ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಶಿಪ್; ₹60,000 ವಿದ್ಯಾರ್ಥಿವೇತನ | Aditya Birla Capital Scholarship 2025-26 Apply Online

Telegram Group Join Now
WhatsApp Group Join Now

ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಪ್ರತಿಭಾವಂತ ಬಾಲಕಿಯರ ಶಿಕ್ಷಣಕ್ಕೆ ನೆರವಾಗಲು ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ “Aditya Birla Capital Scholarship 2025-26” ಕಾರ್ಯಕ್ರಮವನ್ನು ಘೋಷಿಸಿದೆ.

ಈ ಯೋಜನೆಯಡಿ 9ನೇ ತರಗತಿಯಿಂದ ಹಿಡಿದು ಐಐಟಿ, ಐಐಎಂಗಳಂತಹ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.

Aditya Birla Capital Scholarship 2025 ಎಷ್ಟು ಸ್ಕಾಲರ್‌ಶಿಪ್ ಸಿಗುತ್ತದೆ?

  1. ಶಾಲಾ ವಿದ್ಯಾರ್ಥಿನಿಯರಿಗೆ (9-12 ನೇ ತರಗತಿ):
    • ಅರ್ಹತೆ: 9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರು.
    • ಪ್ರಯೋಜನ: ವಾರ್ಷಿಕ ₹25,000/- ವಿದ್ಯಾರ್ಥಿವೇತನ.
  2. ಸಾಮಾನ್ಯ ಪದವಿ (General Degree – 3 ವರ್ಷ):
    • ಅರ್ಹತೆ: ಬಿ.ಕಾಂ, ಬಿ.ಎಸ್ಸಿ, ಬಿ.ಎ ಮುಂತಾದ ಸಾಮಾನ್ಯ ಪದವಿ ಕೋರ್ಸ್‌ಗಳಿಗೆ ಸೇರಿರುವವರು.
    • ಪ್ರಯೋಜನ: ವಾರ್ಷಿಕ ₹30,000/- ವಿದ್ಯಾರ್ಥಿವೇತನ.
  3. ವೃತ್ತಿಪರ ಪದವಿ (Professional Degree – 4 ವರ್ಷ):
    • ಅರ್ಹತೆ: ಇಂಜಿನಿಯರಿಂಗ್ (B.E/B.Tech) ಅಥವಾ ಇತರೆ 4 ವರ್ಷದ ವೃತ್ತಿಪರ ಕೋರ್ಸ್ ಮಾಡುತ್ತಿರುವವರು.
    • ನೆರವು: ವಾರ್ಷಿಕ ₹45,000/- ವಿದ್ಯಾರ್ಥಿವೇತನ.
  4. ಐಐಟಿ / ಎನ್‌ಐಟಿ / ಐಐಎಂ ವಿದ್ಯಾರ್ಥಿನಿಯರಿಗೆ:
    • ಅರ್ಹತೆ: ದೇಶದ ಪ್ರತಿಷ್ಠಿತ ಐಐಟಿ, ಎನ್‌ಐಟಿ, ಐಐಎಂ ಅಥವಾ ನ್ಯಾಷನಲ್ ಲಾ ಯೂನಿವರ್ಸಿಟಿಗಳಲ್ಲಿ (NLU) ಪದವಿ/ಸ್ನಾತಕೋತ್ತರ ಪದವಿ ಓದುತ್ತಿರುವವರು.
    • ಪ್ರಯೋಜನ: ವಾರ್ಷಿಕ ₹60,000/- ವಿದ್ಯಾರ್ಥಿವೇತನ.

ಸಾಮಾನ್ಯ ಅರ್ಹತೆಗಳು:

  • ಈ ಸ್ಕಾಲರ್‌ಶಿಪ್ ಕೇವಲ ಬಾಲಕಿಯರಿಗೆ (Girls Only) ಸೀಮಿತವಾಗಿದೆ.
  • ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕ ಗಳಿಸಿರಬೇಕು.
  • ಕುಟುಂಬದ ವಾರ್ಷಿಕ ಆದಾಯ ₹6 ಲಕ್ಷ ಮೀರಿರಬಾರದು.
  • ಆದಿತ್ಯ ಬಿರ್ಲಾ ಕ್ಯಾಪಿಟಲ್ ಮತ್ತು ಬಡ್ಡಿ4ಸ್ಟಡಿ ಉದ್ಯೋಗಿಗಳ ಮಕ್ಕಳಿಗೆ ಇದು ಅನ್ವಯಿಸುವುದಿಲ್ಲ.

ಬೇಕಾಗುವ ದಾಖಲೆಗಳು:

  • ಪಾಸ್‌ಪೋರ್ಟ್ ಅಳತೆಯ ಫೋಟೋ.
  • ಹಿಂದಿನ ವರ್ಷದ ಅಂಕಪಟ್ಟಿ (Marks Card).
  • ಆಧಾರ್ ಕಾರ್ಡ್ / ಗುರುತಿನ ಚೀಟಿ.
  • ಪ್ರಸ್ತುತ ಸಾಲಿನ ಪ್ರವೇಶಾತಿ ರಸೀದಿ (Fee Receipt / Admission Letter).
  • ಶೈಕ್ಷಣಿಕ ವೆಚ್ಚಗಳ ರಸೀದಿಗಳು (ಹಾಸ್ಟೆಲ್, ಮೆಸ್, ಪುಸ್ತಕಗಳು ಇತ್ಯಾದಿ).
  • ಬ್ಯಾಂಕ್ ಪಾಸ್‌ಬುಕ್.
  • ಆದಾಯ ಪ್ರಮಾಣ ಪತ್ರ (Income Certificate).

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-12-2025

ಪ್ರಮುಖ ಲಿಂಕ್‌ಗಳು:
Aditya Birla Capital Scholarship 2025-26 Online Application Link:‌ Apply ಮಾಡಿ

Tata Capital Pankh Scholarship 2025

HDFC Scholarship 2025: HDFC ಬ್ಯಾಂಕ್‌ನಿಂದ ಸಿಗಲಿದೆ ₹75,000 ವಿದ್ಯಾರ್ಥಿವೇತನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment