ಬೆಂಗಳೂರು: ಸೌತ್ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಭಾರತೀಯ ತಂಡವನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ. ನಾಯಕ ಶುಭ್ಮನ್ ಗಿಲ್ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ಗಾಯದ ಕಾರಣದಿಂದ ಲಭ್ಯವಿಲ್ಲ. ಅವರ ಬದಲಿಗೆ ಹಿರಿಯ ಆಟಗಾರ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಭಾರತ ತಂಡದ ನೇತೃತ್ವ ವಹಿಸಲಿದ್ದಾರೆ.
ಗಿಲ್ ಹಾಗೂ ಅಯ್ಯರ್ ODI ಸರಣಿಗೆ ಅಲಭ್ಯ:
ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ವೇಳೆ ಗಿಲ್ ಅವರಿಗೆ ಕುತ್ತಿಗೆ ನರ ಸೆಳೆತ ಕಾಣಿಸಿಕೊಂಡು ಪಂದ್ಯದ ಮಧ್ಯದಲ್ಲೇ ಬ್ಯಾಟಿಂಗ್ ನಿಲ್ಲಿಸಬೇಕಾಯಿತು. ವೈದ್ಯರ ಸಲಹೆಯಂತೆ ಅವರು ಕೆಲವು ವಾರಗಳ ವಿಶ್ರಾಂತಿ ತೆಗೆದುಕೊಳ್ಳಬೇಕಿದ್ದು, ಈ ಸರಣಿಯಲ್ಲಿ ಆಡುವುದಿಲ್ಲ.
ಶ್ರೇಯಸ್ ಅಯ್ಯರ್ ಕೂಡ ಗಾಯದ ಸಮಸ್ಯೆಯಿಂದಾಗಿ ODI ಸರಣಿಯಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರಾಹುಲ್ – ಪಂತ್ ವಿಕೆಟ್ ಕೀಪರ್ ಜೋಡಿ:
ರಾಹುಲ್ ಜೊತೆಗೆ ರಿಷಭ್ ಪಂತ್ ಕೂಡ ವಿಕೆಟ್ ಕೀಪರ್ ಆಯ್ಕೆಯಾಗಿದ್ದಾರೆ. ಪಂತ್ ತಮ್ಮ ಗಾಯದ ಬಳಿಕ ಉತ್ತಮ ಫಾರ್ಮ್ಗೆ ಮರಳಿರುವ ಕಾರಣ, ತಂಡಕ್ಕೆ ಬಲ ನೀಡಲಿದ್ದಾರೆ.
ಬೌಲಿಂಗ್ ವಿಭಾಗ: ಹರ್ಷಿತ್, ಪ್ರಸಿದ್ಧ್, ಅರ್ಶ್ದೀಪ್ಗೆ ಅವಕಾಶ:
ವೇಗಿಗಳ ವಿಭಾಗದಲ್ಲಿ ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಮತ್ತು ಅರ್ಶ್ದೀಪ್ ಸಿಂಗ್ಗೆ ಅವಕಾಶ ನೀಡಲಾಗಿದೆ. ಸ್ಪಿನ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಇದ್ದಾರೆ.
ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಉತ್ತಮ ಆಟ ತೋರಿದ ರುತುರಾಜ್ ಗಾಯಕ್ವಾಡ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಆಡಲಿರುವ ಅಂತಿಮ 11 ರಲ್ಲಿ ಇವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡಿದ್ದರೂ ಕೂಡ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.
IND vs SA ODI Squad ಏಕದಿನ ಸರಣಿಗೆ ಭಾರತೀಯ ತಂಡ
- ಕೆ.ಎಲ್. ರಾಹುಲ್ (ನಾಯಕ, ವಿಕೆಟ್ ಕೀಪರ್),
- ವಿರಾಟ್ ಕೊಹ್ಲಿ,
- ರೋಹಿತ್ ಶರ್ಮಾ,
- ರಿಷಭ್ ಪಂತ್ (ವಿಕೆಟ್ ಕೀಪರ್)
- ಯಶಸ್ವಿ ಜೈಸ್ವಾಲ್,
- ತಿಲಕ್ ವರ್ಮಾ,
- ವಾಷಿಂಗ್ಟನ್ ಸುಂದರ್,
- ರವೀಂದ್ರ ಜಡೇಜಾ,
- ನಿತೀಶ್ ಕುಮಾರ್ ರೆಡ್ಡಿ,
- ಕುಲದೀಪ್ ಯಾದವ್,
- ಹರ್ಷಿತ್ ರಾಣಾ,
- ಪ್ರಸಿದ್ಧ್ ಕೃಷ್ಣ,
- ಅರ್ಶ್ದೀಪ್ ಸಿಂಗ್,
- ರುತುರಾಜ್ ಗಾಯಕ್ವಾಡ್,
- ಧ್ರುವ್ ಜುರೆಲ್
ಇತರೆ ಮಾಹಿತಿಗಳನ್ನು ಓದಿ:
ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್ಲೈನ್ ಅರ್ಜಿ ಆಹ್ವಾನ