ಬ್ಯಾಂಕ್ ಆಫ್ ಬರೋಡಾ (BOB) ದೇಶಾದ್ಯಂತ ಖಾಲಿ ಇರುವ 5,000 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಜೂನ್ 15, 2026 ರವರೆಗೆ ವಿಸ್ತರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 483 ಹುದ್ದೆಗಳು ಲಭ್ಯವಿವೆ. ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ (BOB)
- ಹುದ್ದೆಯ ಹೆಸರು: ಅಪ್ರೆಂಟಿಸ್ (Apprentice)
- ಒಟ್ಟು ಹುದ್ದೆಗಳ ಸಂಖ್ಯೆ: 5000
- ಉದ್ಯೋಗ ಸ್ಥಳ: All India
- ವೇತನ: ರೂ. 15,000/-
Bank of Baroda Recruitment 2026 ಹುದ್ದೆಗಳ ವಿವರ:
| ಕ್ರಮ ಸಂಖ್ಯೆ | ರಾಜ್ಯ / ಕೇಂದ್ರಾಡಳಿತ ಪ್ರದೇಶದ ಹೆಸರು | ಹುದ್ದೆಗಳ ಸಂಖ್ಯೆ |
| 1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 1 |
| 2 | ಆಂಧ್ರ ಪ್ರದೇಶ | 188 |
| 3 | ಅರುಣಾಚಲ ಪ್ರದೇಶ | 4 |
| 4 | ಅಸ್ಸಾಂ | 29 |
| 5 | ಬಿಹಾರ | 179 |
| 6 | ಚಂಡೀಗಢ | 4 |
| 7 | ಛತ್ತೀಸ್‌ಗಢ | 122 |
| 8 | ದಾದ್ರಾ, ನಗರ ಹವೇಲಿ ಮತ್ತು ದಮನ್, ದಿಯು | 7 |
| 9 | ದೆಹಲಿ | 91 |
| 10 | ಗೋವಾ | 29 |
| 11 | ಗುಜರಾತ್ | 960 |
| 12 | ಹರಿಯಾಣ | 84 |
| 13 | ಹಿಮಾಚಲ ಪ್ರದೇಶ | 8 |
| 14 | ಜಮ್ಮು ಮತ್ತು ಕಾಶ್ಮೀರ | 2 |
| 15 | ಜಾರ್ಖಂಡ್ | 64 |
| 16 | ಕರ್ನಾಟಕ | 483 |
| 17 | ಕೇರಳ | 111 |
| 18 | ಲಡಾಖ್ | 2 |
| 19 | ಮಧ್ಯಪ್ರದೇಶ | 136 |
| 20 | ಮಹಾರಾಷ್ಟ್ರ | 580 |
| 21 | ಮಣಿಪುರ | 1 |
| 22 | ಮೇಘಾಲಯ | 4 |
| 23 | ಮಿಜೋರಾಂ | 2 |
| 24 | ನಾಗಾಲ್ಯಾಂಡ್ | 3 |
| 25 | ಒಡಿಶಾ | 92 |
| 26 | ಪುದುಚೇರಿ | 4 |
| 27 | ಪಂಜಾಬ್ | 78 |
| 28 | ರಾಜಸ್ಥಾನ | 412 |
| 29 | ಸಿಕ್ಕಿಂ | 1 |
| 30 | ತಮಿಳುನಾಡು | 199 |
| 31 | ತೆಲಂಗಾಣ | 83 |
| 32 | ತ್ರಿಪುರ | 3 |
| 33 | ಉತ್ತರ ಪ್ರದೇಶ | 764 |
| 34 | ಉತ್ತರಾಖಂಡ | 76 |
| 35 | ಪಶ್ಚಿಮ ಬಂಗಾಳ | 194 |
ಶೈಕ್ಷಣಿಕ ಅರ್ಹತೆ:
ಬ್ಯಾಂಕ್ ಆಫ್ ಬರೋಡಾದ ಅಧಿಕೃತ ಅಧಿಸೂಚನೆಯ ಪ್ರಕಾರ, ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ (Graduation) ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 01-05-2026 ರ ಅನ್ವಯ ಕನಿಷ್ಠ 20 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 28 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
- ಒಬಿಸಿ (OBC) ಅಭ್ಯರ್ಥಿಗಳಿಗೆ: 03 ವರ್ಷಗಳು
- ಎಸ್‌ಸಿ / ಎಸ್‌ಟಿ (SC/ST) ಅಭ್ಯರ್ಥಿಗಳಿಗೆ: 05 ವರ್ಷಗಳು
- ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷಗಳು
- ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ: 13 ವರ್ಷಗಳು
- ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ: 15 ವರ್ಷಗಳು
ಅರ್ಜಿ ಶುಲ್ಕ:
- ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ (ಪುರುಷ) ಅಭ್ಯರ್ಥಿಗಳಿಗೆ: ರೂ. 800/-
- ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ (ಮಹಿಳಾ ಮತ್ತು ಟ್ರಾನ್ಸ್ಜೆಂಡರ್) ಅಭ್ಯರ್ಥಿಗಳಿಗೆ: ರೂ. 600/-
- ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ (SC/ ST/ PWBD) ಅಭ್ಯರ್ಥಿಗಳಿಗೆ: ರೂ. 200/-(ಪಾವತಿ ವಿಧಾನ: ಆನ್‌ಲೈನ್ ಮುಖಾಂತರ ಪಾವತಿಸತಕ್ಕದ್ದು)
ಆಯ್ಕೆ ಪ್ರಕ್ರಿಯೆ:
- ಆನ್‌ಲೈನ್ ಪರೀಕ್ಷೆ
- ದಾಖಲೆ ಪರಿಶೀಲನೆ
- ಸಂದರ್ಶನ
ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19-05-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-06-2026
ಪ್ರಮುಖ ಲಿಂಕ್‌ಗಳು:
- ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ಅಧಿಸೂಚನೆ: ಡೌನ್‌ಲೋಡ್
- ಅಧಿಕೃತ ಅಧಿಸೂಚನೆ: ಡೌನ್‌ಲೋಡ್
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: Apply ಮಾಡಿ
- ಅಧಿಕೃತ ವೆಬ್‌ಸೈಟ್: bankofbaroda.bank.in
ಈ ಕೇಳಗಿನ ಸುದ್ದಿಗಳನ್ನು ಓದಿ: