ಅಂಗನವಾಡಿ ನೇಮಕಾತಿ 2025-26: 10ನೇ, 12ನೇ ತರಗತಿ ಪಾಸಾದವರಿಂದ ಅರ್ಜಿ ಆಹ್ವಾನ

Telegram Group Join Now
WhatsApp Group Join Now

ರಾಯಚೂರು ಜಿಲ್ಲೆಯ ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (WCD) ರಾಯಚೂರು ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 340 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಮುಖ್ಯಾಂಶಗಳು

ವಿವರಮಾಹಿತಿ
ಇಲಾಖೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD), ರಾಯಚೂರು
ಹುದ್ದೆಯ ಹೆಸರುಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ
ಒಟ್ಟು ಹುದ್ದೆಗಳು340
ಉದ್ಯೋಗ ಸ್ಥಳರಾಯಚೂರು ಜಿಲ್ಲೆ
ಅಧಿಕೃತ ವೆಬ್‌ಸೈಟ್karnemakaone.kar.nic.in

ತಾಲೂಕುವಾರು ಹುದ್ದೆಗಳ ವಿವರ:

ರಾಯಚೂರು ಜಿಲ್ಲೆಯ ವಿವಿಧ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿದೆ:

ಯೋಜನೆಯ ಹೆಸರುಕಾರ್ಯಕರ್ತೆ ಹುದ್ದೆಗಳುಸಹಾಯಕಿ ಹುದ್ದೆಗಳು
ದೇವದುರ್ಗ2776
ಗಿಲ್ಲೇಸುಗೂರು1329
ಲಿಂಗಸುಗೂರು1763
ಮಾನ್ವಿ0644
ರಾಯಚೂರು0117
ಸಿಂಧನೂರು0107
ಸಿರವಾರ0418
ತುರುವಿಹಾಳ0215
ಒಟ್ಟು71269
ಒಟ್ಟು ಹುದ್ದೆಗಳು340

ಅರ್ಹತಾ ಮಾನದಂಡಗಳು:

1. ಶೈಕ್ಷಣಿಕ ಅರ್ಹತೆ:

  • ಅಂಗನವಾಡಿ ಕಾರ್ಯಕರ್ತೆ: ಅಭ್ಯರ್ಥಿಯು ಪಿಯುಸಿ / 12ನೇ ತರಗತಿ ತೇರ್ಗಡೆಯಾಗಿರಬೇಕು.
  • ಅಂಗನವಾಡಿ ಸಹಾಯಕಿ: ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ / 10ನೇ ತರಗತಿ ತೇರ್ಗಡೆಯಾಗಿರಬೇಕು.

2. ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಹಾಗೂ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. (ಪಿಎಚ್/ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ).

3. ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ (Merit List) ನೇರ ಆಯ್ಕೆ ಮಾಡಲಾಗುವುದು. ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 10-12-2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-01-2026 (ಸಂಜೆ 5:30 ರೊಳಗೆ)

Application Link:
ಮಾರ್ಗಸೂಚಿಗಳು: ಡೌನ್‌ಲೋಡ್
ಅರ್ಜಿ ಸಲ್ಲಿಕೆ ಲಿಂಕ್:‌ Apply ಮಾಡಿ

ಅರ್ಜಿ ಸಲ್ಲಿಸುವುದು ಹೇಗೆ?

  1. ಅಧಿಕೃತ ವೆಬ್‌ಸೈಟ್ karnemakaone.kar.nic.in ಗೆ ಭೇಟಿ ನೀಡಿ.
  2. ಜಿಲ್ಲೆ ಪಟ್ಟಿಯಲ್ಲಿ ‘ರಾಯಚೂರು’ ಎಂದು ಆಯ್ಕೆ ಮಾಡಿ, ನೇಮಕಾತಿ ಅಧಿಸೂಚನೆಯನ್ನು ಓದಿ.
  3. ನಿಮ್ಮ ತಾಲೂಕು ಮತ್ತು ಗ್ರಾಮಕ್ಕೆ ಇರುವ ಹುದ್ದೆಯನ್ನು ಖಚಿತಪಡಿಸಿಕೊಳ್ಳಿ.
  4. ಅಗತ್ಯವಿರುವ ದಾಖಲೆಗಳು (ಅಂಕಪಟ್ಟಿ, ಜನನ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ ಇತ್ಯಾದಿ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  5. ಅರ್ಜಿಯನ್ನು ಸಲ್ಲಿಸಿ (Submit), ಸ್ವೀಕೃತಿ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಿ.

KVS Recruitment 2025: ಬೋಧಕ-ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ!

ತುಮಕೂರು ಅಂಗನವಾಡಿ ನೇಮಕಾತಿ 2025

Telegram Group Join Now
WhatsApp Group Join Now

Leave a Comment