ಸ್ವಂತ ವಾಹನ ಖರೀದಿಸಲು 3 ಲಕ್ಷ ರೂ. ಸಹಾಯಧನ, ಅರ್ಜಿ ಸಲ್ಲಿಸಲು ಇಂದು ಕೊನೆ ದಿನ | Swavalambi Sarathi Scheme 2025-26 Online Application Karnataka

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಬೇಕೆ..? ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಎಷ್ಚು ಸಬ್ಸಿಡಿ ದೊರೆಯಲಿದೆ..? ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ ಓದಿರಿ.

ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಟ್ಯಾಕ್ಸಿಗಳು, ಸರಕು ವಾಹನಗಳು ಅಥವಾ ಆಟೋ ರಿಕ್ಷಾಗಳನ್ನು ಖರೀದಿಸಲು, ವಾಹನದ ಬೆಲೆಯ 50% ರಷ್ಟು
ಸಹಾಯಧನವನ್ನು ನಿಗಮದ ವತಿಯಿಂದ ನೀಡುತ್ತಾರೆ. ವಾಹನ ಕೊಳ್ಳಲು ಗರಿಷ್ಠ 3 ಲಕ್ಷ ರೂ. (ಆಟೋ ರಿಕ್ಷಾಗಳಿಗೆ 75,000 ರೂ. ವರೆಗೆ) ಸಹಾಯಧನ ಸಿಗಲಿದೆ.

Swavalambi Sarathi Scheme 2025 ಮಾರ್ಗಸೂಚಿಗಳು:

ರಾಷ್ಟ್ರೀಕೃತ ಬ್ಯಾಂಕುಗಳು ಅಥವಾ ಸಹಕಾರಿ ಬ್ಯಾಂಕ್‌ಗಳು ಮತ್ತು RBI ನಿಂದ ಮಾನ್ಯತೆ ಪಡೆದ ವಿವಿಧ ಫೈನಾನ್ಸ್ ಸಂಸ್ಥೆಗಳು ಸಾಲ ಮಂಜೂರಾತಿ ನೀಡಿದ ಫಲಾನುಭವಿಗಳಿಗೆ ಗೂಡ್ಸ್ ವಾಹನ, ಟ್ಯಾಕ್ಸಿ ಖರೀದಿಸಲು ವಾಹನದ on Road ಬೆಲೆಯ ಮೇಲೆ ಕನಿಷ್ಠ ಶೇ. 50 ರಷ್ಟು (ಗರಿಷ್ಠ ರೂ. 3 ಲಕ್ಷ) ಸಹಾಯಧನ ನೀಡುತ್ತಾರೆ ಹಾಗೂ ಪ್ಯಾಸೆಂಜರ್ ಅಟೋರಿಕ್ಷಾ ಖರೀದಿಗೆ ಗರಿಷ್ಠ ರೂ. 75,000/- ಸಬ್ಸಿಡಿ ಇರುತ್ತದೆ.

ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳು ವಾಹನದ on Road ಬೆಲೆಯ ಕನಿಷ್ಠ ಶೇ. 10 ರಷ್ಟು ಮೊತ್ತವನ್ನು ತಮ್ಮ ಪಾಲಿನ ಮುಂಗಡ ಪಾವತಿ ಹಣವನ್ನು (Down payment) ಕಡ್ಡಾಯವಾಗಿ ತಾವು ಸಾಲ ಪಡೆಯುವ ಬ್ಯಾಂಕಿಗೆ ಪಾವತಿ ಮಾಡಬೇಕು.

ಈ ಯೋಜನೆಯಡಿ ಖರೀದಿಸಲಾಗಿರುವ ವಾಹನವನ್ನು ಫಲಾನುಭವಿಗಳು ಸಾಲದ ಅವಧಿಯಲ್ಲಿ ಇತರರಿಗೆ ಪರಭಾರೆ ಮಾಡುವಂತಿಲ್ಲ. ಫಲಾನುಭವಿಯು ವಾಹನ ಖರೀದಿ ಮಾಡಿದ ತಕ್ಷಣ ತೆರಿಗೆ ಮತ್ತು ವಿಮೆ ಪಾವತಿಸಿರುವ ದಾಖಲೆಗಳ ಪ್ರತಿಯೊಂದಿಗೆ ಜಿಲ್ಲಾ ಕಛೇರಿಗೆ ಮಾಹಿತಿಯನ್ನು ಸಲ್ಲಿಸಬೇಕು ಎಂದು ನಿಗಮದಿಂದ ತಿಳಿಸಲಾಗಿದೆ.

ಈ ಯೋಜನೆಯಡಿ ಖರೀದಿಸಿದ ವಾಹನದ ಜೊತೆಯಲ್ಲಿ ಫಲಾನುಭವಿಯ ಭಾವಚಿತ್ರವನ್ನು ತೆಗೆದು ಜಿಲ್ಲಾ ವ್ಯವಸ್ಥಾಪಕರು ಧೃಡೀಕರಿಸಿ ಕಡತದಲ್ಲಿ ಇಡಬೇಕು. ನಿಗಮದಿಂದ ಸಹಾಯಧನ ಪಡೆದ ವಾಹನದ ಮೇಲೆ ನಿಗಮದ ಲೋಗೋ ಮತ್ತು ‘ಕೆಸಿಸಿಡಿಸಿಯಿಂದ ಸಹಾಯಧನ ಪಡೆದ ವಾಹನ’ ಎಂದು ನಮೂದಿಸಲು ಕ್ರಮವಹಿಸುವುದು.

ಎಲ್ಲಾ ಮೂಲಗಳಿಂದ ಕುಟುಂಬದ ಆದಾಯ ವಾರ್ಷಿಕ ರೂ.6 ಲಕ್ಷ ಮೀರಿರಬಾರದು. ಅರ್ಜಿದಾರರು ಅಥವಾ ಕುಟುಂಬದ ಸದಸ್ಯರು ಈ ಹಿಂದೆ ಯಾವುದೇ ಸರ್ಕಾರಿ ಯೋಜನೆಯಲ್ಲಿ ಸಾಲ / ಸಹಾಯಧನ ಪಡೆದಿರಬಾರದು. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದು ನಿಗಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಫಲಾನುಭವಿಗಳು ಕ್ರಿಸ್ಚಿಯನ್ ಧರ್ಮಕ್ಕೆ ಸೇರಿದವರಾಗಿರಬೇಕು.

Swavalambi Sarathi Scheme 2025 ಅರ್ಹತೆಗಳು:

  • ಅರ್ಜಿ ಸಲ್ಲಿಸುವವರು ಕರ್ನಾಟಕದ ಕ್ರಿಶ್ಚಿಯನ್ ಸಮುದಾಯಕ್ಕೆ (ಅಲ್ಪಸಂಖ್ಯಾತ) ಸೇರಿರಬೇಕು.
  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷ ಮೀರಿರಬಾರದು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 4,50,000 ಲಕ್ಷ ರೂ. ಕ್ಕಿಂತ ಕಡಿಮೆ ಇರಬೇಕು.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ಉದ್ಯೋಗಿಯಾಗಬಾರದು.
  • ಈ ಯೋಜನೆಗೆ ಅರ್ಜಿಸಲ್ಲಿಸುವ ಯಾವುದೇ ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ಈ ಹಿಂದೆ KMDC/KCCDC ಯಿಂದ ಯಾವುದೇ ಸಾಲ ಸೌಲಭ್ಯ ಪಡೆದಿರಬಾರದು (ಅರಿವು ಮತ್ತು ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆಗಳನ್ನು ಹೊರತುಪಡಿಸಿ).

ಅಗತ್ಯ ದಾಖಲೆಗಳು:

  1. ಕರ್ನಾಟಕ ರಾಜ್ಯದ ನಿವಾಸ ಪ್ರಮಾಣ ಪತ್ರ
  2. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರ ಪ್ರಮಾಣ ಪತ್ರ
  3. ಅಭ್ಯರ್ಥಿಯ ಶಾಲಾ ದಾಖಲೆಗಳು
  4. ಆಧಾರ್‌ ಕಾರ್ಡ್ / ಪ್ಯಾನ್‌ ಕಾರ್ಡ್ ಪ್ರತಿ
  5. ಬ್ಯಾಂಕ್‌ನಿಂದ ಸಾಲ ಮಂಜೂರಾತಿ ಪತ್ರ
  6. ವಾಹನ ವಿತರಕರಿಂದ ದರ ಪಟ್ಟಿ
  7. ಅಭ್ಯರ್ಥಿಯು HTV ಚಾಲನಾ ಪರವಾನಗಿ ಹೊಂದಿರಬೇಕು
  8. ಅಭ್ಯರ್ಥಿಯ ಸ್ವಯಂ ಘೋಷಣೆ ಪತ್ರ (Affidavit)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25-10-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-12-2025

ಮತ್ತೊಮ್ಮ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

Ganga Kalyana Yojane Online Application Link:
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: kccdclonline.karnataka.gov.in

ಹೆಚ್ಚಿನ ಮಾಹಿತಿಗಾಗಿ:
ಸಹಾಯವಾಣಿ: 6360753075, ಇಮೇಲ್: kccdchelpline@gmail. ಹೆಚ್ಚಿನ ವಿವರಗಳಿಗೆ ನಿಗಮದ ವೆಬ್‌ಸೈಟ್‌ಗೆ kccdclonline.karnataka.gov.in ಭೇಟಿ ನೀಡಿ. KMDC ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಗಂಗಾ ಕಲ್ಯಾಣ ಯೋಜನೆ 2025-26

Kisan Tractor Scheme: ಟ್ರ್ಯಾಕ್ಟರ್ ಖರೀದಿಸಲು 50% ಸಬ್ಸಿಡಿ; ಅರ್ಜಿ ಸಲ್ಲಿಸಿ

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment