ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕಂದಾಯ ಇಲಾಖೆಯ ಉಳಿಕೆ ಮೂಲ ವೃಂದದ (RPC) ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಕಟಿಸಿದೆ.
ದಿನಾಂಕ 19-10-2026 ರಂದು ಪ್ರಕಟಿಸಲಾಗಿದ್ದ ತಾತ್ಕಾಲಿಕ ಫಲಿತಾಂಶಕ್ಕೆ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಇದೀಗ ತಾತ್ಕಾಲಿಕ ಅಂಕಪಟ್ಟಿಯನ್ನು ದಿನಾಂಕ 24-10-2026 ರಂದು ಬಿಡುಗಡೆ ಮಾಡಲಾಗಿದೆ.
KEA VAO Provisional Score List 2026 ವಿವರ:
- ಇಲಾಖೆಯ ಹೆಸರು: ಕಂದಾಯ ಇಲಾಖೆ
- ಹುದ್ದೆಯ ಹೆಸರು: ಗ್ರಾಮ ಆಡಳಿತ ಅಧಿಕಾರಿ (VAO – ಉಳಿಕೆ ಮೂಲ ವೃಂದ)
- ಪರೀಕ್ಷೆ ನಡೆದ ದಿನಾಂಕ: 04-10-2026
- ತಾತ್ಕಾಲಿಕ ಅಂಕಪಟ್ಟಿ ಪ್ರಕಟವಾದ ದಿನಾಂಕ: 25-10-2026
KEA VAO Marks List 2026 ಪ್ರಮುಖ ದಿನಾಂಕಗಳು:
- ಸ್ಪರ್ಧಾತ್ಮಕ ಪರೀಕ್ಷೆ ನಡೆದ ದಿನಾಂಕ: 04-10-2026
- ಜಿಲ್ಲಾವಾರು ತಾತ್ಕಾಲಿಕ ಅಂಕಪಟ್ಟಿಯ ಪ್ರಕಟಣೆ: 25-10-2026
VAO Provisional Marks List 2026 Links:
- VAO ಹುದ್ದೆಗಳ ನೇಮಕಾತಿ ಪರೀಕ್ಷೆ 2026-27 ತಾತ್ಕಾಲಿಕ ಅಂಕಗಳ ಪಟ್ಟಿ: ಡೌನ್ಲೋಡ್
- ತಾತ್ಕಾಲಿಕ ಅಂಕಗಳ ಪಟ್ಟಿಯ ಅಧಿಕೃತ ಅಧಿಸೂಚನೆ (PDF): ಡೌನ್ಲೋಡ್
- ಅಧಿಕೃತ ವೆಬ್ಸೈಟ್: cetonline.karnataka.gov.in/kea/vaorpc2026
ಅಂಕಪಟ್ಟಿ ಚೆಕ್ ಮಾಡುವ ವಿಧಾನ:
ಅಭ್ಯರ್ಥಿಗಳು KEA ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಮುಖಪುಟದಲ್ಲಿ ದಿನಾಂಕ 25-10-2026 ರಂದು ಅಪ್ಡೇಟ್ ಆಗಿರುವ ‘VAO ನೇಮಕಾತಿ ಹುದ್ದೆಗಳು – ಪರೀಕ್ಷೆ 2026-27 ತಾತ್ಕಾಲಿಕ ಅಂಕಗಳ ಪಟ್ಟಿ’ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ತದನಂತರ ನೀಡಲಾಗಿರುವ ಪಟ್ಟಿಯಲ್ಲಿ ತಮ್ಮ ಅಂಕಗಳನ್ನು ಪರಿಶೀಲಿಸಿಕೊಳ್ಳಬಹುದು.