Vegetable Seeds Kit: ರೈತರಿಗೆ ತರಕಾರಿ ಬೀಜಗಳ ಕಿಟ್‌ ವಿತರಣೆ, ಅರ್ಹರಿಂದ ಅರ್ಜಿ ಆಹ್ವಾನ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ತೋಟಗಾರಿಕೆ ಇಲಾಖೆಯು 2024-25 ನೇ ಸಾಲಿನಲ್ಲಿ ತರಕಾರಿ ಬೆಳೆಯಲು ಉತ್ತೇಜನ ನೀಡುವ ಉದ್ದೇಶದಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ರೈತರಿಗೆ 2000 ರೂ. ಬೆಲೆಯ ತರಕಾರಿ ಬೀಜಗಳ ಕಿಟ್‌ನ್ನು (Vegetable Seeds Kit) ವಿತರಣೆ ಮಾಡಲಾಗುತ್ತಿದ್ದು, ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ಹಾಗೂ ಇತರೆ ರೈತರಿಂದ ಅರ್ಜಿ ಆಹ್ವಾನಿಸಾಗಿದ್ದು, ಅರ್ಹ ಮತ್ತು ಆಸಕ್ತ ರೈತರು ತರಕಾರಿ ಬೀಜಗಳ ಕಿಟ್‌ನ್ನು (Vegetable Seeds Kit) ಶಿಕಾರಿಪುರ ತೋಟಗಾರಿಕೆ ಇಲಾಖೆಯಿಂದ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬಯಸುವ ರೈತರು ನಿಗದಿತ ನಮೂನೆ ಅರ್ಜಿಯನ್ನು ಶಿಕಾರಿಪುರ ತೋಟಗಾರಿಕೆ ಇಲಾಖೆಯಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿ, ಆಧಾರ್‌ಕಾರ್ಡ್ ಜೇರಾಕ್ಸ್, ಬ್ಯಾಂಕ್ ಪಾಸ್ ಬುಕ್ ಜೇರಾಕ್ಸ್, ಜಾತಿ ಪ್ರಮಾಣ ಪತ್ರ (ಪ.ಜಾ/ಪ.ಪಂ ದವರಿಗೆ ಮಾತ್ರ) ಗಳನ್ನು ಸಲ್ಲಿಸಿ ಫೆಬ್ರವರಿ 11 ರಿಂದ ತರಕಾರಿ ಬೀಜಗಳ ಕಿಟ್‌ನ್ನು ಪಡೆದುಕೊಳ್ಳುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರು ಹೆಚ್ಚಿನ ಮಾಹಿತಿಗಾಗಿ ಶಿಕಾರಿಪುರ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸುವ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಮೊಬೈಲ್ ನಂಬರ್:

  • ಕಸಬಾ -7019808174
  • ಅಂಜನಾಪುರ – 8151810552
  • ಹೊಸೂರು – 6363095898
  • ಉಡುಗಣೆ – 9108548454
  • ತಾಳಗುಂದ – 7975515575 ಈ ಮೇಲಿನ ನಂಬರ್ ಗೆ ಸಂಪರ್ಕಿಸುವುದು.

ಇತರೆ ಮಾಹಿತಿಗಳನ್ನು ಓದಿ:

PM ಕಿಸಾನ್ ಸಮ್ಮಾನ್ ನಿಧಿ 19 ನೇ ಕಂತಿನ‌ ಹಣ ಬಿಡುಗಡೆ ದಿನಾಂಕ..!

ಅನ್ನಭಾಗ್ಯ ಯೋಜನೆಯ 1020 ರೂ. ಅಕ್ಕಿ ಹಣ ಜಮಾ

Realme P3 Pro 5G: ಫೆ. 18 ರಂದು ಬಿಡುಗಡೆಯಾಗಲಿದೆ ರಿಯಲ್‌ಮಿ P3 Pro ಸ್ಮಾರ್ಟ್’ಫೋನ್

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment