ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: SSP ಸ್ಕಾಲರ್‌ಶಿಪ್ ಅರ್ಜಿ ದಿನಾಂಕ ವಿಸ್ತರಣೆ; ಅವಕಾಶ ಮಿಸ್ ಮಾಡ್ಕೊಬೇಡಿ

Telegram Group Join Now
WhatsApp Group Join Now

ವಿದ್ಯಾರ್ಥಿವೇತನದ ನಿರೀಕ್ಷೆಯಲ್ಲಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಇಲಾಖೆಯು ಮಹತ್ವದ ಸಿಹಿಸುದ್ದಿ ನೀಡಿದೆ. ವಿವಿಧ ಕಾರಣಗಳಿಂದ ಇನ್ನೂ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಲು ಸಾಧ್ಯವಾಗದವರಿಗೆ ಸರ್ಕಾರ ಮತ್ತೊಂದು ಅವಕಾಶ ಕಲ್ಪಿಸಿದ್ದು, ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ.

2025-26ನೇ ಸಾಲಿನ ಮೆಟ್ರಿಕ್ ನಂತರದ (Post-Matric) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಈ ಕಾಲಾವಕಾಶ ನೀಡಲಾಗಿದೆ.

ಯಾರೆಲ್ಲಾ ಅರ್ಜಿ ಹಾಕಬಹುದು?

  • ಯಾವ ಸಾಲು?: 2025-26ನೇ ಶೈಕ್ಷಣಿಕ ಸಾಲು.
  • ಯಾವ ವಿಭಾಗ?: ಮೆಟ್ರಿಕ್ ನಂತರದ (Post-Matric) ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು.
  • ಯಾವ ವರ್ಗ?: ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳು.

ಅರ್ಜಿ ಸಲ್ಲಿಸುವುದು ಎಲ್ಲಿ?

ವಿದ್ಯಾರ್ಥಿಗಳು ಸರ್ಕಾರದ ಅಧಿಕೃತ ಎಸ್‌ಎಸ್‌ಪಿ (SSP) ಪೋರ್ಟಲ್ ಮೂಲಕವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

SSP Post Matric Scholarship 2025-26: Apply Online

ಸಹಾಯವಾಣಿ: ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆ ಎದುರಾದರೆ ಅಥವಾ ಗೊಂದಲಗಳಿದ್ದರೆ ಇಲಾಖೆಯ 24×7 ಸಹಾಯವಾಣಿಗೆ ದೂರವಾಣಿ ಸಂಖ್ಯೆ: 94823 00400 ಕರೆ ಮಾಡಬಹುದು.

SSP Post Matric Scholarship Last Date 2026:

ಸಮಾಜ ಕಲ್ಯಾಣ ಇಲಾಖೆ ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಅರ್ಜಿ ಸಲ್ಲಿಸಲು ಗಡುವನ್ನು 28 ಫೆಬ್ರವರಿ 2026 ರವರೆಗೆ ವಿಸ್ತರಿಸಲಾಗಿದೆ.

ಕಿವಿಮಾತು: ಫೆಬ್ರವರಿ 28 ರವರೆಗೆ ಸಮಯವಿದೆ ಎಂದು ಸುಮ್ಮನಾಗಬೇಡಿ. ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂದೇ ನಿಮ್ಮ ದಾಖಲೆಗಳೊಂದಿಗೆ (ಆಧಾರ್, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ) ಲಾಗಿನ್ ಆಗಿ ಅರ್ಜಿ ಸಲ್ಲಿಸಿ.

ಈ ಮಾಹಿತಿಯು ನಿಮ್ಮ ಸ್ನೇಹಿತರಿಗೂ ಅಥವಾ ಸಹಪಾಠಿಗಳಿಗೂ ಉಪಯುಕ್ತವಾಗಿದ್ದರೆ, ಕೂಡಲೇ ಶೇರ್ ಮಾಡಿ!

SSP ವಿದ್ಯಾರ್ಥಿವೇತನ 2025-26; ಅರ್ಹರು ಆನ್‌ಲೈನ್ ಅರ್ಜಿ ಸಲ್ಲಿಸಿ

ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment