ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಪ್ರತಿಭಾವಂತ ಬಾಲಕಿಯರ ಶಿಕ್ಷಣಕ್ಕೆ ನೆರವಾಗಲು ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ “Aditya Birla Capital Scholarship 2025-26” ಕಾರ್ಯಕ್ರಮವನ್ನು ಘೋಷಿಸಿದೆ.
ಈ ಯೋಜನೆಯಡಿ 9ನೇ ತರಗತಿಯಿಂದ ಹಿಡಿದು ಐಐಟಿ, ಐಐಎಂಗಳಂತಹ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.
Aditya Birla Capital Scholarship 2025 ಎಷ್ಟು ಸ್ಕಾಲರ್‌ಶಿಪ್ ಸಿಗುತ್ತದೆ?
- ಶಾಲಾ ವಿದ್ಯಾರ್ಥಿನಿಯರಿಗೆ (9-12 ನೇ ತರಗತಿ):
- ಅರ್ಹತೆ: 9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರು.
- ಪ್ರಯೋಜನ: ವಾರ್ಷಿಕ ₹25,000/- ವಿದ್ಯಾರ್ಥಿವೇತನ.
- ಸಾಮಾನ್ಯ ಪದವಿ (General Degree – 3 ವರ್ಷ):
- ಅರ್ಹತೆ: ಬಿ.ಕಾಂ, ಬಿ.ಎಸ್ಸಿ, ಬಿ.ಎ ಮುಂತಾದ ಸಾಮಾನ್ಯ ಪದವಿ ಕೋರ್ಸ್‌ಗಳಿಗೆ ಸೇರಿರುವವರು.
- ಪ್ರಯೋಜನ: ವಾರ್ಷಿಕ ₹30,000/- ವಿದ್ಯಾರ್ಥಿವೇತನ.
- ವೃತ್ತಿಪರ ಪದವಿ (Professional Degree – 4 ವರ್ಷ):
- ಅರ್ಹತೆ: ಇಂಜಿನಿಯರಿಂಗ್ (B.E/B.Tech) ಅಥವಾ ಇತರೆ 4 ವರ್ಷದ ವೃತ್ತಿಪರ ಕೋರ್ಸ್ ಮಾಡುತ್ತಿರುವವರು.
- ನೆರವು: ವಾರ್ಷಿಕ ₹45,000/- ವಿದ್ಯಾರ್ಥಿವೇತನ.
- ಐಐಟಿ / ಎನ್‌ಐಟಿ / ಐಐಎಂ ವಿದ್ಯಾರ್ಥಿನಿಯರಿಗೆ:
- ಅರ್ಹತೆ: ದೇಶದ ಪ್ರತಿಷ್ಠಿತ ಐಐಟಿ, ಎನ್‌ಐಟಿ, ಐಐಎಂ ಅಥವಾ ನ್ಯಾಷನಲ್ ಲಾ ಯೂನಿವರ್ಸಿಟಿಗಳಲ್ಲಿ (NLU) ಪದವಿ/ಸ್ನಾತಕೋತ್ತರ ಪದವಿ ಓದುತ್ತಿರುವವರು.
- ಪ್ರಯೋಜನ: ವಾರ್ಷಿಕ ₹60,000/- ವಿದ್ಯಾರ್ಥಿವೇತನ.
ಸಾಮಾನ್ಯ ಅರ್ಹತೆಗಳು:
- ಈ ಸ್ಕಾಲರ್‌ಶಿಪ್ ಕೇವಲ ಬಾಲಕಿಯರಿಗೆ (Girls Only) ಸೀಮಿತವಾಗಿದೆ.
- ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕ ಗಳಿಸಿರಬೇಕು.
- ಕುಟುಂಬದ ವಾರ್ಷಿಕ ಆದಾಯ ₹6 ಲಕ್ಷ ಮೀರಿರಬಾರದು.
- ಆದಿತ್ಯ ಬಿರ್ಲಾ ಕ್ಯಾಪಿಟಲ್ ಮತ್ತು ಬಡ್ಡಿ4ಸ್ಟಡಿ ಉದ್ಯೋಗಿಗಳ ಮಕ್ಕಳಿಗೆ ಇದು ಅನ್ವಯಿಸುವುದಿಲ್ಲ.
ಬೇಕಾಗುವ ದಾಖಲೆಗಳು:
- ಪಾಸ್‌ಪೋರ್ಟ್ ಅಳತೆಯ ಫೋಟೋ.
- ಹಿಂದಿನ ವರ್ಷದ ಅಂಕಪಟ್ಟಿ (Marks Card).
- ಆಧಾರ್ ಕಾರ್ಡ್ / ಗುರುತಿನ ಚೀಟಿ.
- ಪ್ರಸ್ತುತ ಸಾಲಿನ ಪ್ರವೇಶಾತಿ ರಸೀದಿ (Fee Receipt / Admission Letter).
- ಶೈಕ್ಷಣಿಕ ವೆಚ್ಚಗಳ ರಸೀದಿಗಳು (ಹಾಸ್ಟೆಲ್, ಮೆಸ್, ಪುಸ್ತಕಗಳು ಇತ್ಯಾದಿ).
- ಬ್ಯಾಂಕ್ ಪಾಸ್‌ಬುಕ್.
- ಆದಾಯ ಪ್ರಮಾಣ ಪತ್ರ (Income Certificate).
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-12-2025
ಪ್ರಮುಖ ಲಿಂಕ್‌ಗಳು:
Aditya Birla Capital Scholarship 2025-26 Online Application Link: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ:
HDFC Scholarship 2025: HDFC ಬ್ಯಾಂಕ್‌ನಿಂದ ಸಿಗಲಿದೆ ₹75,000 ವಿದ್ಯಾರ್ಥಿವೇತನ