ವ್ಯವಸಾಯ ಅಂದ್ರೆ ಸುಮ್ಮನಲ್ಲ, ಎತ್ತುಗಳನ್ನು ಕಟ್ಟಿ ಉಳುವ ಕಾಲ ಈಗ ಬದಲಾಗಿದೆ. ಆಧುನಿಕ ಕೃಷಿ ಪದ್ಧತಿಯಲ್ಲಿ ಯಂತ್ರೋಪಕರಣಗಳದ್ದೇ ದರ್ಬಾರು. ಆದರೆ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಟ್ರ್ಯಾಕ್ಟರ್ ಖರೀದಿಸುವುದು ಬಡ ರೈತನಿಗೆ ಎಟುಕದ ಕನಸು.
ರೈತರ ಈ ಸಂಕಷ್ಟ ಅರಿತಿರುವ ಸರ್ಕಾರ, ‘ಕಿಸಾನ್ ಟ್ರ್ಯಾಕ್ಟರ್ ಯೋಜನೆ’ (Kisan Tractor Scheme) ಅಡಿ ಬರೋಬ್ಬರಿ ಶೇ.50ರಷ್ಟು ಸಬ್ಸಿಡಿ ನೀಡುತ್ತಿದೆ.
ಹೌದು, ನೀವು ಟ್ರ್ಯಾಕ್ಟರ್ ಖರೀದಿಸಲು ಮುಂದಾಗಿದ್ದರೆ, ಕೇಂದ್ರ ಸರ್ಕಾರವೇ ನಿಮಗೆ ಅರ್ಧ ಹಣವನ್ನು ಸಹಾಯಧನವಾಗಿ ನೀಡಲಿದೆ. ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಅರ್ಹತೆಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ?:
ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ದೇಶದ ಯಾವುದೇ ರೈತ ಹೊಸ ಟ್ರ್ಯಾಕ್ಟರ್ ಖರೀದಿಸುವಾಗ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.
- ಸಹಾಯಧನ ಎಷ್ಟು?: ‘ಕಿಸಾನ್ ಟ್ರ್ಯಾಕ್ಟರ್ ಯೋಜನೆ’ (Kisan Tractor Scheme) ಅಡಿಯಲ್ಲಿ ಶೇ.50 ರಷ್ಟು ಸಹಾಯಧನ ಪಡೆಯಬಹುದು. ಅಂದರೆ, 10 ಲಕ್ಷ ರೂಪಾಯಿ ಬೆಲೆಬಾಳುವ ಟ್ರ್ಯಾಕ್ಟರ್ ನಿಮಗೆ ಕೇವಲ 5 ಲಕ್ಷ ರೂಪಾಯಿಗೆ ಸಿಗಲಿದೆ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು?
ಈ ಯೋಜನೆಯ ಲಾಭ ಪಡೆಯಲು ರೈತರು ಕೆಲವೊಂದು ಮಾನದಂಡಗಳನ್ನು ಪೂರೈಸುವುದು ಕಡ್ಡಾಯ:
- ಜಮೀನು: ರೈತರು ತಮ್ಮ ಹೆಸರಿನಲ್ಲಿ ಕೃಷಿ ಜಮೀನು ಹೊಂದಿರಬೇಕು.
- ವಯೋಮಿತಿ: ಅರ್ಜಿ ಸಲ್ಲಿಸುವ ರೈತರಿಗೆ 18 ರಿಂದ 60 ವರ್ಷ ವಯಸ್ಸಾಗಿರಬೇಕು.
- ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ. ಮೀರಬಾರದು.
- ಹೊಸಬರಿಗೆ ಅವಕಾಶ: ಕಳೆದ 7 ವರ್ಷಗಳಲ್ಲಿ ರೈತರು ಯಾವುದೇ ರೀತಿಯ ಕೃಷಿ ಯಂತ್ರೋಪಕರಣಗಳ ಸಬ್ಸಿಡಿ ಪಡೆದಿರಬಾರದು.
- ಒಬ್ಬರಿಗೆ ಮಾತ್ರ: ಒಂದು ಕುಟುಂಬದಲ್ಲಿ ಒಬ್ಬ ರೈತರಿಗೆ ಮಾತ್ರ ಟ್ರ್ಯಾಕ್ಟರ್ ಸಬ್ಸಿಡಿ ಸಿಗಲಿದೆ.
ಬೇಕಾಗುವ ಪ್ರಮುಖ ದಾಖಲೆಗಳು:
ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ:
- ರೈತನ ಆಧಾರ್ ಕಾರ್ಡ್
- Fruits ID
- ಜಮೀನಿನ ಪಹಣಿ (RTC)
- ಬ್ಯಾಂಕ್ ಖಾತೆ ಪಾಸ್ಬುಕ್ (ಆಧಾರ್ ಲಿಂಕ್ ಆಗಿರಬೇಕು)
- ಮೊಬೈಲ್ ಸಂಖ್ಯೆ
- ಪಾಸ್ಪೋರ್ಟ್ ಅಳತೆಯ ಫೋಟೋ
- ಟ್ರ್ಯಾಕ್ಟರ್ ಖರೀದಿ ಕೊಟೇಶನ್
- ಜಾತಿ ಪ್ರಮಾಣ ಪತ್ರ
- ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
ರೈತರು ಆನ್ಲೈನ್ ಅಥವಾ ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ (Online):
- ಕೇಂದ್ರ ಸರ್ಕಾರದ ಪೋರ್ಟಲ್: ಕೇಂದ್ರದ ಅಧಿಕೃತ ವೆಬ್ಸೈಟ್
https://agrimachinery.nic.in/ಗೆ ಭೇಟಿ ನೀಡಿ, ಅಲ್ಲಿ ‘Registration’ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. - ರಾಜ್ಯ ಸರ್ಕಾರದ ಪೋರ್ಟಲ್: ಕರ್ನಾಟಕದ ರೈತರು ರಾಜ್ಯ ಕೃಷಿ ಇಲಾಖೆಯ
https://kkisan.karnataka.gov.inವೆಬ್ಸೈಟ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು.
2. ಆಫ್ಲೈನ್ ಮೂಲಕ (Offline): ಆನ್ಲೈನ್ ಬಗ್ಗೆ ಗೊತ್ತಿಲ್ಲದಿದ್ದವರು ನೇರವಾಗಿ ನಿಮ್ಮ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ. ಅಲ್ಲಿ ಅರ್ಜಿ ಫಾರಂ ಪಡೆದು, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ.
ಇತರೆ ಮಾಹಿತಿಗಳನ್ನು ಓದಿ:
ಕುರಿ ಸಾಕಾಣಿಕೆಗೆ ಸರ್ಕಾರದಿಂದ ₹1.75 ಲಕ್ಷ ರೂ.: ₹43,750 ಉಚಿತ ಸಹಾಯಧನ