ಉಚಿತ ಬೋರ್ವೆಲ್: ಗಂಗಾ ಕಲ್ಯಾಣ ಯೋಜನೆ 2025-26; ಅರ್ಜಿ ಸಲ್ಲಿಸಲು ಇಂದು ಕೊನೆ ದಿನ | Ganga Kalyana Yojane Online Application 2025-26 Karnataka

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರೈತರಿಗೆ ಗುಡ್ ನ್ಯೂಸ್, ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬೇಕೆ..? ಯಾರು ಈ ಯೋಜನೆಗೆ ಅರ್ಹರು..? ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ..? ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಯಾವಾಗ.? ಅರ್ಜಿ ಸಲ್ಲಿಸಿದ ರೈತರಿಗೆ ಎಷ್ಟು ಸಹಾಯಧನ ದೊರೆಯಲಿದೆ ಎಂದು ಈ ಕೆಳಗೆ ನೀಡಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ವೈಯಕ್ತಿಕ ಕೊಳವೆ ಬಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ದೀಕರಣ ಮಾಡಿ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಯೋಜನೆಯಾಗಿದೆ. ಅರ್ಹರು ಈ ಯೋಜನೆಯ ಲಾಭ ಪಡೆಯಬಹುದು.

ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಸರ್ಕಾರವು 4ಲಕ್ಷ ರೂ. ಗಳನ್ನು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ನಿಗದಿಪಡಿಸಿದೆ. ಹಾಗೂ ಇತರೆ ಜಿಲ್ಲೆಗಳಿಗೆ 3 ಲಕ್ಷ ರೂ. ಗಳನ್ನು ನೀಡುತ್ತಾರೆ. ಠೇವಣಿ ಹಣ 75,000 ರೂ. ಗಳನ್ನು ನಿಗಮದಿಂದ ನೇರವಾಗಿ ಸಂಬಂಧಪಟ್ಟ ESCOM ಗಳಿಗೆ ಪಾವತಿಸಲಾಗುವುದು.

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕ್ರಿಶ್ಚಿಯನ್ ಸಮುದಾಯವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Ganga Kalyana Yojane ಅರ್ಹತೆಗಳು:

  • ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿರಬೇಕು.
  • ಪ್ರತಿ ಫಲಾನುಭವಿಗೆ 1 ಎಕರೆ 20 ಗುಂಟೆ (1 ಎಕರೆ 50 ಸೆಂಟ್ಸ್) ಎಕರೆಯಿಂದ 5 ಎಕರೆಯವರೆಗೆ ಕೃಷಿ ಜಮೀನಿರಬೇಕು. ಕೊಡಗು, ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಇಂತಹ ಜಿಲ್ಲೆಗಳಲ್ಲಿ ಜಮೀನಿನ ಲಭ್ಯತೆ ಬಹಳ ಕಡಿಮೆ ಇರುವುದರಿಂದ ಕನಿಷ್ಠ 1 ಎಕರೆ ಜಮೀನನ್ನು ಹೊಂದಿರತಕ್ಕದ್ದು.
  • ಸಣ್ಣ / ಅತೀಸಣ್ಣ ಹಿಡುವಳಿದಾರ ರೈತರಾಗಿರಬೇಕು.
  • ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 6 ಲಕ್ಷಗಳನ್ನು ಮೀರಿರಬಾರದು.
  • ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಇರಬೇಕು.

ಅಗತ್ಯ ದಾಖಲೆಗಳು:

  • ಫಲಾನುಭವಿಯ ಆನ್‌ಲೈನ್‌ ಅರ್ಜಿ ಹಾಗೂ ಪಾಸ್‌ಪೋರ್ಟ್ ಅಳತೆಯ ಪೋಟೋ
  • ಆದಾಯ ಮತ್ತು ಮತ್ತು ಅಲ್ಪಸಂಖ್ಯಾತರ ಪ್ರಮಾಣಪತ್ರ.
  • ಆಧಾರ್ ಕಾರ್ಡ್ ಪ್ರತಿ (ವಿಳಾಸದ ಪುರಾವೆ).
  • ಜಮೀನಿಗೆ ಸಂಬಂಧಿಸಿದ ಇತ್ತೀಚಿನ ಆರ್.ಟಿ.ಸಿ.ಪ್ರತಿ.
  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಸಣ್ಣ/ಅತಿಸಣ್ಣ ಹಿಡುವಳಿದಾರರ ಪ್ರಮಾಣಪತ್ರ.
  • ಭೂ-ಕಂದಾಯ ಪಾವತಿಸಿದ ರಸೀದಿ
  • ಸ್ವಯಂಘೋಷಣೆ ಪತ್ರ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25-10-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-12-2025

ಗಂಗಾ ಕಲ್ಯಾಣ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ

Ganga Kalyana Yojane Online Application Link:
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: kccdclonline.karnataka.gov.in

ಹೆಚ್ಚಿನ ಮಾಹಿತಿಗಾಗಿ:
ಸಹಾಯವಾಣಿ: 63607 53075, ಇಮೇಲ್: kccdchelpline@gmail. ಹೆಚ್ಚಿನ ವಿವರಗಳಿಗೆ ನಿಗಮದ ವೆಬ್‌ಸೈಟ್‌ಗೆ kccdclonline.karnataka.gov.in ಭೇಟಿ ನೀಡಿ. KMDC ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು.

Kisan Tractor Scheme: ಟ್ರ್ಯಾಕ್ಟರ್ ಖರೀದಿಸಲು 50% ಸಬ್ಸಿಡಿ; ಅರ್ಜಿ ಸಲ್ಲಿಸಿ

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment