ಎಸ್.ಎಸ್.ಎಲ್.ಸಿ ಮುಗಿಸಿ ತಾಂತ್ರಿಕ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ. ಕರ್ನಾಟಕ ಸರ್ಕಾರದ ‘ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ’ಯು 2026-27ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಪಾಲಿಟೆಕ್ನಿಕ್ (Diploma Admission 2026) ಪ್ರವೇಶಾತಿಗೆ ಅಧಿಸೂಚನೆ ಹೊರಡಿಸಿದ್ದು, ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ರಾಜ್ಯಾದ್ಯಂತ ಒಟ್ಟು 117 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿದ್ದು, ಇದರಲ್ಲಿ 9 ಪ್ರತ್ಯೇಕ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳು ಸೇರಿವೆ. ವಿದ್ಯಾರ್ಥಿಗಳಿಗೆ ಒಟ್ಟು 46 ವಿವಿಧ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಡಿಪ್ಲೋಮಾ ಪರೀಕ್ಷೆಗಳನ್ನು ಕನ್ನಡ, ಇಂಗ್ಲಿಷ್ ಅಥವಾ ಇಂಗ್ಲಿಷ್-ಕನ್ನಡ ಮಿಶ್ರಿತ ಭಾಷೆಯಲ್ಲಿ ಬರೆಯಲು ಮುಕ್ತ ಅವಕಾಶ ನೀಡಲಾಗಿದೆ.
ಸಂಕ್ಷಿಪ್ತ ವಿವರ:
- ಇಲಾಖೆ: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ
- ಕೋರ್ಸ್ ಹೆಸರು: ಸರ್ಕಾರಿ ಪಾಲಿಟೆಕ್ನಿಕ್ ಡಿಪ್ಲೋಮಾ (ಡಿಪ್ಲೋಮಾ ಇನ್ ಎಂಜಿನಿಯರಿಂಗ್)
- ಶೈಕ್ಷಣಿಕ ವರ್ಷ: 2026-27
- ಒಟ್ಟು ಕಾಲೇಜುಗಳು: 117 (9 ಮಹಿಳಾ ಕಾಲೇಜುಗಳು ಸೇರಿ)
- ಶೈಕ್ಷಣಿಕ ಅರ್ಹತೆ: ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು.
ಪ್ರಮುಖ ಲಾಭಗಳು: ಇತ್ತೀಚಿನ ದಿನಗಳಲ್ಲಿ ಡಿಪ್ಲೋಮಾ ಕೋರ್ಸ್‌ಗಳನ್ನು ಉದ್ಯೋಗಾಧಾರಿತವಾಗಿ ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಂಗಳು, ಸುಸಜ್ಜಿತ ಪ್ರಯೋಗಾಲಯಗಳು ಹಾಗೂ ಆಧುನಿಕ ಕೈಗಾರಿಕಾ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುತ್ತದೆ.
ಪ್ರತಿ ಕಾಲೇಜುಗಳಲ್ಲಿಯೂ ಉದ್ಯೋಗ ಮತ್ತು ತರಬೇತಿ ಘಟಕಗಳಿದ್ದು (Placement Cell), ಪ್ರತಿಷ್ಠಿತ ಕಂಪನಿಗಳೊಂದಿಗೆ ಒಪ್ಪಂದ (MOU) ಮಾಡಿಕೊಳ್ಳಲಾಗಿದೆ. ಅಂತಿಮ ವರ್ಷದ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್ ಮೂಲಕ ನೇಮಕಗೊಳ್ಳುತ್ತಿದ್ದಾರೆ. ಕಲಿಯುವಾಗಲೇ ‘ಸ್ಟೈಪೆಂಡ್’ (Stipend) ಸಹಿತ ಅಪ್ರೆಂಟಿಸ್‌ಶಿಪ್ ಸೌಲಭ್ಯವೂ ಲಭ್ಯವಿದೆ.
ಅಲ್ಲದೆ, ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ (Lateral Entry) ಮೂಲಕ ಎಂಜಿನಿಯರಿಂಗ್ ಪದವಿಯ ಎರಡನೇ ವರ್ಷ ಅಥವಾ ಮೂರನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಪಡೆಯುವ ಅವಕಾಶವೂ ಇರುತ್ತದೆ.
ಅರ್ಜಿ ಶುಲ್ಕದ ವಿವರ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ. 200/-
- ಪ.ಜಾತಿ (SC) / ಪ.ಪಂಗಡ (ST) / ಪ್ರವರ್ಗ-1 ಅಭ್ಯರ್ಥಿಗಳಿಗೆ: ರೂ. 100/-
Diploma Admission 2026 ವಾರ್ಷಿಕ ಪ್ರವೇಶ ಶುಲ್ಕ:
| ಕ್ರ.ಸಂ. | ಅಭ್ಯರ್ಥಿಗಳ ವರ್ಗ (Category) | ಪೋಷಕರ ವಾರ್ಷಿಕ ಆದಾಯ ಮಿತಿ | ನಿಗದಿತ ಪ್ರವೇಶ ಶುಲ್ಕ |
|---|---|---|---|
| 1 | ಸಾಮಾನ್ಯ ಅಭ್ಯರ್ಥಿಗಳಿಗೆ (General) | ಅನ್ವಯಿಸುವುದಿಲ್ಲ | ರೂ. 4,830/- |
| 2 | SC / ST (ಪ.ಜಾತಿ / ಪ.ಪಂಗಡ) | ರೂ. 2.50 ಲಕ್ಷದವರೆಗೆ | ರೂ. 580/- |
| 3 | SC / ST (ಪ.ಜಾತಿ / ಪ.ಪಂಗಡ) | ರೂ. 2.50 ಲಕ್ಷದಿಂದ ರೂ. 10.00 ಲಕ್ಷದವರೆಗೆ | ರೂ. 3,105/- |
| 4 | ಪ್ರವರ್ಗ-1 (Category-1) | ರೂ. 2.50 ಲಕ್ಷದವರೆಗೆ | ರೂ. 1,065/- |
| 5 | 2A / 3A / 3B | ರೂ. 1.00 ಲಕ್ಷದವರೆಗೆ | ರೂ. 1,210/- |
| 6 | 2A / 3A / 3B | ರೂ. 1.00 ಲಕ್ಷ ಮೇಲ್ಪಟ್ಟವರಿಗೆ | ರೂ. 4,830/- |
| 7 | 2B ಪ್ರವರ್ಗ (Category-2B) | ಅನ್ವಯಿಸುವುದಿಲ್ಲ | ರೂ. 4,830/- |
| 8 | ಎಸ್‌ಎನ್‌ಕ್ಯೂ (SNQ ಕೋಟಾ) | ರೂ. 1.00 ಲಕ್ಷದವರೆಗೆ | ರೂ. 1,580/- |
(ಸೂಚನೆ: ಶುಲ್ಕ ವಿನಾಯಿತಿ ಪಡೆಯಲು ಅರ್ಹರಿರುವ SC/ST ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಕಡ್ಡಾಯವಾಗಿ State Scholarship Portal (SSP) ಮೂಲಕ ಅರ್ಜಿ ಸಲ್ಲಿಸಬೇಕು).
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-05-2026
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ (Online) ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಖುದ್ದಾಗಿ ಭೇಟಿ ನೀಡಿ ಆಫ್‌ಲೈನ್ (Offline) ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಮುಖ ಲಿಂಕ್‌ಗಳು:
- ಪ್ರಕಟಣೆ: ಡೌನ್ಲೋಡ್
- ಅಧಿಕೃತ ವೆಬ್‌ಸೈಟ್: https://dtetech.karnataka.gov.in