ಸಿವಿಲ್ PC ದೈಹಿಕ ಪರೀಕ್ಷೆಯ 1:5 ಅರ್ಹತಾ ಪಟ್ಟಿ ಪ್ರಕಟ | Karnataka Civil Police Constable 1:5 PST/PET Eligibility List 2026

Telegram Group Join Now
WhatsApp Group Join Now

ರಾಜ್ಯ ಪೊಲೀಸ್ ಇಲಾಖೆಯ 3395 ಉಳಿಕೆ ಮೂಲ ವೃಂದ (RPC) ಮತ್ತು 596 ಕಲ್ಯಾಣ ಕರ್ನಾಟಕ (KK) ಸೇರಿದಂತೆ ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಅಪ್ಡೇಟ್ ಹೊರಬಿದ್ದಿದೆ.

ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಮುಂದಿನ ಹಂತವಾದ ದೇಹದಾರ್ಢ್ಯತೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆಗೆ (PST/PET) ಅರ್ಹತೆ ಪಡೆದಿರುವ ಅಭ್ಯರ್ಥಿಗಳ 1:5 ಅನುಪಾತದ ಪಟ್ಟಿಯನ್ನು (1:5 Eligibility List) ಪೊಲೀಸ್ ಇಲಾಖೆಯ ಅಧಿಕೃತ ನೇಮಕಾತಿ ವೆಬ್‌ಸೈಟ್‌ನಲ್ಲಿ ಇದೀಗ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಘಟಕಗಳ/ಜಿಲ್ಲೆಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಘಟಕವಾರು ಪಟ್ಟಿಗಳ ವಿವರ ಈ ಕೆಳಗಿನಂತಿದೆ:

ಉಳಿಕೆ ಮೂಲ ವೃಂದ (RPC – 3395 ಹುದ್ದೆಗಳು):

ಕೆಳಕಂಡ ಘಟಕಗಳ 1:5 PST/PET ಅರ್ಹತಾ ಪಟ್ಟಿಯು ಲಭ್ಯವಿದೆ:

  • ಉತ್ತರ ಕನ್ನಡ ಜಿಲ್ಲೆ (ಕಾರವಾರ)
  • ಹಾಸನ ಜಿಲ್ಲೆ
  • ಉಡುಪಿ ಜಿಲ್ಲೆ
  • ತುಮಕೂರು ಜಿಲ್ಲೆ
  • ಶಿವಮೊಗ್ಗ ಜಿಲ್ಲೆ
  • ರೈಲ್ವೇಸ್ ಘಟಕ, ಬೆಂಗಳೂರು
  • ರಾಯಚೂರು ಜಿಲ್ಲೆ
  • ಮೈಸೂರು ಜಿಲ್ಲೆ
  • ಮೈಸೂರು ನಗರ
  • ಮಂಗಳೂರು ನಗರ
  • ಮಂಡ್ಯ ಜಿಲ್ಲೆ
  • ಕೋಲಾರ ಜಿಲ್ಲೆ
  • ಕೊಡಗು ಜಿಲ್ಲೆ
  • ಹುಬ್ಬಳ್ಳಿ-ಧಾರವಾಡ ನಗರ
  • ಹಾವೇರಿ ಜಿಲ್ಲೆ
  • ಗದಗ ಜಿಲ್ಲೆ
  • ದಕ್ಷಿಣ ಕನ್ನಡ ಜಿಲ್ಲೆ (ಮಂಗಳೂರು)
  • ಚಿತ್ರದುರ್ಗ ಜಿಲ್ಲೆ
  • ಚಿಕ್ಕಬಳ್ಳಾಪುರ ಜಿಲ್ಲೆ
  • ಚಿಕ್ಕಮಗಳೂರು ಜಿಲ್ಲೆ
  • ಚಾಮರಾಜನಗರ ಜಿಲ್ಲೆ
  • ಬೆಂಗಳೂರು ಜಿಲ್ಲೆ
  • ಬೆಂಗಳೂರು ನಗರ
  • ಬಳ್ಳಾರಿ ಜಿಲ್ಲೆ

ಕಲ್ಯಾಣ-ಕರ್ನಾಟಕ ವೃಂದ (KK – 596 ಹುದ್ದೆಗಳು):

ಕಲ್ಯಾಣ-ಕರ್ನಾಟಕ ವಿಭಾಗದ ಈ ಕೆಳಗಿನ ಘಟಕಗಳ 1:5 ಪಟ್ಟಿ ಬಿಡುಗಡೆಯಾಗಿದೆ:

  • ವಿಜಯನಗರ ಜಿಲ್ಲೆ
  • ರಾಯಚೂರು ಜಿಲ್ಲೆ
  • ಕೊಪ್ಪಳ ಜಿಲ್ಲೆ
  • ಕಲಬುರಗಿ ಜಿಲ್ಲೆ
  • ಕಲಬುರಗಿ ನಗರ
  • ಬೀದರ್ ಜಿಲ್ಲೆ
  • ಬೆಂಗಳೂರು ನಗರ
  • ಬಳ್ಳಾರಿ ಜಿಲ್ಲೆ

ಪಟ್ಟಿಯನ್ನು ಪರಿಶೀಲಿಸುವುದು ಹೇಗೆ?

ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಇಲಾಖೆಯ ಈ ಅಧಿಕೃತ ವೆಬ್‌ಸೈಟ್ ಲಿಂಕ್‌ ಅನ್ನು ಬಳಸಿ ತಮ್ಮ ಪಟ್ಟಿಯನ್ನು ನೋಡಬಹುದು:

ದೈಹಿಕ ಪರೀಕ್ಷೆಯು (PST/PET) RPC ಅಭ್ಯರ್ಥಿಗಳಿಗೆ ಆಗಸ್ಟ್ 31 ರಿಂದ ಹಾಗೂ KK ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 08 ರಿಂದ ಆರಂಭವಾಗಲಿದ್ದು, 1:5 ಪಟ್ಟಿಯಲ್ಲಿ ಹೆಸರು ಬಂದಿರುವ ಅಭ್ಯರ್ಥಿಗಳು ತಮ್ಮ ಮುಂದಿನ ದೈಹಿಕ ಪರೀಕ್ಷೆಗೆ ಸಿದ್ಧರಾಗಲು ಸೂಚಿಸಲಾಗಿದೆ.

Civil PC 1:5 PST/PET List 2026: Download

ವಿದ್ಯಾಸಿರಿ ವಿದ್ಯಾರ್ಥಿವೇತನ 2026: ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment