ದೇಶದ ಅನ್ನದಾತರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುನಿರೀಕ್ಷಿತ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM-Kisan) ಯೋಜನೆಯ 23ನೇ ಕಂತಿನ ಹಣ ಇದೇ ಜೂನ್ 20ರಂದು (ಶನಿವಾರ) ಬಿಡುಗಡೆಯಾಗಲಿದೆ.
2026-27ನೇ ಹಣಕಾಸು ವರ್ಷದ ಮೊದಲ ಕಂತು ಇದಾಗಿದ್ದು, ದೇಶಾದ್ಯಂತ ಸುಮಾರು 9.44 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 2,000 ರೂ. ಜಮೆಯಾಗಲಿದೆ.
ಪಶ್ಚಿಮ ಬಂಗಾಳದಿಂದ 18,880 ಕೋಟಿ ರೂ. ರಿಲೀಸ್:
ಕಳೆದ ಬಾರಿ (22ನೇ ಕಂತು) ಅಸ್ಸಾಂನಿಂದ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗೆ ಹಣ ವರ್ಗಾಯಿಸಿದ್ದರು. ಈ ಬಾರಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ 23ನೇ ಕಂತಿನ ಒಟ್ಟು 18,880 ಕೋಟಿ ರೂಪಾಯಿಗಳನ್ನು ರಿಲೀಸ್ ಮಾಡಲಿದ್ದಾರೆ.
PM Kisan e-KYC ಕಡ್ಡಾಯ: ಹಣ ಪಡೆಯಲು ಏನು ಮಾಡಬೇಕು?
ಯೋಜನೆಯ ಹಣ ಪಡೆಯಲು ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ರೈತರು ಪಿಎಂ ಕಿಸಾನ್ ಪೋರ್ಟಲ್ ಮೂಲಕ ಒಟಿಪಿ (OTP) ಆಧಾರಿತ ಇ-ಕೆವೈಸಿ ಮಾಡಿಕೊಳ್ಳಬಹುದು.
ಆನ್‌ಲೈನ್‌ನಲ್ಲಿ ಸಾಧ್ಯವಾಗದಿದ್ದರೆ, ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ತೆರಳಿ ಬಯೋಮೆಟ್ರಿಕ್ ಮೂಲಕವೂ ಕೆವೈಸಿ ಅಪ್‌ಡೇಟ್ ಮಾಡಬಹುದು.
ಅನರ್ಹರಿಗೆ ಕೊಕ್: ಯಾರಿಗೆ ಹಣ ಬರಲ್ಲ?
ಇಲಾಖೆಯು ಇತ್ತೀಚೆಗೆ ನಡೆಸಿದ ಪರಿಶೀಲನೆ ವೇಳೆ ಕೆಲವು ಅನುಮಾನಾಸ್ಪದ ಪ್ರಕರಣಗಳು ಪತ್ತೆಯಾಗಿದ್ದು, ಅಕ್ರಮವಾಗಿ ಹಣ ಪಡೆಯುತ್ತಿದ್ದವರನ್ನು ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ.
ವಿಶೇಷವಾಗಿ, ಫೆಬ್ರವರಿ 1, 2019ರ ನಂತರ ಭೂಮಿಯ ಮಾಲೀಕತ್ವ ಪಡೆದ ರೈತರು ಹಾಗೂ ಒಂದೇ ಕುಟುಂಬದಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಯೋಜನೆಯ ಲಾಭ ಪಡೆಯುತ್ತಿದ್ದರೆ, ಅಂತಹವರ ಹಣವನ್ನು ಭೌತಿಕ ಪರಿಶೀಲನೆ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ಕಿಸಾನ್ ಇ-ಮಿತ್ರ ಚಾಟ್ ಬಾಟ್ ಅಥವಾ ‘ನೋ ಯುವರ್ ಸ್ಟೇಟಸ್’ (Know Your Status) ಆಯ್ಕೆಯ ಮೂಲಕ ರೈತರು ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಬಹುದು.
ನಿಮಗೆ ಹಣ ಬರುತ್ತಾ, ಇಲ್ವಾ? ಹೀಗೆ ಚೆಕ್ ಮಾಡಿ:
ಜೂನ್ 20ರಂದು ಹಣ ಬಿಡುಗಡೆಯಾಗುತ್ತಿರುವುದರಿಂದ, ರೈತರು ಮುಂಚಿತವಾಗಿಯೇ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳಿತು.
- ಮೊದಲಿಗೆ ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ https://pmkisan.gov.in/ ಓಪನ್ ಮಾಡಿ.
- ಮುಖಪುಟದಲ್ಲಿ (Home page) ‘ಫಲಾನುಭವಿಗಳ ಪಟ್ಟಿ’ (Beneficiary List) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ (ತಾಲೂಕು), ಬ್ಲಾಕ್ ಹಾಗೂ ಗ್ರಾಮದ ವಿವರಗಳನ್ನು ನಿಖರವಾಗಿ ಆಯ್ಕೆ ಮಾಡಿ.
- ಅಂತಿಮವಾಗಿ ‘ಗೆಟ್ ರಿಪೋರ್ಟ್’ (Get Report) ಮೇಲೆ ಕ್ಲಿಕ್ ಮಾಡಿ.
- ಈಗ ಪರದೆಯ ಮೇಲೆ ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ.
ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ನಿಮಗೆ ಖಂಡಿತವಾಗಿ ಕಂತಿನ ಹಣ ಬರುತ್ತದೆ. ಒಂದು ವೇಳೆ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ, ಕೂಡಲೇ ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ. ಇಲ್ಲವೇ, ಪಿಎಂ ಕಿಸಾನ್ ಪೋರ್ಟಲ್‌ನ ‘ಕುಂದುಕೊರತೆ ವಿಭಾಗ’ (Grievance Cell) ದಲ್ಲಿ ದೂರು ದಾಖಲಿಸಬಹುದು.
ಈ ಕೇಳಗಿನ ಸುದ್ದಿಗಳನ್ನು ಓದಿ: