ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಬದಲಾವಣೆ: ಈ ಕೆಲಸ ಮಾಡದಿದ್ದರೆ 2000 ರೂ. ಬಂದ್..?

Telegram Group Join Now
WhatsApp Group Join Now

ರಾಜ್ಯ ಸರ್ಕಾರದ ಜನಪ್ರಿಯ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿರುವ ಗೃಹಿಣಿಯರಿಗೆ ಸರ್ಕಾರವು ಮಹತ್ವದ ಸೂಚನೆಯೊಂದನ್ನು ನೀಡಿದೆ.

ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಿ, ಕೇವಲ ಅರ್ಹರಿಗೆ ಮಾತ್ರ ಹಣ ತಲುಪಿಸುವ ನಿಟ್ಟಿನಲ್ಲಿ ಇನ್ಮುಂದೆ ‘ಒನ್-ಟೈಮ್ ಬಯೋಮೆಟ್ರಿಕ್’ (ಬೆರಳಚ್ಚು) ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ.

ಈ ಹೊಸ ನಿಯಮದಡಿ ಫಲಾನುಭವಿಗಳು ತಮ್ಮ ಖಾತೆಯನ್ನು ಕಡ್ಡಾಯವಾಗಿ ನವೀಕರಣ (ಮರು-ನೋಂದಣಿ) ಮಾಡಿಕೊಳ್ಳಬೇಕು. ಒಂದು ವೇಳೆ ನವೀಕರಿಸದಿದ್ದರೆ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದ ಹಣ ಸ್ಥಗಿತಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ.

Gruhalakshmi Scheme e-KYC ಮಾಡಿಸಲು ಕಾರಣವೇನು?

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಯೋಜನೆಯಲ್ಲಿ ಭಾರಿ ಪ್ರಮಾಣದ ದುರ್ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ:

  • ಮೃತಪಟ್ಟವರ ಹೆಸರಲ್ಲೂ ಹಣ: ಸುಮಾರು 2 ಲಕ್ಷದಷ್ಟು ಮಹಿಳೆಯರು ಮೃತಪಟ್ಟಿದ್ದರೂ, ಸದ್ದಿಲ್ಲದೆ ಅವರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗುತ್ತಲೇ ಇದೆ.
  • ತೆರಿಗೆದಾರರಿಗೂ ಹಣ: ನಿಯಮಗಳ ಪ್ರಕಾರ ಆದಾಯ ತೆರಿಗೆ (Income Tax) ಪಾವತಿಸುವವರು ಈ ಯೋಜನೆಗೆ ಅರ್ಹರಲ್ಲ. ಆದರೂ 50 ಸಾವಿರಕ್ಕೂ ಅಧಿಕ ತೆರಿಗೆದಾರರು ಅಕ್ರಮವಾಗಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
  • ಇದರ ಜೊತೆಗೆ, ಕೆಲವರ ಖಾತೆಗೆ ಬೀಳುವ ಹಣ ಹಳೆಯ ಸಾಲಕ್ಕೆ ಮುರಿದುಕೊಳ್ಳಲಾಗುತ್ತಿದೆ ಹಾಗೂ ಹಲವರ ಮೊಬೈಲ್ ಸಂಖ್ಯೆಗಳು ಬದಲಾಗಿವೆ.

ಆರಂಭದಲ್ಲಿ ಮೃತಪಟ್ಟವರನ್ನು ಪತ್ತೆಹಚ್ಚಲು ‘ಜೀವಿತ ಪ್ರಮಾಣಪತ್ರ’ ಸಲ್ಲಿಸುವುದನ್ನು ಕಡ್ಡಾಯ ಮಾಡಲು ಸರ್ಕಾರ ಚಿಂತಿಸಿತ್ತು. ಆದರೆ, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಪರ್ಯಾಯವಾಗಿ ಈ ‘ಒನ್-ಟೈಮ್ ಬಯೋಮೆಟ್ರಿಕ್’ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

Gruhalakshmi Scheme Biometric Verification ಮಾಡುವುದು ಹೇಗೆ?:

ಇದಕ್ಕಾಗಿ ಮಹಿಳೆಯರು ಆತಂಕಪಡುವ ಅಗತ್ಯವಿಲ್ಲ. ಫಲಾನುಭವಿಗಳು ತಮ್ಮ ಹತ್ತಿರದ ‘ಬೆಂಗಳೂರು ಒನ್’ ಅಥವಾ ‘ಕರ್ನಾಟಕ ಒನ್’ ಕೇಂದ್ರಗಳಿಗೆ ಭೇಟಿ ನೀಡಬೇಕು. ಅಲ್ಲಿ ತಮ್ಮ ಪ್ರಸ್ತುತ ಚಾಲ್ತಿಯಲ್ಲಿರುವ (Active) ಮೊಬೈಲ್ ಸಂಖ್ಯೆಯನ್ನು ನೀಡಿ, ಬೆರಳಚ್ಚು (Biometric) ಕೊಡುವ ಮೂಲಕ ಕೇವಲ ಒಂದು ಬಾರಿಗೆ ತಮ್ಮ ಖಾತೆಯನ್ನು ನವೀಕರಿಸಿಕೊಳ್ಳಬಹುದು. ಒಮ್ಮೆ ಬಯೋಮೆಟ್ರಿಕ್ ನೀಡಿದರೆ ಸಾಕು, ಹಣ ಎಂದಿನಂತೆ ಖಾತೆಗೆ ಬರಲಿದೆ.

ಯಾರಿಗೆ ಗೃಹಲಕ್ಷ್ಮಿ ಹಣ ಬರಲ್ಲಾ?

  • ತೆರಿಗೆ ಪಾವತಿದಾರರಿಗೆ ಬ್ರೇಕ್: ನೀವು ಎಪಿಎಲ್ (APL) ಅಥವಾ ಬಿಪಿಎಲ್ (BPL) ಯಾವುದೇ ಕಾರ್ಡ್ ಹೊಂದಿದ್ದರೂ, ಆದಾಯ ತೆರಿಗೆ ಕಟ್ಟುವವರಾಗಿದ್ದರೆ ನಿಮಗೆ ಗೃಹಲಕ್ಷ್ಮಿ ಹಣ ಬರುವುದು ನಿಲ್ಲುತ್ತದೆ. ಇಲಾಖೆ ಈಗಾಗಲೇ ತೆರಿಗೆ ಕಟ್ಟುತ್ತಿರುವ 2 ಲಕ್ಷಕ್ಕೂ ಅಧಿಕ ಮಂದಿಯ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ಬದಲಾಯಿಸಿದ್ದು, ಇವರೆಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ಲಾಭ ರದ್ದಾಗಲಿದೆ.
  • ನವೀಕರಿಸದವರ ಖಾತೆ ರದ್ದು: ಸದ್ಯಕ್ಕೆ ಸರ್ಕಾರವು ಯಾವುದೇ ಫಲಾನುಭವಿಯ ಹೆಸರನ್ನು ನೇರವಾಗಿ ಪಟ್ಟಿಯಿಂದ ಡಿಲೀಟ್ ಮಾಡುತ್ತಿಲ್ಲ. ಆದರೆ, ಯಾರು ತಮ್ಮ ಖಾತೆಯನ್ನು ಬಯೋಮೆಟ್ರಿಕ್ ಮೂಲಕ ನವೀಕರಣ ಮಾಡಿಕೊಳ್ಳುವುದಿಲ್ಲವೋ, ಅಂಥವರ ಖಾತೆಗಳು ಸ್ವಯಂಚಾಲಿತವಾಗಿ (Automatically) ರದ್ದಾಗುತ್ತವೆ ಹಾಗೂ ಹಣ ಬರುವುದು ನಿಲ್ಲುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ: ದಿನಕ್ಕೆ ₹100 ಉಳಿಸಿ, ಲಕ್ಷ-ಲಕ್ಷ ಹಣ ಪಡೆಯಿರಿ

SSLC ಪಾಸಾದ ವಿದ್ಯಾರ್ಥಿಗಳಿಗೆ 15,000 ರೂ. ಪ್ರೋತ್ಸಾಹಧನ

ವಿದ್ಯಾರ್ಥಿಗಳಿಗೆ ₹35 ಸಾವಿರ ಪ್ರೋತ್ಸಾಹಧನ; ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment