Bescom Power Cut: ಬೆಂಗಳೂರಿನ ವಿವಿಧೆಡೆ ಜ.10 ಮತ್ತು 11 ರಂದು ವಿದ್ಯುತ್ ವ್ಯತ್ಯಯ: ಬೆಸ್ಕಾಂ ಪ್ರಕಟಣೆ

Telegram Group Join Now
WhatsApp Group Join Now

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ಸೋಲದೇವನಹಳ್ಳಿ ಮತ್ತು ಪೀಣ್ಯ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಮಾಡುತಿದ್ದಾರೆ. ಆದಕ್ಕಾಗಿ ಜನವರಿ 10 (ಶನಿವಾರ) ಮತ್ತು ಜನವರಿ 11 (ಭಾನುವಾರ) ರಂದು ಬೆಂಗಳೂರಿನ ಉತ್ತರ ಭಾಗದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯುತ್ ವ್ಯತ್ಯಯದ ವೇಳಾಪಟ್ಟಿ:

  • ದಿನಾಂಕ: ಜನವರಿ 10, 2026 (ಶನಿವಾರ)
    • ಸಮಯ: ಬೆಳಿಗ್ಗೆ 10 ರಿಂದ ಸಂಜೆ 06 ರವರೆಗೆ.
  • ದಿನಾಂಕ: ಜನವರಿ 11, 2026 (ಭಾನುವಾರ)
    • ಸಮಯ: ಬೆಳಿಗ್ಗೆ 08 ರಿಂದ ಸಂಜೆ 06 ರವರೆಗೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: 66/11 ಕೆ.ವಿ ಸೋಲದೇವನಹಳ್ಳಿ ಮತ್ತು ಪೀಣ್ಯ ಉಪಕೇಂದ್ರಗಳ ವ್ಯಾಪ್ತಿಗೆ ಒಳಪಡುವ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ:

  • ಪ್ರಮುಖ ಪ್ರದೇಶಗಳು: ಹೆಸರಘಟ್ಟ ಮುಖ್ಯರಸ್ತೆ, ಚಿಕ್ಕಬಾಣಾವರ, ಸೋಲದೇವನಹಳ್ಳಿ, ಪೀಣ್ಯ, ಟಿಬಿ ಕ್ರಾಸ್, ಆಚಾರ್ಯ ಕಾಲೇಜು ಮುಖ್ಯರಸ್ತೆ.
  • ನಗರ ಪ್ರದೇಶಗಳು: ದ್ವಾರಕಾನಗರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಅಚ್ಯುತ್ ನಗರ, ಬ್ರದರ್ಸ್ ಕಾಲೋನಿ.
  • ಬಡಾವಣೆಗಳು (Layouts): ರಾಘವೇಂದ್ರ ಲೇಔಟ್, ಶಿವಕುಮಾರ ಸ್ವಾಮೀಜಿ ಲೇಔಟ್, ಸಾಸುವೆಘಟ್ಟ, ಬಜ್ಜಪ್ಪ ಲೇಔಟ್, ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ.
  • ಗ್ರಾಮಾಂತರ ಪ್ರದೇಶಗಳು: ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಬಿಳಿಜಾಜಿ, ಗುಡ್ಡದಹಳ್ಳಿ, ದಾಸೇನಹಳ್ಳಿ, ಹೊಸಹಳ್ಳಿ ಪಾಳ್ಯ, ಗುಣಿಅಗ್ರಹರ್, ಸೋಮಶೀತಿಹಳ್ಳಿ, ಗಾಣಿಗರಹಳ್ಳಿ, ಕೆರೆಗುಡ್ಡದಹಳ್ಳಿ, ಮಠಕೂರ್, ಐವರಕೊಂಡಪುರ, ಸೀತಕೆಂಪನಹಳ್ಳಿ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ, ಶಿವಕೋಟೆ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿವೇಹಳ್ಳಿ, ಕುರುಬರಹಳ್ಳಿ ಮತ್ತು ಬೈಲಕೆರೆ.
  • ಸಂಸ್ಥೆಗಳು: ಐಐಎಚ್‌ಆರ್ (IIHR), ಕೆಎಂಎಫ್ (KMF), ಪಶುಸಂಗೋಪನೆ ಇಲಾಖೆ, ರಾಜ್ಯ ಮೀನುಗಾರಿಕೆ ಇಲಾಖೆ.

ನಿರ್ವಹಣಾ ಕಾಮಗಾರಿ ಪೂರ್ಣಗೊಂಡ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

B-Khata To A Khata: ‘ಬಿ-ಖಾತಾ’ ಆಸ್ತಿ ಮಾಲೀಕರಿಗೆ ಬಂಪರ್ ಗುಡ್ ನ್ಯೂಸ್

Udyogini Scheme: 1.5 ಲಕ್ಷ ರೂ. ಸಹಾಯಧನಕ್ಕೆ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment