ಡಿ. ದೇವರಾಜ ಅರಸು, ವೀರಶೈವ-ಲಿಂಗಾಯತ, ಒಕ್ಕಲಿಗ, ವಿಶ್ವಕರ್ಮ, ಮಡಿವಾಳ, ಮರಾಠ, ಉಪ್ಪಾರ ಹಾಗೂ ಸವಿತಾ ನಿಗಮಗಳಿಂದ ಸ್ವಯಂ ಉದ್ಯೋಗ ಸಾಲ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಮತ್ತು ಕೊನೆಯ ದಿನಾಂಕದ ವಿವರ ಇಲ್ಲಿದೆ.
ರಾಜ್ಯದ ಹಿಂದುಳಿದ ವರ್ಗಗಳ ಹಾಗೂ ವಿವಿಧ ಸಮುದಾಯಗಳ ನಿರುದ್ಯೋಗಿಗಳು ಸ್ವಂತವಾಗಿ ವ್ಯಾಪಾರ, ಕೃಷಿ ಅವಲಂಬಿತ ಚಟುವಟಿಕೆ ಅಥವಾ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ.
ಡಿ. ದೇವರಾಜ ಅರಸು, ವೀರಶೈವ-ಲಿಂಗಾಯತ, ಒಕ್ಕಲಿಗ, ವಿಶ್ವಕರ್ಮ, ಉಪ್ಪಾರ, ಮರಾಠ, ಸವಿತಾ ಮತ್ತು ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಗಳ ಅಡಿಯಲ್ಲಿ 2026-27ನೇ ಸಾಲಿನ ‘ಸ್ವಯಂ ಉದ್ಯೋಗ ಸಾಲ ಯೋಜನೆ’ಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 15 ರಿಂದ ಅಕ್ಟೋಬರ್ 18, 2026 ರವರೆಗೆ (ನಿಗಮವಾರು) ಅವಕಾಶ ನೀಡಲಾಗಿದೆ.
Self Employment Loan Scheme 2026 ವಿವರ:
- ಯೋಜನೆಯ ಹೆಸರು: ಸ್ವಯಂ ಉದ್ಯೋಗ ನೇರ ಸಾಲ / ಕಾಯಕಕಿರಣ / ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ / ಪಂಚವೃತ್ತಿ / ಬ್ಯಾಂಕ್ ಸಹಯೋಗದ ಸಾಲ
- ಸಹಾಯಧನ ಮೊತ್ತ: ಗರಿಷ್ಠ ₹20,000 ದಿಂದ ₹1,00,000 ವರೆಗೆ (ಯೋಜನೆಗನುಸಾರ)
- ಅರ್ಜಿದಾರರ ವಯಸ್ಸು: 18 ರಿಂದ 55 ವರ್ಷಗಳು
- ಸ್ವಯಂ ಉದ್ಯೋಗ ನೇರ ಸಾಲ ಯೋಜನೆ (ದೇವರಾಜ ಅರಸು, ವೀರಶೈವ-ಲಿಂಗಾಯತ-ಕಾಯಕಕಿರಣ, ಒಕ್ಕಲಿಗ, ಮರಾಠ-ಶ್ರೀ ಶಹಜೀರಾಜೇ ಸಮೃದ್ಧಿ ಮತ್ತು ಇತರ ನಿಗಮಗಳು):
- ₹1.00 ಲಕ್ಷದ ಘಟಕ ವೆಚ್ಚಕ್ಕೆ: ಶೇ. 20 ರಷ್ಟು ಅಂದರೆ ₹20,000 ಸಹಾಯಧನ (ಸಬ್ಸಿಡಿ) ಮತ್ತು ಉಳಿಕೆ ₹80,000 ಸಾಲವನ್ನು ವಾರ್ಷಿಕ ಶೇ. 4 ರ ಬಡ್ಡಿದರದಲ್ಲಿ ನೀಡಲಾಗುತ್ತದೆ.
- ₹2.00 ಲಕ್ಷದ ಘಟಕ ವೆಚ್ಚಕ್ಕೆ: ಶೇ. 15 ರಿಂದ ಶೇ. 30 ರಷ್ಟು ಅಂದರೆ ಗರಿಷ್ಠ ₹30,000 ಸಹಾಯಧನ ಹಾಗೂ ಉಳಿಕೆ ₹1,70,000 ಸಾಲವನ್ನು ವಾರ್ಷಿಕ ಶೇ. 4 ರ ಬಡ್ಡಿದರದಲ್ಲಿ ನೀಡಲಾಗುತ್ತದೆ. (₹1 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಸಾಲದ ಮೊತ್ತದಷ್ಟು ಮೌಲ್ಯವಿರುವ ಸ್ಥಿರಾಸ್ತಿಯನ್ನು ನಿಗಮದ ಹೆಸರಿಗೆ ಆಧಾರ ಮಾಡಬೇಕು).
- ಬ್ಯಾಂಕುಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ (ಒಕ್ಕಲಿಗ ನಿಗಮ):
- ಒಕ್ಕಲಿಗ ಸಮುದಾಯದವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳಿಗೆ ಬ್ಯಾಂಕ್ಗಳ ಮೂಲಕ ಸಾಲ ಪಡೆದಲ್ಲಿ ನಿಗಮದಿಂದ ಶೇ. 20 ರಷ್ಟು ಅಂದರೆ ಗರಿಷ್ಠ ₹1.00 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು.
- ಸಮುದಾಯ ವಿಶೇಷ ಸ್ವಯಂ ಉದ್ಯೋಗ ಯೋಜನೆಗಳು:
- ವಿಶ್ವಕರ್ಮ ನಿಗಮ: ಸ್ವಯಂ ಉದ್ಯೋಗ ನೇರ ಸಾಲದ ಜೊತೆಗೆ ಸಾಂಪ್ರದಾಯಿಕ ‘ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು’ ನೀಡಲಾಗುತ್ತದೆ.
- ಮರಾಠ ನಿಗಮ: ಸ್ವಯಂ ಉದ್ಯೋಗಕ್ಕಾಗಿ ‘ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ’ ಜೊತೆಗೆ ವಿಶೇಷವಾಗಿ ‘ಮರಾಠ ಮಿಲ್ಟ್ರಿ ಹೋಟೆಲ್’ ಸ್ಥಾಪನೆಗೂ ಆರ್ಥಿಕ ನೆರವು ನೀಡಲಾಗುತ್ತದೆ.
- ಮಡಿವಾಳ ಮಾಚಿದೇವ ನಿಗಮ: ಸ್ವಯಂ ಉದ್ಯೋಗ ನೇರ ಸಾಲದ ಜೊತೆಗೆ, ಪ್ರಸ್ತುತ ಸಾಲಿನ ಹೊಸ ಯೋಜನೆಯಾದ ‘ಆಧುನಿಕ ಲಾಂಡ್ರಿ’ ಹಾಗೂ ಬೆಂಗಳೂರು ಮತ್ತು ಮೈಸೂರು ನಗರದ ಧೋಬಿ ಘಾಟುಗಳಲ್ಲಿ ಮಡಿವಾಳ ಸಮಾಜದವರ ಅನುಕೂಲಕ್ಕಾಗಿ ವಾಷಿಂಗ್ ಮಷಿನ್, ಡ್ರೈಯರ್ ಮತ್ತು ಐರನಿಂಗ್ ಮಷಿನ್ ಒಳಗೊಂಡಂತೆ ಆಧುನಿಕ ಲಾಂಡ್ರಿ ಘಟಕಗಳನ್ನು (ತಲಾ ₹75.00 ಲಕ್ಷ ಘಟಕ ವೆಚ್ಚದಲ್ಲಿ) ಸ್ಥಾಪಿಸುವ ಯೋಜನೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಸಾಮಾನ್ಯ ಅರ್ಹತೆಗಳು:
- ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿದ್ದು, ಆಯಾ ನಿಗಮಗಳ ವ್ಯಾಪ್ತಿಗೆ ಬರುವ ಜಾತಿ/ಉಪಜಾತಿಗೆ (ಪ್ರವರ್ಗ-1, 2ಎ, 3ಎ ಅಥವಾ 3ಬಿ) ಸೇರಿರಬೇಕು.
- ಆದಾಯ ಮಿತಿ: ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ₹98,000 ಹಾಗೂ ನಗರ/ಪಟ್ಟಣ ಪ್ರದೇಶದವರಿಗೆ ₹1,20,000 ಒಳಗಿರಬೇಕು.
- ವಯೋಮಿತಿ: ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.
- ವಿಶೇಷ ಮೀಸಲಾತಿ: ಫಲಾನುಭವಿಗಳ ಆಯ್ಕೆಯಲ್ಲಿ ಮಹಿಳೆಯರಿಗೆ ಶೇ. 33, ವಿಕಲಚೇತನರಿಗೆ ಶೇ. 5 ಹಾಗೂ ತೃತೀಯ ಲಿಂಗಿಗಳಿಗೆ ಶೇ. 1 ರಷ್ಟು ಮೀಸಲಾತಿ ಇರಿಸಲಾಗಿದೆ.
Karnataka Govt Self Employment Loan Scheme 2026 ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್ (ಮೊಬೈಲ್ ಸಂಖ್ಯೆ ಜೋಡಣೆಯಾಗಿರಬೇಕು).
- ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಮರಾಠ ನಿಗಮಕ್ಕೆ ನಮೂನೆ-3ಬಿ ಯಲ್ಲಿ ಪಡೆದಿರಬೇಕು).
- ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ (ಆಧಾರ್ ಕಾರ್ಡ್, ಜಾತಿ/ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್ಬುಕ್ನಲ್ಲಿ ಅರ್ಜಿದಾರರ ಹೆಸರು ಮತ್ತು ವಿಳಾಸ ಕಡ್ಡಾಯವಾಗಿ ಒಂದೇ ರೀತಿ ತಾಳೆಯಾಗಬೇಕು).
- ಅರ್ಜಿದಾರರ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
- ಉದ್ದೇಶಿತ ವ್ಯಾಪಾರ ಅಥವಾ ಉದ್ಯಮದ ಯೋಜನಾ ವರದಿ (Project Report / ಘಟಕ ವೆಚ್ಚದ ವಿವರ).
- ₹1.00 ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆಯಲು ಅರ್ಜಿದಾರರ ಅಥವಾ ಜಾಮೀನುದಾರರ ಸ್ಥಿರಾಸ್ತಿ ದಾಖಲೆಗಳು (ನಿಗಮಕ್ಕೆ ಆಧಾರ ಮಾಡಲು).
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
- ಡಿ. ದೇವರಾಜ ಅರಸು ನಿಗಮ, ಕರ್ನಾಟಕ ವೀರಶೈವ-ಲಿಂಗಾಯತ ನಿಗಮ, ಕರ್ನಾಟಕ ಒಕ್ಕಲಿಗ ನಿಗಮ, ಕರ್ನಾಟಕ ವಿಶ್ವಕರ್ಮ ನಿಗಮ ಹಾಗೂ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 15-10-2026
- ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ: 16-10-2026
- ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ: 18-10-2026
Self Employment Loan Scheme 2026 Application Link:
- ಆನ್ಲೈನ್ ಅರ್ಜಿ ಲಿಂಕ್ (ಸೇವಾ ಸಿಂಧು): ಸೇವಾ ಸಿಂಧು Link
- ಅಧಿಕೃತ ವೆಬ್ಸೈಟ್ಗಳು: sevasindhu.karnataka.gov.in / sevaone.karnataka.gov.in
- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: dbcdc.karnataka.gov.in
- ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ: kvldcl.karnataka.gov.in
- ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ: kvcdc.karnataka.gov.in
- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ: kvcdcl.karnataka.gov.in
- ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ: uppardevelopment.karnataka.gov.in
- ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ: kssd.karnataka.gov.in
- ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ: kmcdc.karnataka.gov.in
- ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ: kmmd.karnataka.gov.in
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in / sevaone.karnataka.gov.in) ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕಳೆದ 2023-24, 2024-25 ಮತ್ತು 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಸಿಗದವರು ಅದೇ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ, ಆದರೆ ಹಿಂದೆ ಅರ್ಜಿ ಸಲ್ಲಿಸಿದ್ದ ಯೋಜನೆ ಹೊರತುಪಡಿಸಿ ಬೇರೆ ಹೊಸ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ (ವಿಶ್ವಕರ್ಮ, ಮರಾಠ ಮತ್ತು ಮಡಿವಾಳ ನಿಗಮಗಳಲ್ಲಿ).
ಈ ಕೇಳಗಿನ ಸುದ್ದಿಗಳನ್ನು ಓದಿ:
HDFC ಬ್ಯಾಂಕ್ ವಿದ್ಯಾರ್ಥಿವೇತನ 2026-27: ₹75,000 ವರೆಗೆ ಸ್ಕಾಲರ್ಶೀಪ್