸಹಾಯಧನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment