WhatsApp New Rules: ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್: ಸರ್ಕಾರದಿಂದ ಹೊಸ ರೂಲ್ಸ್

Telegram Group Join Now
WhatsApp Group Join Now

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೆ (Cyber Crimes) ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಾಟ್ಸಾಪ್ (WhatsApp), ಟೆಲಿಗ್ರಾಂ (Telegram), ಸಿಗ್ನಲ್ ಸೇರಿದಂತೆ ಪ್ರಮುಖ ಮೆಸೇಜಿಂಗ್ ಆ್ಯಪ್‌ಗಳಿಗೆ ಕೇಂದ್ರ ದೂರಸಂಪರ್ಕ ಇಲಾಖೆ (DoT) ಕಠಿಣ ನಿಯಮಗಳನ್ನು ರೂಪಿಸಿದೆ.

‘2025ರ ಟೆಲಿಕಮ್ಯೂನಿಕೇಶನ್ ಸೈಬರ್ ಸೆಕ್ಯೂರಿಟಿ ತಿದ್ದುಪಡಿ’ ಅಡಿಯಲ್ಲಿ ಈ ಹೊಸ ರೂಲ್ಸ್ ಜಾರಿಗೆ ಬರುತ್ತಿದ್ದು, ಇದು ನಿಮ್ಮ ದೈನಂದಿನ ಮೊಬೈಲ್ ಬಳಕೆಯ ಮೇಲೂ ಪರಿಣಾಮ ಬೀರಲಿದೆ.

ಹೊಸ ನಿಯಮಗಳ ಪ್ರಮುಖ ಹೈಲೈಟ್ಸ್ ಇಲ್ಲಿದೆ:

1. ವಾಟ್ಸಾಪ್ ವೆಬ್: ಕಚೇರಿಗಳಲ್ಲಿ ಲ್ಯಾಪ್‌ಟಾಪ್/ಕಂಪ್ಯೂಟರ್‌ನಲ್ಲಿ ವಾಟ್ಸಾಪ್ ಆ ಬಳಸುವವರಿಗೆ ದೊಡ್ಡ ಬದಲಾವಣೆಯಾಗಿದ್ದು, ಪ್ರತೀ 6 ಗಂಟೆಗೆ ಲಾಗೌಟ್ ಆಗುತ್ತದೆ.

  • ಹಳೆ ನಿಯಮ: ಒಮ್ಮೆ ವಾಟ್ಸಾಪ್ ವೆಬ್ ಲಾಗಿನ್ ಮಾಡಿದರೆ, ನಾವು ಲಾಗೌಟ್ ಮಾಡುವವರೆಗೂ ಅದು ಹಾಗೆಯೇ ಇರುತ್ತಿತ್ತು.
  • ಹೊಸ ರೂಲ್ಸ್: ಇನ್ಮುಂದೆ ಸುರಕ್ಷತೆಯ ದೃಷ್ಟಿಯಿಂದ ವೆಬ್ ಬ್ರೌಸರ್‌ನಲ್ಲಿ ಲಾಗಿನ್ ಆಗಿರುವ ವಾಟ್ಸಾಪ್, ಪ್ರತೀ 6 ಗಂಟೆಗೊಮ್ಮೆ ತನ್ನಷ್ಟಕ್ಕೆ ತಾನೇ ಲಾಗೌಟ್ (Auto-Logout) ಆಗುತ್ತದೆ. ನೀವು ಮತ್ತೆ ಮೊಬೈಲ್ ಬಳಸಿ ಸ್ಕ್ಯಾನ್ ಮಾಡಿ ಲಾಗಿನ್ ಆಗಬೇಕಾಗುತ್ತದೆ.

2. ಸಿಮ್ ಕಾರ್ಡ್ ಕಡ್ಡಾಯ (SIM Binding): ಬ್ಯಾಂಕಿಂಗ್ ಆ್ಯಪ್‌ಗಳ (PhonePe, Google Pay) ಮಾದರಿಯಲ್ಲೇ ಇನ್ಮುಂದೆ ಮೆಸೇಜಿಂಗ್ ಆ್ಯಪ್‌ಗಳಿಗೂ ‘ಸಿಮ್ ಬೈಂಡಿಂಗ್’ ಕಡ್ಡಾಯವಾಗಲಿದೆ. ನಿಮ್ಮ ಮೊಬೈಲ್‌ನಲ್ಲಿ ಸಿಮ್ ಕಾರ್ಡ್ ಆ್ಯಕ್ಟಿವ್ ಇದ್ದರೆ ಮಾತ್ರ ವಾಟ್ಸಾಪ್ ಸೇರಿದಂತೆ ಇತರೆ ಮೆಸೇಜಿಂಗ್ ಆ್ಯಪ್‌ಗಳನ್ನು ಉಪಯೋಗಿಸಲು ಸಾಧ್ಯವಾಗಲಿದೆ.

  • ಅಂದರೆ, ನಿಮ್ಮ ಮೊಬೈಲ್‌ನಲ್ಲಿ ಯಾವ ಸಿಮ್ ಕಾರ್ಡ್ ಆ್ಯಕ್ಟಿವ್ ಆಗಿದೆಯೋ, ಅದೇ ನಂಬರ್‌ನ ವಾಟ್ಸಾಪ್ ಮಾತ್ರ ಆ ಫೋನ್‌ನಲ್ಲಿ ಕೆಲಸ ಮಾಡುತ್ತದೆ. ಸಿಮ್ ಇಲ್ಲದೆ ಕೇವಲ ವೈ-ಫೈ ಮೂಲಕ ಬೇರೆ ನಂಬರ್‌ನ ವಾಟ್ಸಾಪ್ ಬಳಸಲು ಸಾಧ್ಯವಾಗುವುದಿಲ್ಲ.

3. 90 ದಿನಕ್ಕೊಮ್ಮೆ ವೆರಿಫಿಕೇಶನ್: ಮೆಸೇಜಿಂಗ್ ಆ್ಯಪ್‌ಗಳು ತಮ್ಮ ಬಳಕೆದಾರರ ಸಿಮ್ ಕಾರ್ಡ್ ಇನ್ನೂ ಸಕ್ರಿಯವಾಗಿದೆಯೇ ಎಂದು ಪರೀಕ್ಷಿಸಲು, ಪ್ರತೀ 90 ದಿನಗಳಿಗೊಮ್ಮೆ (3 ತಿಂಗಳು) ಕಡ್ಡಾಯವಾಗಿ ಮರು-ಪರಿಶೀಲನೆ (Re-verification) ಮಾಡಬೇಕಾಗುತ್ತದೆ.

ಸರ್ಕಾರದ ಉದ್ದೇಶವೇನು? ಒಂದು ಡಿವೈಸ್‌ನಲ್ಲಿ ವಾಟ್ಸಾಪ್ ಲಾಗಿನ್ ಮಾಡಿ, ಅದನ್ನು ಸೈಬರ್ ವಂಚಕರು ಬೇರೆಡೆಯಿಂದ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಹೊಸ ನಿಯಮದಿಂದ ಮೆಸೇಜಿಂಗ್ ಆ್ಯಪ್‌ಗಳನ್ನು ಇನ್ಮುಂದೆ ಅಧಿಕೃತವಾಗಿ ‘ಟೆಲಿಕಮ್ಯೂನಿಕೇಶನ್ ಐಡೆಂಟಿಫಯರ್ ಯೂಸರ್ ಎಂಟಿಟೀಸ್’ (TIUE) ಎಂದು ಪರಿಗಣಿಸಲಾಗುತ್ತದೆ.

ಈ ಸೈಬರ್ ಸೆಕ್ಯೂರಿಟಿ ತಿದ್ದುಪಡಿ ನಿಯಮದಿಂದ ದೇಶದಲ್ಲಿ ಸೈಬರ್ ಅಪರಾಧಗಳನ್ನು ತಡೆಯಲು ಸರ್ಕಾರಕ್ಕೆ ಸುಲಭವಾಗಲಿದೆ. ಆದರೆ ಒಂದಕ್ಕಿಂದ ಹೆಚ್ಚು ವಾಟ್ಸಾಪ್, ಟೆಲಿಗ್ರಾಂ, ಸ್ನ್ಯಾಪ್​ಚಾಟ್, ಸಿಗ್ನಲ್ ಉಪಯೋಗ ಮಾಡುತ್ತಿರುವವರಿಗೆ ಈ ನಿಯಮ ಹೊರೆಯಾಗಲಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

ಸರ್ಕಾರದಿಂದ 50 ಸಾವಿರ ಸಹಾಯಧನ; ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಿರಿ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment