SSC GD Constable Notification 2025: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ; SSC 25,487 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Telegram Group Join Now
WhatsApp Group Join Now

ದೇಶದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಯುವಕ-ಯುವತಿಯರಿಗೆ ಸ್ಟಾಪ್ ಸೆಲೆಕ್ಷನ್ ಕಮಿಷನ್ (SSC) ಸಿಹಿ ಸುದ್ದಿ ನೀಡಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs) ಖಾಲಿ ಇರುವ 25,487 ಕಾನ್ಸ್‌ಟೇಬಲ್ (General Duty) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಬಿಎಸ್‌ಎಫ್ (BSF), ಸಿಐಎಸ್‌ಎಫ್ (CISF), ಸಿಆರ್‌ಪಿಎಫ್ (CRPF), ಐಟಿಬಿಪಿ, ಎಸ್‌ಎಸ್‌ಬಿ, ಎಸ್‌ಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಖಾಲಿ ಇರುವ ಕಾನ್ಸ್‌ಟೇಬಲ್ (GD) ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯಲಿದೆ.

SSC GD Constable Notification 2025:

ನೇಮಕಾತಿ ಸಂಸ್ಥೆ: ಸ್ಟಾಪ್ ಸೆಲೆಕ್ಷನ್ ಕಮಿಷನ್ (SSC)
ವೇತನ ಶ್ರೇಣಿ: SSC ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 25,487
ಉದ್ಯೋಗ ಸ್ಥಳ: All India

ಹುದ್ದೆಗಳ ವಿವರ (ಒಟ್ಟು 25,487):

  • ಪುರುಷರು: 23,467 ಹುದ್ದೆಗಳು.
  • ಮಹಿಳೆಯರು: 2,020 ಹುದ್ದೆಗಳು.
  • ಅತಿ ಹೆಚ್ಚು ಹುದ್ದೆಗಳು CISF (14,595) ಮತ್ತು CRPF (5,490) ನಲ್ಲಿವೆ.

ಅರ್ಹತೆ ಮತ್ತು ವಯೋಮಿತಿ:

  • ವಿದ್ಯಾರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ SSLC ಅಥವಾ 10ನೇ ತರಗತಿ (Matriculation) ಉತ್ತೀರ್ಣರಾಗಿರಬೇಕು (01-01-2026 ರ ಒಳಗೆ).
  • ವಯಸ್ಸು: 18 ರಿಂದ 23 ವರ್ಷದೊಳಗಿರಬೇಕು. ಎಸ್‌ಸಿ/ಎಸ್‌ಟಿ ಅವರಿಗೆ 5 ವರ್ಷ ಮತ್ತು ಒಬಿಸಿ ಅವರಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ವೇತನ ಶ್ರೇಣಿ:

ಅಧಿಸೂಚನೆಯ ಪ್ರಕಾರ, ಕಾನ್ಸ್‌ಟೇಬಲ್ (GD) ಹುದ್ದೆಗಳಿಗೆ ವೇತನ ಶ್ರೇಣಿ ಈ ಕೆಳಗಿನಂತಿದೆ:

  • ವೇತನ ಶ್ರೇಣಿ (Pay Scale): ₹ 21,700/- ರಿಂದ ₹ 69,100/- ರವರೆಗೆ. (Level-3).

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ₹100/-
  • ಮಹಿಳೆಯರು, ಎಸ್‌ಸಿ/ಎಸ್‌ಟಿ ಮತ್ತು ಮಾಜಿ ಸೈನಿಕರಿಗೆ: ಶುಲ್ಕ ವಿನಾಯಿತಿ ಇದೆ.

ಆಯ್ಕೆ ಪ್ರಕ್ರಿಯೆ:

  1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) – ಕನ್ನಡದಲ್ಲೂ ಬರೆಯಬಹುದು.
  2. ದೈಹಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಪ್ರಮಾಣ ಪರೀಕ್ಷೆ (PST).
  3. ವೈದ್ಯಕೀಯ ಪರೀಕ್ಷೆ (Medical Exam) ಮತ್ತು ದಾಖಲೆ ಪರಿಶೀಲನೆ.

ದೈಹಿಕ ಪರೀಕ್ಷೆ ವಿವರ (PET):

  • ಪುರುಷರು: 24 ನಿಮಿಷದಲ್ಲಿ 5 ಕಿ.ಮೀ ಓಡಬೇಕು.
  • ಮಹಿಳೆಯರು: 8.5 ನಿಮಿಷದಲ್ಲಿ 1.6 ಕಿ.ಮೀ ಓಡಬೇಕು.

SSC GD Constable Application Date 2025

  • ಅರ್ಜಿ ಸಲ್ಲಿಕೆ ಆರಂಭ: 01 ಡಿಸೆಂಬರ್ 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2025
  • ಪರೀಕ್ಷಾ ದಿನಾಂಕ (CBT): ಫೆಬ್ರವರಿ – ಏಪ್ರಿಲ್ 2026.

ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತರು ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್ https://ssc.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: ssc.gov.in

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ 2025

ರಾಯಚೂರು ಮತ್ತು ಕೊಪ್ಪಳ DCC ಬ್ಯಾಂಕ್ ನೇಮಕಾತಿ 2025

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment