ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil Police Constable) ಹುದ್ದೆಗಳ ಲಿಖಿತ ಪರೀಕ್ಷೆ ಇಂದು (ಆಗಸ್ಟ್ 02, 2026) ಯಶಸ್ವಿಯಾಗಿ ನಡೆದಿದೆ. ಇಂದು ನಡೆದ ಪ್ರಶ್ನೆ ಪತ್ರಿಕೆಯನ್ನು ಈ ಕೇಳಗೆ ನೀಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಬಹುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಉಳಿಕೆ ಮೂಲ ವೃಂದದ (RPC / Non-HK) ಒಟ್ಟು 3,395 ಹುದ್ದೆಗಳ ನೇಮಕಾತಿಗಾಗಿ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಪರೀಕ್ಷೆಯನ್ನು ನಡೆಸಲಾಯಿತು.
- ಹುದ್ದೆ ಹೆಸರು: ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (ಉಳಿಕೆ ಮೂಲ ವೃಂದ – Non-HK)
- ಹುದ್ದೆಗಳ ಸಂಖ್ಯೆ: 3,395
- ದಿನಾಂಕ: 02 ಆಗಸ್ಟ್ 2026 (ಇಂದು)
- ಸಮಯ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12 ರವರೆಗೆ
ಕೀ ಉತ್ತರಗಳ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು: ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಅಭ್ಯರ್ಥಿಗಳು ಇದೀಗ ಅಧಿಕೃತ ಕೀ ಉತ್ತರಗಳ (Key Answers) ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮುಂದಿನ ಕೆಲವೇ ದಿನಗಳಲ್ಲಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಕೀ ಉತ್ತರಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
Civil PC Question Paper 2026 PDF: Download
(ಗಮನಿಸಿ: ಇದೇ ನೇಮಕಾತಿಯ ಕಲ್ಯಾಣ ಕರ್ನಾಟಕ (HK) ವೃಂದದ 596 ಹುದ್ದೆಗಳ ಲಿಖಿತ ಪರೀಕ್ಷೆಯು ಇಂದು ಸಂಜೆ 4:00 ರಿಂದ 5:30 ರವರೆಗೆ ನಡೆಯಲಿದೆ).
ಈ ಕೇಳಗಿನ ಸುದ್ದಿಗಳನ್ನು ಓದಿ: