KARTET-2025: ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ | Karnataka TET Hall Ticket 2025 Download From schooleducation.karnataka.gov.in

Telegram Group Join Now
WhatsApp Group Join Now

ಬೆಂಗಳೂರು: ರಾಜ್ಯದ ಭಾವಿ ಶಿಕ್ಷಕರು ಕಾತುರದಿಂದ ಕಾಯುತ್ತಿದ್ದ 2025ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ (KARTET-2025) ದಿನಾಂಕ ನಿಗದಿಯಾಗಿದೆ. ಇದೇ ಡಿಸೆಂಬರ್ 07 ರಂದು (ಭಾನುವಾರ) ರಾಜ್ಯಾದ್ಯಂತ ಪರೀಕ್ಷೆ ನಡೆಯಲಿದ್ದು, ಶಾಲಾ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ವೇಳಾಪಟ್ಟಿ ಮತ್ತು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರ (TET Hall Ticket) ಡೌನ್‌ಲೋಡ್ ಮಾಡುವ ಲಿಂಕ್‌ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

How To Download Karnataka TET Hall Ticket 2025:

ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು, ಡಿಸೆಂಬರ್ 01 ರಿಂದ ಡಿಸೆಂಬರ್ 07 ರವರೆಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಪಡೆದುಕೊಳ್ಳಬಹುದು. ಲಿಂಕ್‌ ಈ ಕೇಳಗೆ ನೀಡಲಾಗಿದೆ.

KARTET-2025 ಪರೀಕ್ಷಾ ವೇಳಾಪಟ್ಟಿ (Exam Schedule):

ದಿನಾಂಕ 07-12-2025 ರಂದು ಎರಡು ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿದ್ದು, ವೇಳಾಪಟ್ಟಿ ಈ ಕೆಳಗಿನಂತಿದೆ:

ಪತ್ರಿಕೆಅರ್ಹತೆಪರೀಕ್ಷಾ ಸಮಯಅವಧಿ
ಪತ್ರಿಕೆ-11 ರಿಂದ 5ನೇ ತರಗತಿಬೆಳಿಗ್ಗೆ 09:30 ರಿಂದ ಮಧ್ಯಾಹ್ನ 12:002 ಗಂಟೆ 30 ನಿಮಿಷ
ಪತ್ರಿಕೆ-26 ರಿಂದ 8ನೇ ತರಗತಿಮಧ್ಯಾಹ್ನ 02:00 ರಿಂದ ಸಂಜೆ 04:302 ಗಂಟೆ 30 ನಿಮಿಷ

ಪರೀಕ್ಷಾ ಕೇಂದ್ರದಲ್ಲಿ ಪಾಲಿಸಬೇಕಾದ ಕಡ್ಡಾಯ ನಿಯಮಗಳು:

  1. ಸಮಯಪಾಲನೆ:
    • ಪತ್ರಿಕೆ-1: ಬೆಳಿಗ್ಗೆ 9 ಗಂಟೆಗೆ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುವುದು. 9:15 AM ನಂತರ ಬರುವವರಿಗೆ ಪ್ರವೇಶವಿಲ್ಲ.
    • ಪತ್ರಿಕೆ-2: ಮಧ್ಯಾಹ್ನ 1:30 ಕ್ಕೆ ಪ್ರವೇಶ ಆರಂಭವಾಗಲಿದ್ದು, 1:45 PM ನಂತರ ಬರುವವರಿಗೆ ಅವಕಾಶವಿರುವುದಿಲ್ಲ.
  2. ತರಬೇಕಾದ ವಸ್ತುಗಳು: ಪರೀಕ್ಷಾ ಕೇಂದ್ರಕ್ಕೆ ಕೇವಲ ಪ್ರವೇಶ ಪತ್ರ ಮತ್ತು ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ ಮಾತ್ರ ತೆಗೆದುಕೊಂಡು ಹೋಗಬೇಕು.
  3. ನಿಷೇಧಿತ ವಸ್ತುಗಳು: ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್, ವೈಟ್ನರ್, ಬ್ಲೇಡ್, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ನೀರಿನ ಬಾಟಲ್ಗಳನ್ನು ಪರೀಕ್ಷಾ ಕೊಠಡಿಗೆ ಕೊಂಡೊಯ್ಯುವಂತಿಲ್ಲ.
  4. ಮೌಲ್ಯಮಾಪನ: ಪರೀಕ್ಷೆಯು ಒಟ್ಟು 150 ಅಂಕಗಳಿಗೆ ನಡೆಯಲಿದ್ದು, ಯಾವುದೇ ಋಣಾತ್ಮಕ ಮೌಲ್ಯಮಾಪನ (Negative Evaluation) ಇರುವುದಿಲ್ಲ.

ಅಭ್ಯರ್ಥಿಗಳು ಕೊನೆಯ ಕ್ಷಣದ ಗಡಿಬಿಡಿ ತಪ್ಪಿಸಲು, ನಾಳೆಯೇ (ಡಿ.1) ತಮ್ಮ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷಾ ಕೇಂದ್ರದ ಬಗ್ಗೆ ಖಚಿತಪಡಿಸಿಕೊಳ್ಳುವುದು ಉತ್ತಮ. ಆಲ್ ದಿ ಬೆಸ್ಟ್!

ಪ್ರಮುಖ ಲಿಂಕ್‌ಗಳು:
Karnataka TET Hall Ticket 2025 Link: Check ಮಾಡಿ
ವೆಬ್‌ಸೈಟ್ ಲಿಂಕ್: schooleducation.karnataka.gov.in, sts.karnataka.gov.in/TET/

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

ಸರ್ಕಾರದಿಂದ 50 ಸಾವಿರ ಸಹಾಯಧನ; ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಿರಿ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment