Indira Kit Scheme: ಬಿಪಿಎಲ್ ಕಾರ್ಡ್‌ದಾರರೇ ಸಿಹಿ ಸುದ್ದಿ: ಅಕ್ಕಿ ಬದಲು ಬರಲಿದೆ ‘ಇಂದಿರಾ ಕಿಟ್’; ಎಣ್ಣೆ, ಬೇಳೆ, ಸಕ್ಕರೆ ಉಚಿತ!

Telegram Group Join Now
WhatsApp Group Join Now

ರಾಜ್ಯದ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಮಹತ್ವದ ಸಿಹಿ ಸುದ್ದಿಯೊಂದನ್ನು ನೀಡಿದೆ. ಅನ್ನಭಾಗ್ಯ ಯೋಜನೆಯಡಿ ಇದುವರೆಗೆ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ, ಇನ್ಮುಂದೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನೊಳಗೊಂಡ ‘ಇಂದಿರಾ ಕಿಟ್’ (Indira Kit Scheme) ನೀಡಲು ಸರ್ಕಾರ ನಿರ್ಧರಿಸಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಈ ಮಹತ್ವದ ಬದಲಾವಣೆಯನ್ನು ಘೋಷಿಸಿದ್ದು, “ಜನರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಅಕ್ಕಿಯ ಸದುಪಯೋಗಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಪಡಿತರ ಅಂಗಡಿಗಳ ಮೂಲಕ ಈ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.

Indira Kit Scheme ಯಾವಾಗಲಿಂದ ಜಾರಿ?

ಸಚಿವರು ನೀಡಿರುವ ಮಾಹಿತಿಯ ಪ್ರಕಾರ, ಇದೇ ಜನವರಿ ತಿಂಗಳ ಅಂತ್ಯದಿಂದ ಅಥವಾ ಫೆಬ್ರವರಿ ತಿಂಗಳಿಂದ ಈ ಹೊಸ ಕಿಟ್ ವಿತರಣೆ ಆರಂಭವಾಗುವ ಸಾಧ್ಯತೆ ಇದೆ.

ಏನಿದು ‘ಇಂದಿರಾ ಕಿಟ್’?:

ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ, ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳಿರುವ ‘ಇಂದಿರಾ ಕಿಟ್’ ನೀಡಲು ಸರ್ಕಾರ ನಿರ್ಧರಿಸಿದೆ.

  • ಕಿಟ್‌ನಲ್ಲಿ ಏನಿರುತ್ತೆ?: ತೊಗರಿ ಬೇಳೆ 1 ಕೆ.ಜಿ, ಹೆಸರು ಕಾಳು 1 ಕೆ.ಜಿ, ಸಕ್ಕರೆ 1 ಕೆ.ಜಿ, ಅಡುಗೆ ಎಣ್ಣೆ 1 ಲೀಟರ್ ಮತ್ತು ಉಪ್ಪು 1 ಕೆ.ಜಿ.
  • ಯಾವಾಗಲಿಂದ?: ಜನವರಿ ಅಂತ್ಯ ಅಥವಾ ಫೆಬ್ರವರಿ ತಿಂಗಳಿಂದ ವಿತರಣೆ ಆರಂಭವಾಗುವ ಸಾಧ್ಯತೆ ಇದೆ.
  • ಯಾರಿಗೆ ಲಾಭ?: ರಾಜ್ಯದ ಸುಮಾರು 1.5 ಲಕ್ಷ ಕಾರ್ಡ್‌ಗಳ ವ್ಯಾಪ್ತಿಯಲ್ಲಿರುವ 4.50 ಕೋಟಿ ಜನರಿಗೆ ಇದರಿಂದ ಅನುಕೂಲವಾಗಲಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಇಂದಿರಾ ಕಿಟ್ ವಿತರಣೆ
  • ಉದ್ದೇಶ: ಜನರ ಆರೋಗ್ಯ ದೃಷ್ಟಿಯಿಂದ ಮತ್ತು ಅಕ್ಕಿಯ ಸದುಪಯೋಗಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಪಡಿತರ ಅಂಗಡಿಗಳ ಮೂಲಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.

ಬಜೆಟ್ ಲೆಕ್ಕಾಚಾರ ಮತ್ತು ಲಾಭ:

ಈ ಹಿಂದೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಲು ಬಜೆಟ್‌ನಲ್ಲಿ ₹6,426 ಕೋಟಿ ಅನುದಾನ ಮೀಸಲಿಡಲಾಗಿತ್ತು. ಇದೀಗ ಅಕ್ಕಿಯ ಬದಲಾಗಿ ಕಿಟ್ ನೀಡುತ್ತಿರುವುದರಿಂದ, ಇದರಲ್ಲಿ ₹6,119.52 ಕೋಟಿ ವೆಚ್ಚದಲ್ಲಿ ಇಂದಿರಾ ಆಹಾರ ಕಿಟ್ ಒದಗಿಸಲು ಬಜೆಟ್ ಮರು ಹಂಚಿಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ರಾಜ್ಯದ ಸುಮಾರು 1.5 ಲಕ್ಷಕ್ಕೂ ಅಧಿಕ (ಅಂದಾಜು) ಕಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಬರೋಬ್ಬರಿ 4.50 ಕೋಟಿ ಜನರಿಗೆ ನೇರ ಲಾಭವಾಗಲಿದೆ.

ರೈತರಿಗೂ ಅನುಕೂಲ:

ಇದೇ ವೇಳೆ ಮಾತನಾಡಿದ ಸಚಿವರು, “ತೊಗರಿ ಕಣಜ ಎಂದೇ ಕರೆಯಲ್ಪಡುವ ಕಲಬುರಗಿ ಭಾಗದ ಸ್ಥಳೀಯ ರೈತರಿಂದಲೇ ಕಿಟ್‌ಗೆ ಅಗತ್ಯವಿರುವ ತೊಗರಿ ಬೇಳೆಯನ್ನು ಖರೀದಿಸಲು ಆದ್ಯತೆ ನೀಡುವಂತೆ ಸಚಿವ ಶರಣಪ್ರಕಾಶ ಪಾಟೀಲ್ ಸಲಹೆ ನೀಡಿದ್ದಾರೆ. ರೈತರ ಹಿತದೃಷ್ಟಿಯಿಂದ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು,” ಎಂದು ಭರವಸೆ ನೀಡಿದರು.

ಒಟ್ಟಿನಲ್ಲಿ, ಕೇವಲ ಕಾರ್ಬೋಹೈಡ್ರೇಟ್ ಇರುವ ಅಕ್ಕಿಯ ಬದಲಿಗೆ, ಪ್ರೋಟೀನ್ ಯುಕ್ತ ಬೇಳೆಕಾಳು ಮತ್ತು ಎಣ್ಣೆ ಸಿಗುತ್ತಿರುವುದು ಬಡವರ ಪಾಲಿಗೆ ನಿಜಕ್ಕೂ ವರದಾನವಾಗಲಿದೆ.

ರೈತರಿಗೆ ಮೇವಿನ ಕಿರು ಪೊಟ್ಟಣಗಳ ವಿತರಣೆ

ಕುರಿ ಸಾಕಾಣಿಕೆಗೆ ಸರ್ಕಾರದಿಂದ ₹1.75 ಲಕ್ಷ ರೂ.: ₹43,750 ಉಚಿತ ಸಹಾಯಧನ

Telegram Group Join Now
WhatsApp Group Join Now

Leave a Comment