ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯ ಬರೆದಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ.
ಆಗಸ್ಟ್ 02, 2026 ರಂದು ನಡೆದಿದ್ದ ಕಲ್ಯಾಣ-ಕರ್ನಾಟಕ (HK) ಮತ್ತು ಉಳಿಕೆ ಮೂಲ ವೃಂದದ (Non-HK/RPC) ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯ ಅಂತಿಮ ಅಂಕಗಳನ್ನು (Final Marks) ಇಂದು (ಆಗಸ್ಟ್ 21, 2026) ಅಧಿಕೃತವಾಗಿ ಪ್ರಕಟಿಸಲಾಗಿದೆ.
ಇದಕ್ಕೂ ಮುನ್ನ ಆಗಸ್ಟ್ 19 ರಂದು ಪ್ರಾಧಿಕಾರವು ತಾತ್ಕಾಲಿಕ ಅಂಕಪಟ್ಟಿಯನ್ನು (Provisional Marks) ಬಿಡುಗಡೆ ಮಾಡಿತ್ತು. ಇದೀಗ ದೈಹಿಕ ಪರೀಕ್ಷೆಯ ದಿನಾಂಕಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಅಂತಿಮ ಸ್ಕೋರ್ ಅನ್ನು ವೆಬ್ಸೈಟ್ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ವಿಭಾಗಕ್ಕೆ ಸಂಬಂಧಿಸಿದ ಲಿಂಕ್ಗಳನ್ನು ಬಳಸಿ ಅಂತಿಮ ಅಂಕಗಳನ್ನು ಪರಿಶೀಲಿಸಿಕೊಳ್ಳಬಹುದು.
Civil Police Constable Result 2026:
ಉಳಿಕೆ ಮೂಲ ವೃಂದ (RPC / Non-HK) ಕಾನ್ಸ್ಟೇಬಲ್ ವಿವರ:
- ಒಟ್ಟು ಹುದ್ದೆಗಳು: 3,395
- ಅಂತಿಮ ಅಂಕಗಳ (Final Score) ಲಿಂಕ್: ಇಲ್ಲಿ ಕ್ಲಿಕ್ ಮಾಡಿ
- ದೈಹಿಕ ಪರೀಕ್ಷೆ (ET/PST) ದಿನಾಂಕ: 2026 ಆಗಸ್ಟ್ 31 ರಿಂದ ಸೆಪ್ಟೆಂಬರ್ 07 ರ ವರೆಗೆ.
ಕಲ್ಯಾಣ-ಕರ್ನಾಟಕ ವೃಂದ (HK) ಕಾನ್ಸ್ಟೇಬಲ್ ವಿವರ:
- ಒಟ್ಟು ಹುದ್ದೆಗಳು: 596
- ಅಂತಿಮ ಅಂಕಗಳ (Final Score) ಲಿಂಕ್: ಇಲ್ಲಿ ಕ್ಲಿಕ್ ಮಾಡಿ
- ದೈಹಿಕ ಪರೀಕ್ಷೆ (ET/PST) ದಿನಾಂಕ: 2026 ಸೆಪ್ಟೆಂಬರ್ 08 ರಿಂದ ಸೆಪ್ಟೆಂಬರ್ 10 ರ ವರೆಗೆ.
ಅಭ್ಯರ್ಥಿಗಳ ಗಮನಕ್ಕೆ: ಅಂತಿಮ ಅಂಕಪಟ್ಟಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಂದಿನ ಹಂತವಾದ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗೆ (ET/PST) ಹಾಜರಾಗಬೇಕಿದೆ. ಪರೀಕ್ಷಾ ದಿನಾಂಕಗಳು ಈಗಾಗಲೇ ನಿಗದಿಯಾಗಿದ್ದು, ಶೀಘ್ರದಲ್ಲೇ ಇಲಾಖೆಯ ವತಿಯಿಂದ ಪ್ರವೇಶ ಪತ್ರ (Call Letter) ಬಿಡುಗಡೆ ಮಾಡಲಿದೆ ಹಾಗೂ ಮೊಬೈಲ್ ಸಂದೇಶಗಳನ್ನು ರವಾನಿಸಲಾಗುತ್ತದೆ. ತಮ್ಮ ಸ್ಕೋರ್ ಚೆಕ್ ಮಾಡಿಕೊಂಡು ದೈಹಿಕ ಪರೀಕ್ಷೆಗೆ ಸಿದ್ಧತೆ ನಡೆಸಿ.
ಈ ಕೇಳಗಿನ ಸುದ್ದಿಗಳನ್ನು ಓದಿ: