BPL Ration Card: ಹೊಸ ಬಿಪಿಎಲ್ ಕಾರ್ಡ್ ವಿತರಣೆ ಯಾವಾಗ?; 7.76 ಲಕ್ಷ ನಕಲಿ ಪಡಿತರ ಚೀಟಿಗಳು..?

Telegram Group Join Now
WhatsApp Group Join Now

ಹೊಸ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು (BPL Ration Card) ಪಡೆಯಲು ರಾಜ್ಯದ ಬಡಜನತೆ ಕಳೆದ ಮೂರು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಆದರೆ, ರಾಜ್ಯ ಸರ್ಕಾರ ಮಾತ್ರ ಹೊಸ ಪಡಿತರ ಚೀಟಿಗಾಗಿ ಯಾವುದೇ ಅರ್ಜಿಯನ್ನು ಆಹ್ವಾನಿಸಿಲ್ಲ. ಪರಿಣಾಮ, ನಿಜವಾಗಿಯೂ ಅಗತ್ಯವಿರುವ ಲಕ್ಷಾಂತರ ಬಡ ಕುಟುಂಬಗಳು ಸರ್ಕಾರದ ಅನ್ನಭಾಗ್ಯ ಸೇರಿದಂತೆ ಇತರೆ ಕಲ್ಯಾಣ ಯೋಜನೆಗಳನ್ನು ಪಡೆಯಲಾಗದೆ ಪರದಾಡುವಂತಾಗಿದೆ.

ಸದ್ಯ ಯಾರಿಗೆ ಸಿಗುತ್ತಿದೆ ಹೊಸ ರೇಷನ್ ಕಾರ್ಡ್?

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಾರ್ವಜನಿಕರಿಗೆ ಮುಕ್ತವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ. ಆದರೆ, ಕೆಲವು ನಿರ್ದಿಷ್ಟ ಹಾಗೂ ತುರ್ತು ಪ್ರಕರಣಗಳಿಗೆ ಮಾತ್ರ ಆದ್ಯತೆಯ ಮೇರೆಗೆ ಹೊಸ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ:

  • 102 ಬಗೆಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು (ವೈದ್ಯಕೀಯ ತುರ್ತುಸ್ಥಿತಿ).
  • ಇ-ಶ್ರಮ್ (e-Shram) ಪೋರ್ಟಲ್‌ನಲ್ಲಿ ನೋಂದಣಿಯಾದ ಅಸಂಘಟಿತ ಕಾರ್ಮಿಕರು.
  • ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯದ ಜನರಿಗೆ ಮಾತ್ರ ಸದ್ಯ ಪಡಿತರ ಚೀಟಿ ಒದಗಿಸಲಾಗುತ್ತಿದೆ. (ಇದಕ್ಕಾಗಿ ಇಲಾಖೆಯ ತಂತ್ರಾಂಶದಲ್ಲಿ ಪ್ರತ್ಯೇಕ ವೈದ್ಯಕೀಯ ತುರ್ತು ವಿಭಾಗವನ್ನು ತೆರೆಯಲಾಗಿದೆ).

ರಾಜ್ಯದಲ್ಲಿರುವ ಒಟ್ಟು ಪಡಿತರ ಚೀಟಿಗಳ ಲೆಕ್ಕಾಚಾರ:

ಪ್ರಸ್ತುತ ರಾಜ್ಯಾದ್ಯಂತ ಒಟ್ಟು 1,54,57,567 (1.54 ಕೋಟಿ) ರೇಷನ್ ಕಾರ್ಡ್‌ಗಳಿದ್ದು, 5,45,41,740 (5.45 ಕೋಟಿ) ಫಲಾನುಭವಿಗಳಿದ್ದಾರೆ.

  • ಅಂತ್ಯೋದಯ ಅನ್ನ ಯೋಜನೆ (AAY): 10,47,080 ಕಾರ್ಡ್‌ಗಳು (42,76,526 ಜನರಿಗೆ ಸೌಲಭ್ಯ).
  • ಆದ್ಯತಾ ಕಾರ್ಡ್‌ಗಳು (BPL): 1,14,38,886 ಕಾರ್ಡ್‌ಗಳು (4,00,46,744 ಜನರಿಗೆ ಸೌಲಭ್ಯ).
  • ಆದ್ಯತೇತರ ಕಾರ್ಡ್‌ಗಳು (APL): 29,71,601 ಕಾರ್ಡ್‌ಗಳು (1,02,18,470 ಜನರಿಗೆ ಸೌಲಭ್ಯ). (ಇದರ ಜೊತೆಗೆ, 2025ರ ಅಂತ್ಯದ ವೇಳೆಗೆ ಸಲ್ಲಿಕೆಯಾಗಿರುವ ಸುಮಾರು 3,36,982 ಅರ್ಜಿಗಳ ಸ್ಥಳ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಅರ್ಹರಿಗೆ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗಿದೆ).

ಬಯಲಾಯ್ತು 7.76 ಲಕ್ಷ ನಕಲಿ ರೇಷನ್ ಕಾರ್ಡ್‌ಗಳ ಅಕ್ರಮ!:

ಒಂದೆಡೆ ಅರ್ಹ ಬಡವರಿಗೆ ಕಾರ್ಡ್ ಸಿಗುತ್ತಿಲ್ಲ, ಇನ್ನೊಂದೆಡೆ ಸಿರಿವಂತರು ಬಿಪಿಎಲ್ ಕಾರ್ಡ್ ಪಡೆದು ಮಜಾ ಉಡಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ಇತ್ತೀಚೆಗೆ ನಡೆಸಿದ ಪರಿಶೀಲನೆಯಲ್ಲಿ ರಾಜ್ಯಾದ್ಯಂತ ಬರೋಬ್ಬರಿ 7.76 ಲಕ್ಷಕ್ಕೂ ಅಧಿಕ ‘ಅನುಮಾನಾಸ್ಪದ’ ಫಲಾನುಭವಿಗಳನ್ನು ಗುರುತಿಸಲಾಗಿದೆ.

  • ವಾರ್ಷಿಕ 1.20 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರು.
  • 25 ಲಕ್ಷ ರೂ. ಗೂ ಅಧಿಕ ಮೊತ್ತದ ಜಿಎಸ್‌ಟಿ (GST) ವ್ಯವಹಾರ ಮಾಡುವವರು.
  • 7.5 ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಜಮೀನ್ದಾರರು.
  • ಐಷಾರಾಮಿ ಹಾಗೂ ದುಬಾರಿ ವಾಹನಗಳನ್ನು ಹೊಂದಿರುವವರ ಬಳಿಯೂ ಬಿಪಿಎಲ್ ಕಾರ್ಡ್ ಇರುವುದು ಪತ್ತೆಯಾಗಿದೆ.

ದಾಳಿ ಹಾಗೂ ವಸ್ತುಗಳ ಜಪ್ತಿ:

ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಗತ್ಯ ವಸ್ತುಗಳ ಕಾಯ್ದೆ-1955 ರ ಅನ್ವಯ 747 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಜನವರಿ 2026ರ ವರೆಗಿನ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 25,61,894 ರೂ. ಮೌಲ್ಯದ 45,339.39 ಕ್ವಿಂಟಾಲ್ ಆಹಾರ ಧಾನ್ಯ, 6061 ಲೀಟರ್ ಇಂಧನ (ಪೆಟ್ರೋಲ್, ಡೀಸೆಲ್, ಎಲ್‌ಪಿಜಿ) ಹಾಗೂ 419 ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಧಿವೇಶನದಲ್ಲಿ ಪ್ರತಿಧ್ವನಿಸಿದ ಸಮಸ್ಯೆ:

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರು ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. “ಹೊಸ ಪಡಿತರ ಚೀಟಿಗೆ ಅರ್ಜಿ ಕರೆಯಲಾಗಿದೆಯೇ ಎಂಬ ಪ್ರಶ್ನೆಗೆ ಸರ್ಕಾರ ಇಲ್ಲ ಎಂದು ಉತ್ತರಿಸಿದೆ. ಲಕ್ಷಾಂತರ ಬಡವರು ಕಾರ್ಡ್‌ಗಾಗಿ ಕಾಯುತ್ತಿದ್ದು, ಶೀಘ್ರವೇ ಅವರಿಗೆ ಬಿಪಿಎಲ್ ಕಾರ್ಡ್ ಸಿಗುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಕಾರ್ಮಿಕರ ಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಣೆ

E-Swathu 2.0: ಇ-ಸ್ವತ್ತು ಅರ್ಜಿಗಳ ವಿಲೇವಾರಿಗೆ ವೇಗ: ಸಚಿವ ಪ್ರಿಯಾಂಕ್ ಖರ್ಗೆ

Free Coaching 2026: IAS, KAS ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಲೇಬರ್ ಕಾರ್ಡ್ ಇದ್ದವರಿಗೆ ₹60,000 ಉಚಿತ ಸಹಾಯಧನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment