Free Coaching 2026: IAS, KAS ಉಚಿತ ತರಬೇತಿಗೆ ಅರ್ಜಿ ಆಹ್ವಾನ

Telegram Group Join Now
WhatsApp Group Join Now

ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗದ (UPSC/KPSC) ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಅಧಿಕಾರಿಯಾಗುವ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಸರ್ಕಾರ ಸುವರ್ಣಾವಕಾಶವೊಂದನ್ನು ಒದಗಿಸಿದೆ.

ಸಮಾಜ ಕಲ್ಯಾಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (KKRDB) ಅನುದಾನದಡಿ 2025-26ನೇ ಸಾಲಿನ ಉಚಿತ ಐಎಎಸ್ (IAS) ಮತ್ತು ಕೆಎಎಸ್ (KAS) ಪರೀಕ್ಷಾ ಪೂರ್ವಭಾವಿ ತರಬೇತಿಗೆ (Free Coaching 2026) ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಡಳಿತ ಸೇವೆಗೆ ಆಯ್ಕೆಯಾಗಬೇಕು ಎಂಬ ಉದ್ದೇಶದಿಂದ ಕೇವಲ ಈ ಭಾಗದ ಜಿಲ್ಲೆಗಳ (ಕಲಬುರಗಿ, ಕೊಪ್ಪಳ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು, ವಿಜಯನಗರ) ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ.

ತರಬೇತಿ ಪಡೆಯುವವರ ಸಂಖ್ಯೆ ಹಾಗೂ ಅವಧಿ: ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Test) ನಡೆಸಿ, ಅದರಲ್ಲಿ ಗಳಿಸಿದ ಅಂಕಗಳ ಮೆರಿಟ್ ಹಾಗೂ ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

  • IAS ತರಬೇತಿಗೆ: 100 ಅಭ್ಯರ್ಥಿಗಳ ಆಯ್ಕೆ.
  • KAS ತರಬೇತಿಗೆ: 400 ಅಭ್ಯರ್ಥಿಗಳ ಆಯ್ಕೆ.
  • ತರಬೇತಿ ಅವಧಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಕಲಬುರಗಿಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದಲ್ಲಿ 10 ತಿಂಗಳ ಕಾಲ ಉಚಿತ ತರಬೇತಿ ನೀಡಲಾಗುತ್ತದೆ. (ಈ ಅವಧಿಯಲ್ಲಿ ವಸತಿ ಅಥವಾ ಶಿಷ್ಯವೇತನ ಸೌಲಭ್ಯ ಇರುವುದಿಲ್ಲ ಎಂಬುದನ್ನು ಗಮನಿಸಬೇಕು).

ಶೈಕ್ಷಣಿಕ ಅರ್ಹತೆ ಹಾಗೂ ವಯೋಮಿತಿ:

  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು. ಪದವಿ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವವರೂ ಅರ್ಜಿ ಸಲ್ಲಿಸಲು ಅರ್ಹರಿದ್ದು, ಆದರೆ ದಾಖಲಾತಿ ಪರಿಶೀಲನೆಯ ಹಂತದ ವೇಳೆಗೆ ಕಡ್ಡಾಯವಾಗಿ ಪದವಿ ಮುಕ್ತಾಯಗೊಳಿಸಿರುವ ಅಧಿಕೃತ ದಾಖಲೆ ಒದಗಿಸಬೇಕು.
  • ವಯೋಮಿತಿ: ಅಭ್ಯರ್ಥಿಗಳ ವಯಸ್ಸು 21 ವರ್ಷದಿಂದ 37 ವರ್ಷದ ಒಳಗಿರಬೇಕು.

ಸಾಮಾನ್ಯ ಅರ್ಹತೆಗಳು ಮತ್ತು ಷರತ್ತುಗಳು:

  • ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು ಹಾಗೂ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಭಾಗದ ‘371(ಜೆ)’ ಪ್ರಮಾಣ ಪತ್ರ ಹೊಂದಿರಬೇಕು.
  • ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 5 ಲಕ್ಷ ರೂ. ಮೀರಬಾರದು.
  • ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಿಂದ IAS/KAS ತರಬೇತಿ ಪಡೆದವರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ. ಆದರೆ SSC/RRB/Banking/Group-C ತರಬೇತಿ ಪಡೆದವರು ಇದಕ್ಕೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ:

  • ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಮೀಸಲಾತಿ ವಿವರ: ಒಟ್ಟು ಸೀಟುಗಳನ್ನು ಈ ಕೆಳಗಿನಂತೆ ಮೀಸಲಿಡಲಾಗಿದೆ:

  • ಪರಿಶಿಷ್ಟ ಜಾತಿ (SC): 40%
  • ಪರಿಶಿಷ್ಟ ಪಂಗಡ (ST): 10%
  • ಇತರೆ ಹಿಂದುಳಿದ ವರ್ಗ (OBC): 32% (ಇದರಲ್ಲಿ ಪ್ರವರ್ಗ-1: 4%, 2A: 15%, 2B: 4%, 3A: 4%, 3B: 5%)
  • ಸಾಮಾನ್ಯ ವರ್ಗ (GM): 18% (ಒಟ್ಟು ಸೀಟುಗಳಲ್ಲಿ ಶೇ. 33 ರಷ್ಟು ಮಹಿಳೆಯರಿಗೆ ಹಾಗೂ ಶೇ. 4 ರಷ್ಟು ವಿಶೇಷ ಚೇತನರಿಗೆ ಸಮತಳ ಮೀಸಲಾತಿ ಇರಲಿದೆ).

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 07-05-2026
  • ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 21-05-2026
  • ಪ್ರವೇಶ ಪತ್ರ ಡೌನ್‌ಲೋಡ್ ಆರಂಭ: 28-05-2026 ರಿಂದ
  • ಪ್ರವೇಶ ಪರೀಕ್ಷೆಯ (Entrance Exam) ದಿನಾಂಕ: 31-05-2026 (ಪರೀಕ್ಷಾ ಕೇಂದ್ರ: ಕಲಬುರಗಿ).

Free Coaching 2026 Notification Links:

ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದೊಳಗೆ ಅಧಿಕೃತ ವೆಬ್‌ಸೈಟ್ kalaburagi.nic.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪತ್ರ ವ್ಯವಹಾರ ಇರುವುದಿಲ್ಲವಾದ್ದರಿಂದ ಪ್ರವೇಶ ಪತ್ರ ಡೌನ್‌ಲೋಡ್ ಹಾಗೂ ಫಲಿತಾಂಶ ವೀಕ್ಷಣೆಗೆ ನಿಯಮಿತವಾಗಿ ಇದೇ ವೆಬ್‌ಸೈಟ್ ಪರಿಶೀಲಿಸತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ನೇಮಕಾತಿ 2026

8000 ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ 2026, ವಾರದಲ್ಲಿ ಅಧಿಸೂಚನೆ

ಜಿಲ್ಲಾ ನ್ಯಾಯಾಲಯ ನೇಮಕಾತಿ 2026

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment