BESCOM Recruitment 2026: ಬೆಸ್ಕಾಂನಲ್ಲಿ ಉದ್ಯೋಗವಕಾಶ, ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

ನೀವು ಪದವಿ ಅಥವಾ ಡಿಪ್ಲೊಮಾ ಮುಗಿಸಿ, ಒಳ್ಳೆಯ ಟ್ರೈನಿಂಗ್ ಮತ್ತು ಅನುಭವಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ದರೆ ವಿದ್ಯುತ್ ಇಲಾಖೆಯಲ್ಲಿ (BESCOM Recruitment 2026) ಕೆಲಸ ಕಲಿಯುವ ಸುವರ್ಣಾವಕಾಶ ನಿಮಗಾಗಿ ಕಾಯುತ್ತಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) 2026 ನೇ ಸಾಲಿನ ಅಪ್ರೆಂಟಿಸ್ (Apprentice) ತರಬೇತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಬರೋಬ್ಬರಿ 520 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿಶೇಷವೆಂದರೆ ಕೇವಲ ಎಂಜಿನಿಯರಿಂಗ್ ಅಷ್ಟೇ ಅಲ್ಲ, ಸಾಮಾನ್ಯ ಪದವೀಧರರಿಗೂ (BA, B.Com, B.Sc) ಇಲ್ಲಿ ವಿಫುಲ ಅವಕಾಶಗಳಿವೆ!

ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದ್ದು, ಆಯ್ಕೆಯಾದವರಿಗೆ ಪ್ರತಿ ತಿಂಗಳು ಸರ್ಕಾರದಿಂದಲೇ ಸ್ಟೈಪೆಂಡ್ (ವೇತನ) ಕೂಡ ಸಿಗಲಿದೆ.

BESCOM Recruitment 2026 ಹುದ್ದೆಗಳ ವಿವರ:

ಬೆಸ್ಕಾಂ ಒಟ್ಟು 520 ಹುದ್ದೆಗಳನ್ನು 3 ವಿಭಾಗಗಳಲ್ಲಿ ಹಂಚಿಕೆ ಮಾಡಿದೆ. ಸಾಮಾನ್ಯ ಪದವೀಧರರಿಗೆ ಅತಿ ಹೆಚ್ಚು ಪೋಸ್ಟ್‌ಗಳಿವೆ ಎಂಬುದು ಗುಡ್ ನ್ಯೂಸ್.

ಹುದ್ದೆಯ ಹೆಸರುಹುದ್ದೆಗಳು
ಪದವೀಧರ ಅಪ್ರೆಂಟಿಸ್ (Non-Engineering)315
ಪದವೀಧರ ಅಪ್ರೆಂಟಿಸ್ (Engineering)130
ಡಿಪ್ಲೊಮಾ ಅಪ್ರೆಂಟಿಸ್75
ಒಟ್ಟು ಹುದ್ದೆಗಳು520

ವಿದ್ಯಾರ್ಹತೆ:

ಹುದ್ದೆಯ ಹೆಸರುವಿದ್ಯಾರ್ಹತೆ
ಪದವೀಧರ ಅಪ್ರೆಂಟಿಸ್ (Non-Engineering)BA / B.Sc / B.Com / BBA / BCA / BBM (ಯಾವುದೇ ಪದವಿ)
ಪದವೀಧರ ಅಪ್ರೆಂಟಿಸ್ (Engineering)B.E / B.Tech (Electrical & Electronics – E&E)
ಡಿಪ್ಲೊಮಾ ಅಪ್ರೆಂಟಿಸ್Diploma (All Branches)

ವೇತನ (Stipend):

ಹುದ್ದೆಯ ಹೆಸರುಮಾಸಿಕ ವೇತನ (Stipend)
ಪದವೀಧರ ಅಪ್ರೆಂಟಿಸ್ (Non-Engineering)₹9,008/-
ಪದವೀಧರ ಅಪ್ರೆಂಟಿಸ್ (Engineering)₹9,008/-
ಡಿಪ್ಲೊಮಾ ಅಪ್ರೆಂಟಿಸ್₹8,000/-

ಅರ್ಹತೆಗಳೇನು?:

  1. ಅಭ್ಯರ್ಥಿಗಳು ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಮೇಲೆ ತಿಳಿಸಿದ ಪದವಿ ಅಥವಾ ಡಿಪ್ಲೊಮಾ ಪಾಸ್ ಮಾಡಿರಬೇಕು.
  2. ಮುಖ್ಯ ಗಮನಿಸಿ: 2021 ಅಥವಾ ಅದರ ನಂತರ (2021, 2022, 2023, 2024, 2025) ಪದವಿ/ಡಿಪ್ಲೊಮಾ ಉತ್ತೀರ್ಣರಾದವರು ಮಾತ್ರ ಅರ್ಹರು. (ಹಳೆಯ ಬ್ಯಾಚ್‌ಗಳಿಗೆ ಅವಕಾಶವಿಲ್ಲ).
  3. ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರು ಅಥವಾ ಒಂದು ವರ್ಷಕ್ಕೂ ಹೆಚ್ಚು ಕೆಲಸದ ಅನುಭವ ಇರುವವರು ಅರ್ಜಿ ಸಲ್ಲಿಸುವಂತಿಲ್ಲ.
  4. ಕನ್ನಡ ಭಾಷಾ ಜ್ಞಾನ (ಓದಲು/ಬರೆಯಲು) ಕಡ್ಡಾಯ.

BESCOM Recruitment 2026 ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 12-02-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2026

ಅರ್ಜಿ ಸಲ್ಲಿಸುವುದು ಹೇಗೆ?

  1. ಅಭ್ಯರ್ಥಿಗಳು ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪೋರ್ಟಲ್ (NATS) ನಲ್ಲಿ ಮೊದಲು ಹೆಸರು ನೋಂದಾಯಿಸಿಕೊಂಡಿರಬೇಕು.
  2. ನಂತರ ಬೆಸ್ಕಾಂ ಅಧಿಕೃತ ವೆಬ್‌ಸೈಟ್ ಅಥವಾ ಕೆಳಗೆ ನೀಡಲಾದ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
  3. ನಿಮ್ಮ ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್, ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ಪ್ರಮುಖ ಲಿಂಕ್‌ಗಳು:

  • ಅಧಿಕೃತ ಅಧಿಸೂಚನೆ: ಓದಿ
  • ಆನ್‌ಲೈನ್ ಅರ್ಜಿ ಸಲ್ಲಿಸಲು: bescom.karnataka.gov.in

ಈ ಉಪಯುಕ್ತ ಮಾಹಿತಿಯನ್ನು ಡಿಗ್ರಿ ಮುಗಿಸಿರುವ ನಿಮ್ಮ ಸ್ನೇಹಿತರಿಗೆ ಈಗಲೇ ಶೇರ್ ಮಾಡಿ!

RRB Group D Recruitment 2026

ಅಂಚೆ ಇಲಾಖೆ ನೇಮಕಾತಿ 2026

BOB Recruitment 2026

Telegram Group Join Now
WhatsApp Group Join Now

Leave a Comment