Udyogini Scheme: ಮಹಿಳೆಯರಿಗೆ 1.5 ಲಕ್ಷ ರೂ. ಸಹಾಯಧನಕ್ಕೆ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

ಸ್ವಂತ ಕಾಲ ಮೇಲೆ ನಿಲ್ಲಬೇಕು, ತಾವೇನಾದರೂ ಬಿಸಿನೆಸ್ ಮಾಡಬೇಕು ಎಂದು ಕನಸು ಕಾಣುತ್ತಿರುವ ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ (KSWDC) ಮಹತ್ವಾಕಾಂಕ್ಷಿ ‘ಉದ್ಯೋಗಿನಿ ಯೋಜನೆ’ (Udyogini Scheme) ಅಡಿಯಲ್ಲಿ ಸಾಲ ಮತ್ತು ಸಹಾಯಧನ (Subsidy) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯ ವಿಶೇಷವೇನೆಂದರೆ, ಇದರಲ್ಲಿ ಸರ್ಕಾರವೇ ಗರಿಷ್ಠ 3 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸುವುದಲ್ಲದೆ, ಅದರಲ್ಲಿ ಶೇ. 50 ರಷ್ಟು ಹಣವನ್ನು ಸಹಾಯಧನ ಕೊಡುತ್ತಾರೆ.

ಯಾರಿಗೆ ಎಷ್ಟು ಸಾಲ? ಎಷ್ಟು ಸಬ್ಸಿಡಿ?: ಈ ಯೋಜನೆಯಡಿ ಜಾತಿವಾರು ಸಾಲ ಮತ್ತು ಸಹಾಯಧನದ ಮೊತ್ತ ಬೇರೆ ಬೇರೆಯಾಗಿದೆ:

1. ಪರಿಶಿಷ್ಟ ಜಾತಿ ಮತ್ತು ಪಂಗಡದ (SC/ST) ಮಹಿಳೆಯರಿಗೆ:

  • ಸಾಲದ ಮೊತ್ತ: 1 ಲಕ್ಷ ದಿಂದ 3 ಲಕ್ಷದವರೆಗೆ.
  • ಸಬ್ಸಿಡಿ (ಸಹಾಯಧನ): ಸಾಲದ ಮೊತ್ತದಲ್ಲಿ ಶೇ. 50 ರಷ್ಟು ಹಣವನ್ನು ಸರ್ಕಾರವೇ ಭರಿಸುತ್ತದೆ.
  • ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷದ ಒಳಗಿರಬೇಕು.

2. ಸಾಮಾನ್ಯ ಮತ್ತು ಒಬಿಸಿ (General/OBC) ಮಹಿಳೆಯರಿಗೆ:

  • ಸಾಲದ ಮೊತ್ತ: ಗರಿಷ್ಠ 3 ಲಕ್ಷದವರೆಗೆ.
  • ಸಬ್ಸಿಡಿ (ಸಹಾಯಧನ): ಸಾಲದ ಮೊತ್ತದಲ್ಲಿ ಶೇ. 30 ರಷ್ಟು (ಗರಿಷ್ಠ ₹90,000) ಸಹಾಯಧನ ಸಿಗಲಿದೆ.
  • ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ₹1.50 ಲಕ್ಷದ ಒಳಗಿರಬೇಕು.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

  • ಮಹಿಳೆಯರ ವಯಸ್ಸು 18 ರಿಂದ 55 ವರ್ಷದ ಒಳಗಿರಬೇಕು.
  • ಅರ್ಜಿದಾರರ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhaar Seeding) ಕಡ್ಡಾಯವಾಗಿ ಆಗಿರಬೇಕು.

Udyogini Scheme ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮಹಿಳೆಯರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

  • ಎಲ್ಲಿ ಸಲ್ಲಿಸಬೇಕು?: ನಿಮ್ಮ ಹತ್ತಿರದ ಗ್ರಾಮ ಒನ್ (Gram One), ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
  • ವಿಶೇಷ ಸೂಚನೆ: ಶಾಸಕರು ಅಥವಾ ಸಚಿವರ ಕೋಟಾದಡಿ ಅರ್ಜಿ ಸಲ್ಲಿಸುವವರು ಶಿಫಾರಸ್ಸು ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.

Last Date: ಅರ್ಜಿ ಸಲ್ಲಿಸಲು 15-01-2026 ಕೊನೆಯ ದಿನಾಂಕ

ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ನಿಗಮದ ವೆಬ್‌ಸೈಟ್ https://kswdc.karnataka.gov.in ಗೆ ಭೇಟಿ ನೀಡಿ.

GruhaLakshmi Scheme: ಗೃಹಲಕ್ಷ್ಮಿ 24ನೇ ಕಂತಿನ ಹಣ ಬಿಡುಗಡೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

ಮಹಿಳೆಯರಿಗೆ ಗುಡ್ ನ್ಯೂಸ್: ಸರ್ಕಾರದಿಂದ 50 ಸಾವಿರ ಸಹಾಯಧನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment