SBI ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿ; ಅರ್ಜಿ ಆಹ್ವಾನ | SBI Recruitment 2026 Apply For Probationary Officers Posts

Telegram Group Join Now
WhatsApp Group Join Now

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವತಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ. ಪ್ರೊಬೇಷನರಿ ಆಫೀಸರ್ (PO) ವೃಂದದ ಒಟ್ಟು 1500 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಯಾವುದೇ ವಿಷಯದಲ್ಲಿ ಪದವಿ ಪಾಸಾಗಿರುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿ, ಅತ್ಯುತ್ತಮ ಭತ್ಯೆಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕಿಂಗ್ ಎಕ್ಸ್‌ಪೋಷರ್ ಪಡೆಯುವ ಅವಕಾಶಗಳು ಲಭ್ಯವಿರಲಿವೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 08, 2026 ಕೊನೆಯ ದಿನಾಂಕವಾಗಿದೆ.

SBI Recruitment 2026 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
  • ಹುದ್ದೆಯ ಹೆಸರು: ಪ್ರೊಬೇಷನರಿ ಆಫೀಸರ್ (PO)
  • ಹುದ್ದೆಗಳ ಸಂಖ್ಯೆ: 1500 ಹುದ್ದೆಗಳು
  • ಉದ್ಯೋಗ ಸ್ಥಳ: All India
  • ವೇತನ: 48,480 ರೂ.

ಹುದ್ದೆಗಳ ವಿವರ:

ಒಟ್ಟು 1500 ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ಪ್ರವರ್ಗವಾರು ವರ್ಗೀಕರಣ ಈ ಕೆಳಗಿನಂತಿದೆ:

  • ಸಾಮಾನ್ಯ ವರ್ಗ (UR) – 588 ಹುದ್ದೆಗಳು
  • ಇತರ ಹಿಂದುಳಿದ ವರ್ಗಗಳು (OBC) – 390 ಹುದ್ದೆಗಳು
  • ಪರಿಶಿಷ್ಟ ಜಾತಿ (SC) – 234 ಹುದ್ದೆಗಳು (ಹಿಂಬಾಕಿ 18 ಸೇರಿ)
  • ಪರಿಶಿಷ್ಟ ಪಂಗಡ (ST) – 144 ಹುದ್ದೆಗಳು (ಹಿಂಬಾಕಿ 36 ಸೇರಿ)
  • ಆರ್ಥಿಕವಾಗಿ ಹಿಂದುಳಿದ ವರ್ಗ (EWS) – 144 ಹುದ್ದೆಗಳು
  • ಅಂಗವಿಕಲ (PwBD) ಅಭ್ಯರ್ಥಿಗಳಿಗೆ (ಸಮತಳ ಮೀಸಲಾತಿ): 61 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು:

  • ಯಾವುದೇ ಪದವಿ ಉತ್ತೀರ್ಣರಾಗಿರಬೇಕು.
  • ಪ್ರಸ್ತುತ ಪದವಿಯ ಅಂತಿಮ ವರ್ಷ ಅಥವಾ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಸಹ ತಾತ್ಕಾಲಿಕವಾಗಿ (Provisionally) ಅರ್ಜಿ ಸಲ್ಲಿಸಬಹುದು. ಆದರೆ, ಸಂದರ್ಶನಕ್ಕೆ ಆಯ್ಕೆಯಾದಲ್ಲಿ 30.09.2026 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಬಗ್ಗೆ ಸೂಕ್ತ ಪುರಾವೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
  • ಚಾರ್ಟರ್ಡ್ ಅಕೌಂಟೆಂಟ್ (CA), ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ವೃತ್ತಿಪರ ಕೋರ್ಸ್ ಮುಗಿಸಿದವರೂ ಸಹ ಅರ್ಹರಾಗಿರುತ್ತಾರೆ.

ವೇತನ ವಿವರ:

ಎಸ್‌ಬಿಐ ಪಿಒ ಹುದ್ದೆಗಳಿಗೆ ಸೇರ್ಪಡೆಯಾಗುವ ಅಧಿಕಾರಿಗಳಿಗೆ ಅತ್ಯುತ್ತಮ ವೇತನ ಶ್ರೇಣಿ ಹಾಗೂ ಅತ್ಯುನ್ನತ ಸೌಲಭ್ಯಗಳು ಲಭ್ಯವಿರುತ್ತವೆ:

  • ವೇತನ ಶ್ರೇಣಿ: ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್-I ರ ಅಡಿಯಲ್ಲಿ ರೂ. 48,480/- ಆರಂಭಿಕ ಮೂಲ ವೇತನ ಇರಲಿದ್ದು, ನಿಯಮಾವಳಿಗಳ ಪ್ರಕಾರ 4 ಮುಂಗಡ ಇನ್‌ಕ್ರಿಮೆಂಟ್‌ಗಳನ್ನು ನೀಡಲಾಗುತ್ತದೆ.
  • ಇತರೆ ಸೌಲಭ್ಯಗಳು: ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ (CCA), ಪ್ರಾವಿಡೆಂಟ್ ಫಂಡ್, ಎನ್ಪಿಎಸ್ (NPS), ಎಲ್‌ಎಫ್‌ಸಿ (LFC), ಲೀಸ್ ವಸತಿ ಸೌಲಭ್ಯ ಮತ್ತು ವೈದ್ಯಕೀಯ ಸೌಲಭ್ಯಗಳು ಇರಲಿವೆ.
  • ಒಟ್ಟು ಪ್ಯಾಕೇಜ್: ಮುಂಬೈ ಕೇಂದ್ರವನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಿದರೆ ಆರಂಭಿಕ ಹಂತದಲ್ಲಿ ಅಂದಾಜು ವರ್ಷಕ್ಕೆ 21.97 ಲಕ್ಷ ರೂ. (CTC) ಪ್ಯಾಕೇಜ್ ಸಿಗಲಿದೆ.

ವಯೋಮಿತಿ:

ದಿನಾಂಕ 01.04.2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು:

  • ಕನಿಷ್ಠ ವಯಸ್ಸು: 21 ವರ್ಷಗಳು
  • ಗರಿಷ್ಠ ವಯಸ್ಸು: 30 ವರ್ಷಗಳು (ಅಂದರೆ, ಅಭ್ಯರ್ಥಿಗಳು 02.04.1996 ಕ್ಕಿಂತ ಮುಂಚೆ ಮತ್ತು 01.04.2005 ರ ನಂತರ ಜನಿಸಿರಬಾರದು – ಎರಡು ದಿನಾಂಕಗಳು ಒಳಗೊಂಡಂತೆ).

ವಯೋಮಿತಿ ಸಡಿಲಿಕೆ:

ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ವಿವಿಧ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಈ ಕೆಳಗಿನ ಸಡಿಲಿಕೆ ಇರುತ್ತದೆ:

  • SC / ST ಅಭ್ಯರ್ಥಿಗಳಿಗೆ: 5 ವರ್ಷಗಳು
  • OBC (Non-Creamy Layer) ಅಭ್ಯರ್ಥಿಗಳಿಗೆ: 3 ವರ್ಷಗಳು
  • PwBD (ಸಾಮಾನ್ಯ / EWS) ಅಭ್ಯರ್ಥಿಗಳಿಗೆ: 10 ವರ್ಷಗಳು
  • PwBD (OBC) ಅಭ್ಯರ್ಥಿಗಳಿಗೆ: 13 ವರ್ಷಗಳು
  • PwBD (SC / ST) ಅಭ್ಯರ್ಥಿಗಳಿಗೆ: 15 ವರ್ಷಗಳು
  • ಮಾಜಿ ಸೈನಿಕರು (Ex-Servicemen): 5 ವರ್ಷಗಳು

ಅರ್ಜಿ ಶುಲ್ಕ:

ಅರ್ಜಿ ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು (ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ):

  • ಸಾಮಾನ್ಯ ವರ್ಗ (General), EWS ಮತ್ತು OBC ಅಭ್ಯರ್ಥಿಗಳಿಗೆ: ರೂ. 750/-
  • SC / ST ಮತ್ತು ಅಂಗವಿಕಲ (PwBD) ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 18-06-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-07-2026

SBI Recruitment 2026 ಪ್ರಮುಖ ಲಿಂಕ್‌ಗಳು:

IBPS ನೇಮಕಾತಿ 2026; 6715 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ರೈಲ್ವೆ ಇಲಾಖೆ ನೇಮಕಾತಿ 2026; ಆನ್‌ಲೈನ್ ಅರ್ಜಿ ಆಹ್ವಾನ

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ನೇಮಕಾತಿ 2026

CAR DAR ಕಾನ್ಸ್‌ಟೇಬಲ್ ನೇಮಕಾತಿ 2026: ಆನ್‌ಲೈನ್‌ ಅರ್ಜಿ ಆಹ್ವಾನ

KSP Civil Police Constable Recruitment 2026

FAQ:

1. SBI PO ನೇಮಕಾತಿ 2026 ರ ಅಡಿಯಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?
ಈ ನೇಮಕಾತಿಯಲ್ಲಿ ಒಟ್ಟು 1500 ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

2. ಎಸ್‌ಬಿಐ ಪಿಒ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಜುಲೈ 08, 2026 ಕೊನೆಯ ದಿನಾಂಕವಾಗಿದೆ.

3. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದೇ?
ಹೌದು, ಅಂತಿಮ ವರ್ಷ ಅಥವಾ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು. ಆದರೆ ಸಂದರ್ಶನದ ವೇಳೆ 30.09.2026 ರೊಳಗೆ ಪದವಿ ಪಾಸಾಗಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು.

4. ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ (General), EWS ಮತ್ತು OBC ಅಭ್ಯರ್ಥಿಗಳಿಗೆ 750 ರೂ. ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

5. ಈ ಹುದ್ದೆಗಳಿಗೆ ವಯೋಮಿತಿ ಎಷ್ಟಿರಬೇಕು?
ದಿನಾಂಕ 01.04.2026 ಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ತುಂಬಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

6. ಒಟ್ಟು ಎಷ್ಟು ಬಾರಿ ಈ ಪರೀಕ್ಷೆಯನ್ನು ಬರೆಯಲು ಅವಕಾಶವಿರುತ್ತದೆ (Number of Chances)?
ಸಾಮಾನ್ಯ ವರ್ಗದವರಿಗೆ ಗರಿಷ್ಠ 6 ಬಾರಿ, ಒಬಿಸಿ ಮತ್ತು ಅಂಗವಿಕಲರಿಗೆ (UR/OBC) 9 ಬಾರಿ ಅವಕಾಶವಿರುತ್ತದೆ. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. (ಮುಖ್ಯ ಪರೀಕ್ಷೆಗೆ ಹಾಜರಾಗುವುದನ್ನು ಮಾತ್ರ ಚಾನ್ಸ್ ಎಂದು ಲೆಕ್ಕ ಹಾಕಲಾಗುತ್ತದೆ).

7. ಆರಂಭಿಕ ಹಂತದಲ್ಲಿ ವಾರ್ಷಿಕ ಪ್ಯಾಕೇಜ್ (CTC) ಎಷ್ಟು ಇರುತ್ತದೆ?
ಮುಂಬೈ ಕೇಂದ್ರದ ಆಧಾರದ ಮೇಲೆ ಆರಂಭಿಕ ಹಂತದಲ್ಲಿ ವಾರ್ಷಿಕ ಒಟ್ಟು ಪ್ಯಾಕೇಜ್ ಅಂದಾಜು 21.97 ಲಕ್ಷ ರೂ. (CTC) ಆಗಿರುತ್ತದೆ.

8. ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ಮೈನಸ್ ಅಂಕಗಳು ಇರುತ್ತವೆಯೇ?
ಹೌದು, ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಎರಡರಲ್ಲೂ ಆಬ್ಜೆಕ್ಟಿವ್ ಪ್ರಶ್ನೆಗಳ ತಪ್ಪು ಉತ್ತರಗಳಿಗೆ ಪ್ರತಿಯೊಂದಕ್ಕೂ 1/4 (0.25) ರಷ್ಟು ಅಂಕಗಳನ್ನು ನೆಗೆಟಿವ್ ಮಾರ್ಕಿಂಗ್ ರೂಪದಲ್ಲಿ ಕಳೆಯಲಾಗುತ್ತದೆ.

9. ನೇಮಕಾತಿಗೊಂಡ ನಂತರ ಎಷ್ಟು ವರ್ಷಗಳ ಬಾಂಡ್ ಇರುತ್ತದೆ?
ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕ್‌ಗೆ ಕನಿಷ್ಠ 3 ವರ್ಷಗಳ ಕಾಲ ಸೇವೆ ಸಲ್ಲಿಸುವುದಾಗಿ ಜಾಯಿನ್ ಆಗುವ ಸಮಯದಲ್ಲಿ 2.00 ಲಕ್ಷ ರೂ. ಮೌಲ್ಯದ ಬಾಂಡ್ (Security Bond) ಕಾರ್ಯಗತಗೊಳಿಸಬೇಕಾಗುತ್ತದೆ.

10. CIBIL ಸ್ಕೋರ್ ಈ ಉದ್ಯೋಗಕ್ಕೆ ಮುಖ್ಯವೇ?
ಹೌದು, ಸಾಲ ಮರುಪಾವತಿ ಸುಸ್ತಿದಾರರು ಅಥವಾ ಸಿಬಿಎಲ್ (CIBIL) ನಲ್ಲಿ ಪ್ರತಿಕೂಲ ಇತಿಹಾಸ ಹೊಂದಿರುವ ಅಭ್ಯರ್ಥಿಗಳು ಜಾಯಿನ್ ಆಗುವ ಮುನ್ನ ಬಾಕಿ ಹಣವನ್ನು ಪಾವತಿಸಿ ನಿರಾಕ್ಷೇಪಣಾ ಪತ್ರ (NOC) ಸಲ್ಲಿಸಬೇಕಾಗುತ್ತದೆ, ಇಲ್ಲದಿದ್ದರೆ ಉದ್ಯೋಗದ ಆಫರ್ ರದ್ದಾಗುತ್ತದೆ.

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment