ಬೆಂಗಳೂರು ಮೆಟ್ರೋದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹2 ಲಕ್ಷದವರೆಗೆ ವೇತನ, ಅರ್ಜಿ ಸಲ್ಲಿಸಲು ಜ.15 ಕೊನೆಯ ದಿನ!

Telegram Group Join Now
WhatsApp Group Join Now

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಇಂಜಿನಿಯರಿಂಗ್ ಪದವೀಧರರಿಗೆ “ನಮ್ಮ ಮೆಟ್ರೋ” (BMRCL) ಸಿಹಿ ಸುದ್ದಿಯೊಂದನ್ನು ನೀಡಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಖಾಲಿ ಇರುವ ವಿವಿಧ ವಿಭಾಗಗಳ ಜನರಲ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 2026ರ ಆರಂಭದಲ್ಲೇ ಪ್ರತಿಷ್ಠಿತ ಮೆಟ್ರೋ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ.

ಈ ನೇಮಕಾತಿಯಲ್ಲಿ ಒಟ್ಟು 7 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಜನರಲ್ ಮ್ಯಾನೇಜರ್ (ಸಿಗ್ನಲಿಂಗ್/ಟೆಲಿಕಾಂ, ಆಪರೇಷನ್) ಮತ್ತು ಡೆಪ್ಯೂಟಿ ಜನರಲ್ ಮ್ಯಾನೇಜರ್ (ಸುರಕ್ಷತೆ, ಸ್ಟೋರ್ಸ್, ಪಿ-ವೇ ಇತ್ಯಾದಿ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ವಿಶೇಷವೆಂದರೆ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ತಿಂಗಳಿಗೆ ಬರೋಬ್ಬರಿ ₹1,64,000 ದಿಂದ ₹2,06,250 ರವರೆಗೆ ಅತ್ಯಂತ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಅರ್ಹತೆ ಮತ್ತು ವಯೋಮಿತಿಗಳೇನು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಅಥವಾ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಇ (BE) ಅಥವಾ ಬಿ.ಟೆಕ್ (B.Tech) ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿಗೆ ಸಂಬಂಧಿಸಿದಂತೆ, ಜನರಲ್ ಮ್ಯಾನೇಜರ್ ಹುದ್ದೆಗೆ ಗರಿಷ್ಠ 55 ವರ್ಷ ಹಾಗೂ ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಗರಿಷ್ಠ 48 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 2026ರ ಜನವರಿ 15 ಕೊನೆಯ ದಿನಾಂಕವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ಅದರ ಪ್ರಿಂಟ್ ಔಟ್ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜನವರಿ 20, 2026ರ ಒಳಗಾಗಿ “ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, 3ನೇ ಮಹಡಿ, BMTC ಕಾಂಪ್ಲೆಕ್ಸ್, ಶಾಂತಿನಗರ, ಬೆಂಗಳೂರು-560027” ಎಂಬ ವಿಳಾಸಕ್ಕೆ ತಲುಪಿಸಬೇಕು.

ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ವೆಬ್‌ಸೈಟ್ bmrc.co.in ಗೆ ಭೇಟಿ ನೀಡಬಹುದು.

ಅಂಗನವಾಡಿ ನೇಮಕಾತಿ 2025-26: 10ನೇ, 12ನೇ ತರಗತಿ ಪಾಸಾದವರಿಂದ ಅರ್ಜಿ ಆಹ್ವಾನ

ತುಮಕೂರು ಅಂಗನವಾಡಿ ನೇಮಕಾತಿ 2025

Telegram Group Join Now
WhatsApp Group Join Now

Leave a Comment