Free Bus Pass: ಉಚಿತ ಬಸ್ ಪಾಸ್ ವಿತರಣೆ; ಶುಲ್ಕ ಪಾವತಿಸಿದವರಿಗೆ ಹಣ Refund: ಅಧಿಕೃತ ಮಾರ್ಗಸೂಚಿ ಪ್ರಕಟ

Telegram Group Join Now
WhatsApp Group Join Now

ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ (Free Bus Pass) ವಿತರಿಸುವ ಸಂಬಂಧ ರಾಜ್ಯ ಸರ್ಕಾರ ಜೂನ್ 11 ರಂದು ಅಧಿಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ನೂತನ ಸರ್ಕಾರದ ಚೊಚ್ಚಲ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ, ಸಾರಿಗೆ ಇಲಾಖೆಯು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ವಿದ್ಯಾರ್ಥಿಗಳ ಪ್ರಯಾಣಕ್ಕೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟಪಡಿಸಿದೆ.

ಇದರನ್ವಯ, ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಇನ್ನುಮುಂದೆ ಎಲ್ಲಾ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ಪ್ರಯಾಣಿಸಬಹುದು.

ಈ ಉಚಿತ ಪಾಸ್ ಪಡೆಯಲು ವಿದ್ಯಾರ್ಥಿಗಳು ಸರ್ಕಾರದ ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅಗತ್ಯ ಶೈಕ್ಷಣಿಕ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪಾಸಿನ ಅವಧಿ, ಪ್ರಯಾಣದ ದೂರದ ಮಿತಿ ಸೇರಿದಂತೆ ಈ ಹಿಂದಿನ ಎಲ್ಲಾ ನಿಯಮಾವಳಿಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Free Bus Pass: ಹಣ ಕಟ್ಟಿದವರಿಗೆ 15 ದಿನದಲ್ಲಿ Refund:

ಶೈಕ್ಷಣಿಕ ವರ್ಷದ ಆರಂಭದಲ್ಲಿ ಈಗಾಗಲೇ ನಿಗದಿತ ಶುಲ್ಕ ಪಾವತಿಸಿ ಬಸ್ ಪಾಸ್ ಪಡೆದಿರುವ 19,792 ವಿದ್ಯಾರ್ಥಿಗಳಿಗೆ ಸರ್ಕಾರ ಭರ್ಜರಿ ರಿಲೀಫ್ ನೀಡಿದೆ.

ಈ ವಿದ್ಯಾರ್ಥಿಗಳು ತಾವು ಕಟ್ಟಿರುವ ಹಣವನ್ನು ಮುಂದಿನ 15 ದಿನಗಳ ಒಳಗಾಗಿ ಮರುಪಾವತಿ (Refund) ಮಾಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಹಣ ವಾಪಸ್ ಬರುವವರೆಗೆ ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಹಳೆಯ ಪಾಸ್ ಅನ್ನು ತೋರಿಸಿಯೇ ಉಚಿತವಾಗಿ ಪ್ರಯಾಣ ಮುಂದುವರಿಸಬಹುದಾಗಿದೆ.

ಗಡಿಭಾಗದ ವಿದ್ಯಾರ್ಥಿಗಳಿಗೂ ವಿಶೇಷ ಅವಕಾಶ: ಈ ಹೊಸ ಆದೇಶದಲ್ಲಿ ರಾಜ್ಯದ ಗಡಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಕರ್ನಾಟಕದ ಗಡಿಯೊಳಗೆ ವಾಸವಿದ್ದು ನೆರೆ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ನೆರೆ ರಾಜ್ಯದ ಗಡಿಯಲ್ಲಿ ವಾಸವಿದ್ದು ಕರ್ನಾಟಕದ ವಿದ್ಯಾಸಂಸ್ಥೆಗಳಿಗೆ ಓದಲು ಬರುವ ವಿದ್ಯಾರ್ಥಿಗಳಿಗೂ ಈ ಉಚಿತ ಬಸ್ ಪಾಸ್ ಸೌಲಭ್ಯ ಅನ್ವಯವಾಗಲಿದೆ.

ಉಚಿತ ವಿಮೆ: ವಿಶೇಷವೆಂದರೆ, ಉಚಿತ ಬಸ್ ಪಾಸ್ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸರ್ಕಾರವೇ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳಿಗೆ ತಲಾ 5 ರೂ. ವಿಮಾ ಕಂತು ಹಾಗೂ ಪಾಸ್ ವಿತರಣೆಯ ತಲಾ 100 ರೂ. ಸಂಸ್ಕರಣಾ ಶುಲ್ಕವನ್ನು (Processing fee) ಸಾರಿಗೆ ನಿಗಮಗಳಿಗೆ ಸರ್ಕಾರವೇ ಖುದ್ದಾಗಿ ಪಾವತಿಸಲಿದೆ. ಕೇವಲ ಈ ಪ್ರಕ್ರಿಯೆಗಾಗಿಯೇ ಅಂದಾಜು 15 ಕೋಟಿ ರೂ. ವೆಚ್ಚವಾಗಲಿದೆ.

ಒಟ್ಟಾರೆಯಾಗಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಈ ಬೃಹತ್ ಯೋಜನೆಯಿಂದ ಬೊಕ್ಕಸಕ್ಕೆ ವಾರ್ಷಿಕವಾಗಿ 286.08 ಕೋಟಿ ರೂಪಾಯಿಗಳ ಆರ್ಥಿಕ ಹೊರೆಯಾಗಲಿದ್ದು, ಈ ಸಂಪೂರ್ಣ ಹಣವನ್ನು ಸರ್ಕಾರವೇ ನಾಲ್ಕೂ ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಲಿದೆ.

ಐಡಿಎಫ್‌ಸಿ ಬ್ಯಾಂಕ್ ಸ್ಕಾಲರ್‌ಶಿಪ್ 2026

ಏರ್‌ಟೆಲ್ ವಿದ್ಯಾರ್ಥಿವೇತನ 2026: ಉಚಿತ ಲ್ಯಾಪ್‌ಟಾಪ್, 100% ಶುಲ್ಕ ವಿನಾಯಿತಿ

Telegram Group Join Now
WhatsApp Group Join Now

Leave a Comment