Civil PC New Hall Ticket 2026: Civil PC ಪರೀಕ್ಷಾ ಕೇಂದ್ರ, ಸಮಯದಲ್ಲಿ ಬದಲಾವಣೆ, ಹೊಸ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಿ

Telegram Group Join Now
WhatsApp Group Join Now

ಆಗಸ್ಟ್ 2 ರಂದು ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಮಹತ್ವದ ಸೂಚನೆಯೊಂದು ಹೊರಬಿದ್ದಿದೆ.

3,395 ಉಳಿಕೆ ಮೂಲ ವೃಂದದ (RPC) ಹಾಗೂ 596 ಕಲ್ಯಾಣ ಕರ್ನಾಟಕ (HK) ವೃಂದದ ಹುದ್ದೆಗಳ ಲಿಖಿತ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರ ಮತ್ತು ಸಮಯದಲ್ಲಿ ಕೆಲವು ನಿರ್ಣಾಯಕ ಬದಲಾವಣೆಗಳನ್ನು ಮಾಡಲಾಗಿದೆ.

ಅಭ್ಯರ್ಥಿಗಳು ಗಮನಿಸಲೇಬೇಕಾದ ಪ್ರಮುಖ ಬದಲಾವಣೆಗಳು:

  • ಪರೀಕ್ಷಾ ಕೇಂದ್ರ ಬದಲಾವಣೆ – ಹೊಸ ಪ್ರವೇಶ ಪತ್ರ ಕಡ್ಡಾಯ: ಕೆಲವು ಪರೀಕ್ಷಾ ಕೇಂದ್ರಗಳ ವಿವರಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೀಗಾಗಿ, ಈ ಹಿಂದೆ ಪ್ರವೇಶ ಪತ್ರವನ್ನು (Admission Ticket) ಡೌನ್‌ಲೋಡ್ ಮಾಡಿಕೊಂಡಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತೊಮ್ಮೆ ಹೊಸದಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
  • ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಇತ್ತೀಚಿನ, ನವೀಕರಿಸಿದ (Updated) ಪ್ರವೇಶ ಪತ್ರವನ್ನು ತೆಗೆದುಕೊಂಡು ಹೋಗಿ. ನಿನ್ನ ಪರೀಕ್ಷಾ ಕೇಂದ್ರ ಬದಲಾವಣೆ ಆಗದೇಯೂ ಇರಬಹುದು ಒಮ್ಮೆ ಹೊಸ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿ ಪರಿಶೀಲನೆ ಮಾಡಿಕೋಳ್ಳಿ.
  • ಕಲ್ಯಾಣ ಕರ್ನಾಟಕ (HK) ವೃಂದದ ಪರೀಕ್ಷಾ ಸಮಯದಲ್ಲಿ ಬದಲಾವಣೆ: ಇದರ ಜೊತೆಗೆ, 596 ಕಲ್ಯಾಣ ಕರ್ನಾಟಕ (HK) ವೃಂದದ ಹುದ್ದೆಗಳ ಲಿಖಿತ ಪರೀಕ್ಷೆಯ ಸಮಯವನ್ನು ಪರಿಷ್ಕರಿಸಲಾಗಿದೆ. ಈ ಮೊದಲು ನಿಗದಿಯಾಗಿದ್ದ ಮಧ್ಯಾಹ್ನ 2:30 ರಿಂದ 4:00 ಗಂಟೆಯ ಬದಲಾಗಿ, ಪರಿಷ್ಕೃತ ವೇಳಾಪಟ್ಟಿಯಂತೆ ಸಂಜೆ 4:00 ರಿಂದ 5:30 ರವರೆಗೆ ಪರೀಕ್ಷೆ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ಕೂಡಲೇ ಸಂಬಂಧಪಟ್ಟ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಪರಿಷ್ಕೃತ ಹಾಲ್ ಟಿಕೆಟ್ ಅನ್ನು ಮತ್ತೊಮ್ಮೆ ಡೌನ್‌ಲೋಡ್ ಮಾಡಿಕೊಳ್ಳಲು ಕೋರಲಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ: ಡೌನ್‌ಲೋಡ್

ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2026

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment