ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯುವುದನ್ನು ಪ್ರೋತ್ಸಾಹಿಸಲು ‘ವಿವೋ ಇಂಡಿಯಾ’ (vivo India) ಕಂಪನಿಯು ‘vivo KanyaGyaan Scholarship 2026’ ಕಾರ್ಯಕ್ರಮವನ್ನು ಘೋಷಿಸಿದೆ.
ಈ ವಿದ್ಯಾರ್ಥಿವೇತನವು ವಿವೋ ಇಂಡಿಯಾದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಯೋಜನೆಯ ಅಡಿಯ ಒಂದು ವಿಶೇಷ ಉಪಕ್ರಮವಾಗಿದೆ. ಹಣಕಾಸಿನ ತೊಂದರೆಯಿಂದಾಗಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಈ ಸೌಲಭ್ಯದ ಲಾಭ ಪಡೆಯಬಹುದು. ಕೇವಲ ಆರ್ಥಿಕ ನೆರವು ಮಾತ್ರವಲ್ಲದೆ, ಭವಿಷ್ಯದ ಕಾರ್ಪೊರೇಟ್ ವೃತ್ತಿಜೀವನಕ್ಕೆ ವಿದ್ಯಾರ್ಥಿನಿಯರನ್ನು ಸಜ್ಜುಗೊಳಿಸಲು ಉನ್ನತ ಮಟ್ಟದ ವೃತ್ತಿಪರ ಮಾರ್ಗದರ್ಶನವನ್ನೂ (Mentorship) ನೀಡಲಾಗುತ್ತದೆ.
vivo KanyaGyaan Scholarship 2026 ಸಂಕ್ಷಿಪ್ತ ವಿವರ:
- ವಿದ್ಯಾರ್ಥಿವೇತನ ನೀಡುವ ಸಂಸ್ಥೆ: ವಿವೋ ಇಂಡಿಯಾ
- ಸ್ಕಾಲರ್ಶಿಪ್ ಹೆಸರು: ವಿವೋ ಕನ್ಯಾಜ್ಞಾನ್ ವಿದ್ಯಾರ್ಥಿವೇತನ 2025-26
- ಆರ್ಥಿಕ ಸಹಾಯ: ವಾರ್ಷಿಕ ₹60,000
ಶೈಕ್ಷಣಿಕ ಅರ್ಹತೆ:
- ಕೇವಲ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
- ಭಾರತದಾದ್ಯಂತ NIRF-ಶ್ರೇಯಾಂಕಿತ ಕಾಲೇಜುಗಳಲ್ಲಿ ಪೂರ್ಣಾವಧಿಯ, ನಿಯಮಿತ STEM ಪದವಿಪೂರ್ವ ಕೋರ್ಸ್ಗಳಾದ B.Tech / BE, B.Sc, BCA, MBBS ಇತ್ಯಾದಿಗಳಲ್ಲಿ (ಪ್ರಥಮ ಅಥವಾ ದ್ವಿತೀಯ ವರ್ಷ) ವ್ಯಾಸಂಗ ಮಾಡುತ್ತಿರಬೇಕು. ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
- ಅರ್ಜಿದಾರರು 10ನೇ ತರಗತಿ, 12ನೇ ತರಗತಿ ಹಾಗೂ ಹಿಂದಿನ ಶೈಕ್ಷಣಿಕ ವರ್ಷ ಅಥವಾ ಸೆಮಿಸ್ಟರ್ನಲ್ಲಿ ಕನಿಷ್ಠ ಶೇ. 70ರಷ್ಟು ಅಂಕಗಳನ್ನು ಪಡೆದಿರಬೇಕು.
ಆರ್ಥಿಕ ಷರತ್ತುಗಳು:
- ವಿದ್ಯಾರ್ಥಿನಿಯ ಪೋಷಕರ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಈಗಾಗಲೇ ಇತರ ಸರ್ಕಾರಿ ಅಥವಾ ಖಾಸಗಿ ಸ್ಕಾಲರ್ಶಿಪ್ ಅಡಿಯಲ್ಲಿ ಸಂಪೂರ್ಣ ಆರ್ಥಿಕ ನೆರವು ಪಡೆಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
- ಬಡ್ಡಿ4ಸ್ಟಡಿ ಅಥವಾ ವಿವೋ ಇಂಡಿಯಾ ಉದ್ಯೋಗಿಗಳ ಮಕ್ಕಳು ಅನರ್ಹರು.
ಸ್ಕಾಲರ್ಶಿಪ್ ಪ್ರಯೋಜನಗಳು: ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಸತತ ಮೂರು ವರ್ಷಗಳವರೆಗೆ ವರ್ಷಕ್ಕೆ ₹60,000 ಸ್ಥಿರ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಈ ಹಣವನ್ನು ಕಾಲೇಜು ಶುಲ್ಕ, ಹಾಸ್ಟೆಲ್, ಊಟ, ಸಾರಿಗೆ ಹಾಗೂ ಲ್ಯಾಪ್ಟಾಪ್ ಖರೀದಿಯಂತಹ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಬಳಸಬಹುದು (ಇದಕ್ಕಾಗಿ ರಸೀದಿಗಳನ್ನು ಒದಗಿಸುವುದು ಕಡ್ಡಾಯ).
ಅಗತ್ಯ ದಾಖಲೆಗಳು:
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ
- ಸರ್ಕಾರಿ ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇತ್ಯಾದಿ)
- ಪ್ರಸ್ತುತ ವರ್ಷದ ಪ್ರವೇಶಾತಿ ಪುರಾವೆ (ಕಾಲೇಜು ಐಡಿ ಅಥವಾ ಅಡ್ಮಿಷನ್ ಲೆಟರ್)
- ಹಿಂದಿನ ಸೆಮಿಸ್ಟರ್/ವರ್ಷದ ಅಂಕಪಟ್ಟಿ
- ಪೋಷಕರ ಆದಾಯ ಪ್ರಮಾಣಪತ್ರ
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ಬುಕ್ ಅಥವಾ ಕ್ಯಾನ್ಸಲ್ ಆದ ಚೆಕ್
- ಕಾಲೇಜಿನ ಸಂಪೂರ್ಣ ಶುಲ್ಕದ ವಿವರ (Fee Structure)
- ಜಾತಿ, ಅಂಗವೈಕಲ್ಯ ಅಥವಾ ಕ್ರೀಡಾ ಪ್ರಮಾಣಪತ್ರ (ಅನ್ವಯಿಸಿದರೆ)
- 200 ಪದಗಳ ಸಣ್ಣ ಪ್ರಬಂಧ (“ನಾನು ಈ ಕ್ಷೇತ್ರವನ್ನು ಏಕೆ ಮುಂದುವರಿಸಲು ಬಯಸುತ್ತೇನೆ” ಮತ್ತು “ಈ ಬೆಂಬಲವು ನನಗೆ ಹೇಗೆ ಸಹಾಯ ಮಾಡುತ್ತದೆ” ಎಂಬುದರ ಕುರಿತು).
ಪ್ರಮುಖ ದಿನಾಂಕಗಳು:
- ಕೊನೆಯ ದಿನಾಂಕ: 22-05-2026
ಪ್ರಮುಖ ಲಿಂಕ್ಗಳು:
- ಅರ್ಜಿಸಲ್ಲಿಕೆ: Apply ಮಾಡಿ
- ಅಧಿಕೃತ ವೆಬ್ಸೈಟ್: buddy4study.com