ಸ್ವಂತ ನಿವೇಶನ (Site) ಹೊಂದುವ ಕನಸು ಕಾಣುತ್ತಿರುವವರಿಗೆ ಕರ್ನಾಟಕ ಗೃಹ ಮಂಡಳಿ (KHB Online Application) ಸಿಹಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರ 2ನೇ ಹಂತದ (ಮುಂದುವರೆದ ರಾಜಾಪುರ ಬಡಾವಣೆ) ಬಡಾವಣೆಯಲ್ಲಿ ಖಾಲಿ ಉಳಿದಿರುವ ನಿವೇಶನಗಳನ್ನು ಹಂಚಿಕೆ ಮಾಡಲು ಸಾರ್ವಜನಿಕರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹೊಸ ವರ್ಷಕ್ಕೂ ಮುನ್ನವೇ ಈ ನಿವೇಶನಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಡಿಸೆಂಬರ್ 31, 2025 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ನಿವೇಶನಗಳ ವಿವರ ಮತ್ತು ಠೇವಣಿ ಮೊತ್ತ:
ಒಟ್ಟು 332 ನಿವೇಶನಗಳು ಹಂಚಿಕೆಗೆ ಲಭ್ಯವಿದ್ದು, ವಿವಿಧ ವರ್ಗಗಳಿಗೆ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
- EWS (ಆರ್ಥಿಕ ದುರ್ಬಲ ವರ್ಗ): 21 ನಿವೇಶನಗಳು (ಆರಂಭಿಕ ಠೇವಣಿ: ₹50,000)
- LIG (ಅಲ್ಪ ಆದಾಯ ವರ್ಗ): 127 ನಿವೇಶನಗಳು (ಆರಂಭಿಕ ಠೇವಣಿ: ₹1,00,000)
- MIG (ಮಧ್ಯಮ ಆದಾಯ ವರ್ಗ): 98 ನಿವೇಶನಗಳು (ಆರಂಭಿಕ ಠೇವಣಿ: ₹2,00,000)
- HIG-I (ಉನ್ನತ ಆದಾಯ ವರ್ಗ-1): 79 ನಿವೇಶನಗಳು (ಆರಂಭಿಕ ಠೇವಣಿ: ₹2,50,000)
- HIG-II (ಉನ್ನತ ಆದಾಯ ವರ್ಗ-2): 07 ನಿವೇಶನಗಳು (ಆರಂಭಿಕ ಠೇವಣಿ: ₹3,00,000)
ವಿಶೇಷ ರಿಯಾಯಿತಿ (50% Discount):
ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ (EWS) ನಿವೇಶನ ಹಂಚಿಕೆಯಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿ ಪಡೆಯಲು, ನಗರ ಪ್ರದೇಶದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷ ಹಾಗೂ ಗ್ರಾಮೀಣ ಪ್ರದೇಶದವರ ಆದಾಯ ₹1.20 ಲಕ್ಷ ಮೀರಬಾರದು. ಇದಕ್ಕೆ ಸಂಬಂಧಿಸಿದ ತಹಶೀಲ್ದಾರ್ ದೃಢೀಕರಿಸಿದ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ.
ಅರ್ಹತೆಗಳೇನು?
- ಅರ್ಜಿದಾರರು ಕನಿಷ್ಠ 10 ವರ್ಷ ಕರ್ನಾಟಕದ ನಿವಾಸಿಯಾಗಿರಬೇಕು.
- ಅರ್ಜಿದಾರರು ಅಥವಾ ಅವರ ಕುಟುಂಬದವರು ಕರ್ನಾಟಕದಲ್ಲಿ KHB ಅಥವಾ ಯಾವುದೇ ಸ್ಥಳೀಯ ಸಂಸ್ಥೆಯಿಂದ ಈಗಾಗಲೇ ನಿವೇಶನ/ಮನೆ ಪಡೆದಿರಬಾರದು.
KHB Online Application ಸಲ್ಲಿಸುವುದು ಹೇಗೆ?
ಆಸಕ್ತರು ಕರ್ನಾಟಕ ಗೃಹ ಮಂಡಳಿಯ ಅಧಿಕೃತ ವೆಬ್ಸೈಟ್ https://www.khb.karnataka.gov.in ಗೆ ಭೇಟಿ ನೀಡಿ, ಇ-ಪೇಮೆಂಟ್ (e-payment) ಮೂಲಕ ನೋಂದಣಿ ಶುಲ್ಕ ಹಾಗೂ ಆರಂಭಿಕ ಠೇವಣಿಯನ್ನು ಪಾವತಿಸಿ ಅರ್ಜಿ ಸಲ್ಲಿಸಬೇಕು. ನಿವೇಶನಗಳನ್ನು ಇ-ಲಾಟರಿ (e-Lottery) ಮುಖಾಂತರ ಪಾರದರ್ಶಕವಾಗಿ ಹಂಚಿಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು: 8722925429, 9480182950, 9448431867 ಅಥವಾ 080-22273511 (Ext. 307).
- Karnataka Housing Board Site Application Link: Apply Online
- Rajapura Suryanagar-II Phase, Bangalore Urban Allotment Notification: Download
ಇತರೆ ಮಾಹಿತಿಗಳನ್ನು ಓದಿ:
CM Housing Scheme: 10.50 ಲಕ್ಷಕ್ಕೆ ಬೆಂಗಳೂರಿನಲ್ಲಿ 1 BHK ಫ್ಲ್ಯಾಟ್ ಲಭ್ಯ
Udyogini Scheme: 1.5 ಲಕ್ಷ ರೂ. ಸಹಾಯಧನಕ್ಕೆ ಆನ್ಲೈನ್ ಅರ್ಜಿ ಆಹ್ವಾನ
ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್ಲೈನ್ ಅರ್ಜಿ ಆಹ್ವಾನ